ದೇವಲದಕೆರೆಯಿಂದ ಹೊಡಚಹಳ್ಳಿಗೆ ಹೋಗುವ ರಸ್ತೆಯನ್ನು ಡಾಮರೀಕರಣ ಮಾಡುವಂತೆ ಸ್ಥಳೀಯರು ಆಗ್ರಹ

0

ದೇವಲದಕೆರೆಯಿಂದ ಹೊಡಚಹಳ್ಳಿಗೆ ಹೋಗುವ ರಸ್ತೆಯನ್ನು ಡಾಮರೀಕರಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ರಸ್ತೆಗೆ ಡಾಂಬರಿಕರಣ ಮಾಡಿ ಈಗಾಗಲೆ 22 ವರ್ಷಗಳು ಕಳೆದಿವೆ. ಬಹಳಷ್ಟು ವರ್ಷಗಳಿಂದ ಡಾಮರಿಕರಣವಾಗದಿದ್ದುದರಿಂದಾಗಿ ಈ ರಸ್ತೆಯಲ್ಲಿ ವಾಹನ ಕೂಡಾ ಹೋಗಲು ಸಮಸ್ಯೆಯಾಗಿದೆ. ರಸ್ತೆ ಎಲ್ಲಾ ಕಡೆ ಗುಂಡಿಗಳಿಂದ ತುಂಬಿ ಹೋಗಿದೆ. ಈ ರಸ್ತೆಯನ್ನು ಮರು ಡಾಮರೀಕರಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರಿಗೆ ಮನವಿ ಪತ್ರವನ್ನು ಗ್ರಾಮಸ್ಥರು ಈಗಾಗಲೇ ನೀಡಿರುತ್ತಾರೆ.

ಸಕಲೇಶಪುರ ಪ್ರವಾಸಿ ತಾಣ. ಇದನ್ನು ಕರ್ನಾಟಕದ ಕಾಶ್ಮೀರವೆಂದು ಸಹ ಕರೆಯುತ್ತಾರೆ. ಈ ರಸ್ತೆಯಲ್ಲಿ ದೇವಲಕೆರೆಯಿಂದ ಹೊಡಚಹಳ್ಳಿಗೆ ಹಾದು ಹೋಗುವಾಗ ಮುಜರಾಯಿ ಇಲಾಖೆಗೆ ಸೇರಿದ ಬೆಟ್ಟದ ಬೈರವೇಶ್ವರ ದೇವಸ್ಥಾನವು ಕೂಡ ಇದೆ.

ಇದರ ಪರಿಸ್ಥ್ಥಿತಿಯನ್ನು ಒಮ್ಮೆ ಪ್ರವಾಸೋಧ್ಯಮ ಇಲಾಖೆ ಬಂದು ನೋಡಬೇಕು. ಅಲ್ಲಲ್ಲಿ ಕುಡಿದು ಬಿಸಾಡಿರುವ ಬಾಟಲಿಗಳು, ಪ್ಲಾಸ್ಟಿಕ್ ಬಟ್ಟೆಗಳು ಕಾಣಸಿಗುತ್ತವೆ. ಒಂದು ಬಾರಿ ಪರಿಸರ ಪ್ರೇಮಿ ಇತಿಹಾಸ್ ಮತ್ತು ಎಂ.ಕೆ.ಮೋಹನ್ ಸೇರಿ ಸ್ವಚ್ಚಗೊಳಿಸಿದ್ದರು, ಆದರೆ ಗ್ರಾಮ ಪಂಚಾಯತ್‌ನವರು ಇತ್ತ ಕಡೆ ತಲೆ ಹಾಕದಿರುವುದು ಶೋಚನೀಯ ಸಂಗತಿ.

ಈ ದೇವಸ್ಥಾನದ ಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದು ಬಹಳಷ್ಟು ಮಂದಿ ಸ್ಟೇಟಸ್‌ನಲ್ಲಿ ಹಾಕಿ ಕೊಳ್ಳುತ್ತಾರೆ. ಆದರೆ ಈ ದೇವಾಲಯದ ಸಮೀಪ ಹೋದರೆ ಮಾತ್ರ ಇಲ್ಲಿರುವ ದಟ್ಟ ಸಮಸ್ಯೆಗಳ ಅರಿವಾಗುತ್ತದೆ .

ಇನ್ನಾದರೂ ಪ್ರವಾಸೋದ್ಯಮದ ಉನ್ನತೀಕರಣ ಹಾಗೂ ಸುಗಮ ರಸ್ತೆ ಸಂಚಾರಕ್ಕೆ ಇಲ್ಲಿ ಉತ್ಕೃಷ್ಟ ಗುಣಮಟ್ಟದ ರಸ್ತೆ ನಿರ್ಮಾಣ ವಾಗಬೇಕಿದೆ .

LEAVE A REPLY

Please enter your comment!
Please enter your name here