ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಬರೋಬ್ಬರಿ 3 ಲಕ್ಷ ಕಳವು ಆದ ಘಟನೆ ನಡೆದಿದೆ
ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬ್ಯಾಂಕ್‌ನಲ್ಲಿ 3ಲಕ್ಷ ರೂ. ಡ್ರಾ ಮಾಡಿಕೊಂಡು ಬೈಕ್‌ನ ಡಿಕ್ಕಿಯೊಳಗೆ ಇಟ್ಟಿದ್ದು, ಪತ್ನಿಯನ್ನು ಕರೆದುಕೊಂಡು ವಾಪಸ್ ಬಂದು ನೋಡುವಷ್ಟರಲ್ಲಿ ಹಣ ಕಳವು ಮಾಡಿರುವ ಘಟನೆ ವರದಿಯಾಗಿದೆ. ಚನ್ನರಾಯಪಟ್ಟಣದ ಬಾಗೂರು ರಸ್ತೆ, ಶಾಂತಿನಗರ ನಿವಾಸಿ ಲೋಕೇಶ್ ಎಂಬುವವರೇ ಹಣ ಕಳೆದುಕೊಂಡವರು. ಈ ಸಂಬಂಧ ಜುಲೈ.4 ರಂದು ಮಧ್ಯಾಹ್ನ ದೂರು ದಾಖಲಾಗಿದ್ದು, ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ತನಿಖೆ ಹಂತದಲ್ಲಿದೆ .