ನವೆಂಬರ್ 17 ರಿಂದ ಕಾಲೇಜುಗಳ ಆರಂಭಕ್ಕೆ ದಿನಾಂಕ ಫಿಕ್ಸ್

0

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಬಂದ್ ಮಾಡಲಾಗಿದ್ದ ಪದವಿ ಕಾಲೇಜು ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಆದರೆ ಪಿಯು ಕಾಲೇಜು ಸದ್ಯಕ್ಕೆ ಆರಂಭ ಇಲ್ಲ ಎಂದು ಹೇಳಲಾಗುತ್ತಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನವೆಂಬರ್ 17ರಿಂದ ಎಲ್ಲಾ ಪದವಿ ಕಾಲೇಜುಗಳನ್ನು ಆರಂಭ ಮಾಡುವಂತೆ ತೀರ್ಮಾನಿಸಲಾಯಿತು. ಆದರೆ ಸಭೆಯಲ್ಲಿ ಪಿಯು ಕಾಲೇಜು ಆರಂಭದ ಬಗ್ಗೆ ಚರ್ಚೆಯಾಗಿಲ್ಲ.

ಪೋಷಕರ ಅನುಮತಿ ಕಡ್ಡಾಯ, ಯಾರಿಗೂ ಒತ್ತಡ ಮಾಡುವ ಹಾಗಿಲ್ಲ. ಆನ್ ಲೈನ್ ಹಾಗೂ ಆಫ್ ಲೈನ್ ಎರಡಲ್ಲೂ ತರಗತಿ ನಡೆಯುತ್ತದೆ. ದೀಪಾವಳಿ ನಂತರ ಕಾಲೇಜು ಪ್ರಾರಂಭ ಅಂತ ಪಬ್ಲಿಕ್ ಟಿವಿ ಮೊದಲೇ ವರದಿ ಮಾಡಿತ್ತು. ಈ ವರದಿ ನಿಜವಾಗಿದ್ದು, ದೀಪಾವಳಿ ಬಳಿಕ ರಾಜ್ಯದಲ್ಲಿ ಪದವಿ ಕಾಲೇಜು ಪ್ರಾರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿ @BSYBJP ಅವರ ನೇತೃತ್ವದಲ್ಲಿ ಕಾಲೇಜು ಆರಂಭದ ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕಾಲೇಜುಗಳ ಪುನರಾರಂಭ ಕುರಿತು ಎಲ್ಲ ಇಲಾಖೆಗಳ ಜತೆ ಚರ್ಚಿಸಲಾಗಿದೆ.

ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಆಯ್ಕೆ ಇರಲಿದ್ದು, ಆನ್ಲೈನ್ ಹಾಗೂ ಕ್ಲಾಸ್ ರೂಂ ತರಗತಿಗಳು ಸಂಯೋಜಿತವಾಗಿ ಇರಲಿವೆ. ಕ್ಲಾಸ್ ರೂಂಗೆ ಬರಬೇಕಾದರೆ ಪೋಷಕರಿಂದ ಪರವಾನಗಿ ಪತ್ರ ತರಬೇಕು. ಪ್ರಾಕ್ಟಿಕಲ್ ತರಗತಿಗಳ ಆರಂಭಕ್ಕೆ ಮೊದಲ ಆದ್ಯತೆ ನೀಡಲಾಗುವುದು.

UGC ಯ #COVID19 ಮಾರ್ಗಸೂಚಿಯ ಅನುಗುಣವಾಗಿ
ಎಲ್ಲಾ ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗುವುದು. ಎಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಹಾಗೂ ಪ್ರತಿ ಕಾಲೇಜಿನಲ್ಲಿ ಇದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗುವುದು.
ಎಂದು ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here