ಕೋವಿಡ್ ಗೆ ಸಂಬಂದಿಸಿದ ಇಂಜೆಕ್ಷನ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅನ್ವಯ ಪೊಲೀಸ್ ಅಧಿಕಾರಿಗಳ ದಿಡೀರ್ ಪರಿಶೀಲನೆ : ಹಾಸನ/ಅರಕಲಗೂಡು

0

ಅರಕಲಗೂಡು : ಕೋವಿಡ್ ಗೆ ಸಂಬಂದಿಸಿದ ಇಂಜೆಕ್ಷನ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು  ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ವಯ ಅರಕಲಗೂಡು ಪೊಲೀಸರು ಇಂದು  ಪಟ್ಟಣದ ಏಳು  ಮೆಡಿಕಲ್ ಶಾಪ್ ಗಳಲ್ಲಿ ಔಷಧಿಗಳ  ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಸತ್ಯನಾರಾಯಣ, ಕೋವಿಡ್ -19 ಸಂಬಂದಿಸಿದ ಇಂಜೆಕ್ಷನ್ ಗಳು ಸರ್ಕಾರಿ ಆಸ್ಪತ್ರೆಯಲ್ಲಿಯೇ ಕೊರತೆ‌ ಇದೆ. ಆದರೂ ಪಟ್ಟಣದ ಮೆಡಿಕಲ್ ಶಾಪ್ ಗಳಲ್ಲಿ

ಇಂಜೆಕ್ಷನ್ ಹಾಗೂ ಇತರೆ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಆಗುತ್ತಿರಬಹುದು ಎಂಬ ಸಂಖ್ಯೆ ಮೇಲೆ ಔಷಧಿ ಅಂಗಡಿಗಳನ್ನು ಪರಿಶೀಲಿಸಲಾಯಿತು ಆದರೆ ಈ ಸಂದರ್ಭದಲ್ಲಿ  ಯಾವುದೇ ಕೋವಿಡ್ ಇಂಜೆಕ್ಷನ್ ಮೆಡಿಕಲ್ಸ್ ಗಳಲ್ಲಿ ಸಿಕ್ಕಿಲ್ಲ  ಎಂದರು.

ಆದರೆ ನಾವು ಕೋವಿಡ್ ನ ಸಂಬಂಧಿಸಿದ ವಿಷಯಗಳ ಬಗ್ಗೆ ಎಚ್ಚತ್ತುಕೊಳ್ಳಬೇಕು , ಯಾವುದೆಡ ಕಾರಣಕ್ಕೆ  ಬಡವರಿಗೆ , ರೋಗಿಗಳಿಗೆ ತಲುಪ ಬೇಕಾದ ಔಷಧಗಳಲ್ಲಿ ಅನ್ಯಾಯ ಆಗಬಾರದು ಎಂದರು

LEAVE A REPLY

Please enter your comment!
Please enter your name here