ಆಲೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ.
ನಂತರ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ ಹಾಸಿಗೆಗಳ ಲಭ್ಯತೆ, ಆಕ್ಸಿಜನ್ ಮತ್ತು ಮೆಡಿಸಿನ್ ಗಳ ಸಮರ್ಪಕ ಪೂರೈಕೆ,
ಆಂಬುಲೆನ್ಸ್ ವ್ಯವಸ್ಥೆ, RTPCR ಟೆಸ್ಟ್ ಬಗ್ಗೆ, ಕೋವಿಡ್ ವಾರ್ ರೂಮ್ ಕಾರ್ಯನಿರ್ವಹಿಸುವ ಬಗ್ಗೆ ಹಾಗೂ ಇನ್ನಿತರ ಕುಂದು ಕೊರತೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು
ಸಭೆಯಲ್ಲಿ ತಹಶೀಲ್ದಾರ್ ಶಿರೀನ್ ತಾಜ್ ರವರು, ಎಸಿ ಗಿರೀಶ್ ನಂದನ್ ರವರು, ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
@iprajwalrevanna #covidupdateshassan