ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯತಿಯ ಬ್ಯಾಗಡಹಳ್ಳಿ ಗ್ರಾಮದ ಸುನಿಲ್ ಕುಮಾರ್ ಎಂಬವರನ್ನು (ವಯಸ್ಸು 30 ) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಇಲ್ಲಿನ ಎಂ ಎಸ್ ಐ ಎಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ
ನಿನ್ನೆ ರಾತ್ರಿ ಈ ಘಟನೆ ನಡೆದಿದೆ
ಕೊಲೆಗೆ ಕಾರಣ ತಿಳಿದು ಬಂದಿಲ್ಲ
ಪೊಲೀಸ್ ತನಿಖೆಯ ನಂತರ ತಿಳಿಯಬೇಕಿದೆ.
ವನಗೂರು ನಲ್ಲಿ ನಡೆದ ಸುನಿಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಈರ್ವರನ್ನು ಪೊಲೀಸರು ಅನುಮಾನದ ಮೇಲೆ ಬಂಧಿಸಿದ್ದಾರೆ.
ಸ್ಥಳೀಯರಾದ ಇಬ್ಬರನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.
ಸಂಪೂರ್ಣ ವಿವರ ತನಿಖೆ ಬಳಿಕ ಹೊರ ಬೀಳಲಿದೆ