ಹಳೇಬೀಡು ಪೊಲೀಸರಿಂದ ಇಬ್ಬರ ಬಂಧನ ಚಿನ್ನಾಭರಣ ನಗದು ವಶ

0

ಹಾಸನ: ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದ್ದ ಗ್ರಾನೈಟ್ ಉದ್ಯಮಿ(ರಘು)ಯೊಬ್ಬರ ಮನೆ ದರೋಡೆ ಪ್ರಕರಣ : ಇಬ್ಬರ ಬಂಧನ

• ಬಂಧಿತರಿಂದ 727g ತೂಕದ ಚಿನ್ನಾಭರಣ, 4‌.800KG ಬೆಳ್ಳಿಯ ಪದಾರ್ಥಗಳು 2 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಕಾರು ವಶಕ್ಕೆ

ಮನೆ ಧರೋಡೆ ನಡೆಸಿದವರ ಹಿಡಿಯಲು ಹಾಸನ ಅರಸೀಕೆರೆ ಹಾಗೂ ಹಳೇಬೀಡು ಸೇರಿ 8 ತಂಡಗಳ ರಚನೆ ಪ್ರಕರಣದ ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಲಾಗಿದೆ

ಧರೋಡೆಕೋರರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ??

• ನ. 12 : ಹಳೇಬೀಡು-ಜಾವಗಲ್ ರಸ್ತೆಯ ಮಾಯಗೊಂಡನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಶ್ರಿಕಾಂತ್(CPI) 2 ಕಾರುಗಳನ್ನು ತಡೆದು ದಾಖಲೆ ಕೇಳಿದಾಗ, ತೊದಲುತ್ತ , ಗಾಬರಿಯಲ್ಲಿ ಉತ್ತರ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುವ ಹಾಗೇ ನಡೆದುಕೊಂಡ ಇರ್ವರ ಕೂಡಲೇ ವಶಕ್ಕೆ ಪಡೆದು ಕಾರುಗಳನ್ನು ಪರಿಶೀಲಿಸಿದಾಗ, 2 ಚಿನ್ನದ ಗಟ್ಟಿ, ಮೂರು ಚಿನ್ನದ ಸರ ಮತ್ತು 500 ಮುಖ ಬೆಲೆಯ ನೋಟಿನ ಎರಡು ಕಂತೆ ಪತ್ತೆಯಾಗಿತ್ತಂತೆ…

ಚಿನ್ನ ಬೆಳ್ಳಿ ಗಟ್ಟಿಯನ್ನು ಕೇರಳದ ಮಂಜೇಶ್ವರ ತಾಲ್ಲೂಕಿನ ಉಪ್ಪಳಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದುಬಂದಿದೆ .

ಇವರೇ ಹಾಸನ ನಗರದ ಮನೆಯೊಂದರ ಕಳ್ಳರು ತಿಳಿದಿದ್ದೇ ರೋಚಕ ??

ಇವರ ಬಳಿ ಇದ್ದ ಮಾಲು ಪಕ್ಕಾ ಕದ್ದ ಮಾಲು ಎಂದು ಗೊತ್ತಾದ ಮೇಲೆ ,  ತನಿಖೆ ತೀವ್ರಗೊಳಿಸಿ : ಹಾಸನ ನಗರದ ಗ್ರಾನೈಟ್ ಉದ್ಯಮಿ ರಘು ಎಂಬುವವರ ಮನೆಯಲ್ಲಿ ಕಳೆದ ಸೆ. 7ರ ರಾತ್ರಿ ವಜ್ರ ಸೇರಿದಂತೆ ಸುಮಾರು 2 ಕೆ.ಜಿ ಚಿನ್ನಾಭರಣ, 5 ಕೆ.ಜಿ ಬೆಳ್ಳಿ ಮತ್ತು 24 ಲಕ್ಷ ನಗದು ಕಳ್ಳತನವಾದ್ದ ಕೇಸ್ ಕೆದಕಿ ಪರಿಶೀಲಿಸಿದಾಗ. ಒಟ್ಟು ನಾಲ್ವರು ಯೋಜನೆ ರೂಪಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದು. ಘಟನೆ ನಡೆದ ವೇಳೆ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕಳ್ಳರ ಹಿಡಿಯಲು ಹೆಚ್ಚುವರಿ ಪ್ಲಾನ್ ಮಾಡಲಾಗಿತ್ತು ’ಅದೃಷ್ಟವಶಾತ್ ಈ ರೀತಿ ಸಿಗುತ್ತಾರೆ ಎಂದು ಊಹಿಸಿರಲಿಲ್ಲ , ಆದರೆ ತನಿಖೆ ಮುಂದುವರೆಯಲಿದ್ದು ಇನ್ನಿಬ್ಬ ಖದೀಮರು ಸಿಕ್ಕಮೇಲೆ ಇವರ ಹಿನ್ನಲೆ ತೀವ್ರ ವಿಚಾರಣೆ ನಡೆಸುವ ಸಾಧ್ಯತೆ ಇದೆ

– ಹಾಸನ ಜಿಲ್ಲಾ ಪೊಲೀಸ್

#crimedairyhassan #hassan #hassannews #hassansp #hassanpolice

LEAVE A REPLY

Please enter your comment!
Please enter your name here