ಹಾಡು ಹಗಲೇ ಹಾಸನದಲ್ಲಿ ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ಕಳವು

0

ಹಾಸನ: ಕಾರಿನ ಒಳಗೆ ಇಟ್ಟಿದ 5 ಲಕ್ಷ ₹ ಹಣ ಕಳ್ಳತನ ಮಾಡಿ ಪರಾರಿಯಾದ ಕ್ರೈಂ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದ್ದಯ

ನಗರದ ಹೊರವಲಯದ ಬಿ.ಕಾಟಿಹಳ್ಳಿ ಕೊಪ್ಪಲು ನಿವಾಸಿ ಪುನಿತ್‌ಕುಮಾರ್‌ K.H. ಎಂಬುವವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರದಲ್ಲಿ ಒಂದೂವರೆ ಎಕರೆ ಜಮೀನು ಕೊಳ್ಳಲು ಕಳೆದ ಡಿ. 7ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹಾಸನ ನಗರದ BM ರಸ್ತೆಯಲ್ಲಿರುವ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ  5 ಲಕ್ಷ ₹ ಹಣ ವಿಥ್ ಡ್ರಾ ಮಾಡಿ ತಮ್ಮ ಇನೋವಾ ಕಾರಿನಲ್ಲಿ ಇಟ್ಟಿದ್ದರಂತೆ !,

ಹಣವನ್ನು ಕಾರಿನಲ್ಲೇ ಬಿಟ್ಟು ನಂತರ ಉದಯಗಿರಿಯಲ್ಲಿರುವ ತಮ್ಮ ಮಾವ ಲಕ್ಷ್ಮೇಗೌಡರ ಮನೆಗೆ ತೆರಳಿದ್ದ ಮಟಮಟ ಮಧ್ಯಾಹ್ನ 12.50 ಸುಮಾರಿಗೆ ಕಾರಿನ ಹತ್ತಿರ ಬಂದು ನೋಡಿದಾಗ ಕಾರಿನ ಮುಂಭಾಗದ ಎಡಬದಿಯ ಗಾಜು ಪುಡಿವಪುಡಿಯಾಗಿರೋದ ಕಂಡು ತನ್ನ ಹಣ ಕಳವು ಮಾಡಿರುವುದು ತಿಳಿದು ದಿಗ್ಬ್ರಮೆಗೊಂಡ ಮಾಲೀಕ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ‌ ದೂರು ನೀಡಿದ್ದು ., ಪ್ರಕರಣ ತನಿಖಾ ಹಂತದಲ್ಲಿದೆ .

LEAVE A REPLY

Please enter your comment!
Please enter your name here