ಗೂಗಲ್ ಸರ್ಚ್ ನಲ್ಲಿ ಈ ಬಾರಿ ಅತಿಹೆಚ್ಚು ಟ್ರೆಂಡ್ ನಲ್ಲಿದ್ದ ಹಾಸನದವರ ವಿಷಯಗಳು

0

ನವದೆಹಲಿ/ಹಾಸನ (ಡಿ. 10): ಮೊಬೈಲ್‌, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳೇ ರಾಜ್ಯಭಾರ ಮಾಡುತ್ತಿರುವ ಈ ಆಧುನಿಕ ಯುಗದಲ್ಲಿ ಬಳಕೆದಾರರು ಗೂಗಲ್‌ ಸರ್ಚ್‌ (Google Search) ಮಾಡುವುದು ಸರ್ವೇ ಸಾಮಾನ್ಯ. ಮಕ್ಕಳಾಟಿಕೆಯ ವಸ್ತುವಿನಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನದವರೆಗೂ , ಗೂಗಲ್ ಮ್ಯಾಪಿಂಗ್ ಇತರೆ ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಗೂಗಲ್‌ ನಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ಮೈಕ್ರೋ ಸೆಕೆಂಡ್‌ಗಳಲ್ಲಿ ನಾವು ಸರ್ಚ್‌ ಮಾಡಿದ ವಿಷಯದ ಬಗ್ಗೆ ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯನ್ನು ನೀಡುತ್ತದೆ. ಅತಿ ಹೆಚ್ಚು ಅಂತರ್ಜಾಲ ಬಳಕೆದಾರರು ಇರುವ ಭಾರತದಲ್ಲಿ 2021ರಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಪದಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಗೂಗಲ್ ಬುಧವಾರ ತನ್ನ 2021 ವರ್ಷದ ಸರ್ಚ್ ವರದಿಯನ್ನು (Google Year in Search 2021) ಬಿಡುಗಡೆ ಮಾಡಿದ್ದು, ಭಾರತದಲ್ಲಿ , ಕರ್ನಾಟಕದಲ್ಲಿ , ಹಾಸನಜಿಲ್ಲೆಯವರು ಮತ್ತು ಪ್ರಪಂಚದಾದ್ಯಂತದ ಈ ವರ್ಷದಲ್ಲಿ ಬಳಕೆದಾರರು ಹುಡುಕಾಡಿದ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದೆ.

ಹಾಸನದಲ್ಲಿ ಮಾಡಲಾಗಿರುವ ಸರ್ಚ್‌ಗಳಲ್ಲಿ ಕ್ರಿಕೆಟ್‌ ವಿಷಯದ ಸರ್ಚ್‌ಗಳು ಅಗ್ರಸ್ಥಾನದಲ್ಲಿದ್ದೂ ‘ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)’ ಮತ್ತು ‘ಐಸಿಸಿ ಟಿ 20 ವಿಶ್ವಕಪ್’ (ICC T20 World Cup) ಬಗ್ಗೆ ಅತಿ ಹೆಚ್ಚು ಸರ್ಚ್‌ ಮಾಡಲಾಗಿದೆ. ‘ಕೋವಿನ್’ (CoWin) , ‘ಕೋವ್ಯಾಕ್ಸಿನ್’ ಮತ್ತು ‘ಕೋವಿಡ್ ಲಸಿಕೆ’ ಕೇಂದ್ರಗಳಿಗಾಗಿ ಹಾಗೂ ‘ಲಾಕ್ ಡೌನ್’ ಕೂಡ ಸಾಕಷ್ಟು ಸರ್ಚ್‌ಗಳಾಗಿದ್ದು ಹಾಸನ ಸೇರಿ ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ ಎಂದು ಸರ್ಚ್ ದೈತ್ಯ ಹೇಳಿದೆ. ಸ್ಥಳೀಯ ತಕ್ಷಣದ ವಿದ್ಯಮಾನ ನೋಟಕ್ಕಾಗಿ ‘ ಹಾಸನ್ ನ್ಯೂಸ್ ‘ ಎಂದು ಸರ್ಚ್ ಮಾಡುವಲ್ಲಿ 8ನೇ ಸ್ಥಾನದಲ್ಲಿದ್ದು , ಲಿಸ್ಟ್ ನಲ್ಲಿ ಹಾಸನಾಂಬ , ಶೆಟ್ಟಿಹಳ್ಳಿ ಚರ್ಚ್ , ಬೇಲೂರು , ಹಳೇಬೀಡು ಪ್ರವಾಸಿ ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯವಾಗಿದ್ದು ಅದು ಹಾಸನದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಗೆ ಸೇರಿದೆ. ಮಾಡಲಾಗಿರುವ ಸರ್ಚ್‌ಗಳಲ್ಲಿ ಕ್ರಿಕೆಟ್‌ ವಿಷಯದ ಸರ್ಚ್‌ಗಳು ಅಗ್ರಸ್ಥಾನದಲ್ಲಿದ್ದೂ ‘ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)’ ಮತ್ತು ‘ಐಸಿಸಿ ಟಿ 20 ವಿಶ್ವಕಪ್’ (ICC T20 World Cup) ಬಗ್ಗೆ ಅತಿ ಹೆಚ್ಚು ಸರ್ಚ್‌ ಮಾಡಲಾಗಿದೆ. ‘ಕೋವಿನ್’ (CoWin) ಮತ್ತು ‘ಕೋವಿಡ್ ಲಸಿಕೆ’ ಕೇಂದ್ರಗಳಿಗಾಗಿ ಕೂಡ ಸಾಕಷ್ಟು ಸರ್ಚ್‌ಗಳಾಗಿದ್ದು ಹಾಸನ ಸೇರಿ ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ ಎಂದು ಸರ್ಚ್ ದೈತ್ಯ ಹೇಳಿದೆ. ಸ್ಥಳೀಯ ತಕ್ಷಣದ ವಿದ್ಯಮಾನ ನೋಟಕ್ಕಾಗಿ ‘ ಹಾಸನ್ ನ್ಯೂಸ್ ‘ ಎಂದು ಸರ್ಚ್ ಮಾಡುವಲ್ಲಿ 8ನೇ ಸ್ಥಾನದಲ್ಲಿದ್ದು , ಲಿಸ್ಟ್ ನಲ್ಲಿ ಹಾಸನಾಂಬ , ಶೆಟ್ಟಿಹಳ್ಳಿ ಚರ್ಚ್ , ಬೇಲೂರು , ಹಳೇಬೀಡು ಪ್ರವಾಸಿ ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯವಾಗಿದ್ದು , ಸ್ಥಳೀಯ ಸುದ್ದಿ ಪತ್ರಿಕೆಯಲ್ಲಿ ಹುಡುಕುವಲ್ಲಿ ಆನ್ ಲೈನ್ ವಿಜಯ ಕರ್ನಾಟಕ , ಪ್ರಜಾವಾಣಿ ಹಾಗೂ ಜನಮಿತ್ರ ಸೇರ್ಪಡೆಯಾಗಿದೆ , ಇನ್ನು ರಾಜಕೀಯ ನೊಡೋದಾದರೆ , ಪ್ರಜ್ವಲ್ ರೇವಣ್ಣ , ಸೂರಜ್ ರೇವಣ್ಣ , ಪ್ರೀತಮ್ ಜೆ ಗೌಡ , ಮಂಥರ್ ಗೌಡ ಟ್ರೆಂಡಿಂಗ್ ನಲ್ಲಿದ್ದಾರೆ ,  ಈ ಬಾರಿ ಹೆಚ್ಚು ಬಿಸಿಲು ಕಾಣದ ಹಾಸನಿಗರು ವರ್ಷಪೂರ್ತಿ ಮಳೆಯ ನರ್ತನಕ್ಕೆ ಬೇಸತ್ತಿದ್ದು ಇಂದು ಕೂಡು ಮಳೆ ವಿದ್ಯಮಾನವಿದೆ ., weather forecasting , rain updates hassan ಅದು ಹಾಸನದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಗೆ ಸೇರಿದೆ. ಕಳೆದ ಈ ವರ್ಷ ಒಂದೆರಡು ಕಡೆ ಭೂಕಂಪನದ ಸುದ್ದಿಯಾಯಿತಾದರೂ ಯಾವುದೇ ತೊಂದರೆಯಾಗಿರಲಿಲ್ಲ earth quake news hassan ಇರೋದು ಲಿಸ್ಟ್ ನಲ್ಲಿ ಆಶ್ಚರ್ಯ.

ಇನ್ನು ಸ್ಥಳೀಯ ಪ್ರತಿಭೆಗಳಿಗೇನು ಕೊರತೆ ಇಲ್ಲ , ಈ ವರ್ಷ ಹಾಸನ ಜಿಲ್ಲೆಯ ಮೂಲದ ಐಎಎಸ್ ಅಧಕಾರಿ ಯತಿರಾಜ್ ವಿಶ್ವಮಟ್ಟದ ಟೊಕಿಯೋ ಪ್ಯಾರಲಂಪಿಕ್ ನ ಶಟಲ್ ಬ್ಯಾಟ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದರು. Suhas l yatiraj ‘ trending ಪದವಾಗಿ ಗೂಗಲ್ ಅಗ್ರಸ್ಥಾನ ನೀಡಿದೆ ಹಾಸನದವರ ಒಟ್ಟು ಹುಡುಕಾಟದಲ್ಲಿ .

LEAVE A REPLY

Please enter your comment!
Please enter your name here