ದುಷ್ಟಶಕ್ತಿ ಬಿಡಿಸುವುದಾಗಿ ಹೇಳಿ ಮಹಿಳೆಯನ್ನು ಥಳಿಸಿ ಆಕೆಯ ಸಾವಿಗೆ ಕಾರಣನಾಗಿದ್ದ ಲಾಟ್ ಪೂಟ್ ಪೂಜಾರಿ ಬಂಧನ

0

ಹಾಸನ/ಚನ್ನರಾಯಪಟ್ಟಣ : ದೇಹದಲ್ಲಿರುವ ದುಷ್ಟಶಕ್ತಿ ಬಿಡಿಸುವುದಾಗಿ ಹೇಳಿ ಮಹಿಳೆಯನ್ನು ಥಳಿಸಿ ಆಕೆಯ ಸಾವಿಗೆ ಕಾರಣನಾಗಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ಬೆಕ್ಕ ಗ್ರಾಮದ ಪಿರಿಯಾಪಟಲದಮ್ಮ ದೇವಾಲಯದ ಪೂಜಾರಿ ಮನು ಎಂಬಾತನನ್ನು ಒಂದು ವಾರದ ಅಂತರದಲ್ಲಿ ಶ್ರವಣಬೆಳಗೊಳ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಂಗ ತನಿಕೆಗೆ ಒಪ್ಪಿಸಿದ್ದಾರೆ.,

ಕಳೆದ ವಾರ ಈ ಪೂಜಾರಿ ನಿತಂತರ ತಲೆನೋವಿನಿಂದ ಬಳಲುತ್ತಿದ್ದ ಪಾರ್ವತಿ ಎಂಬ ಮಹಿಳೆಯ ಮೈಯಲ್ಲಿ ದುಷ್ಟ ಶಕ್ತಿ ಸೇರಿಕೊಂಡಿದೆ ಎಂದು ಕಥೆ ಹೇಳಿದ್ದಲ್ಲದೆ, ಅದನ್ನು ಬಿಡಿಸುವುದಾಗಿ ಆಕೆಯ ಮೇಲೆ ಬೆತ್ತದಿಂದ ಬೇಕಾಬಿಟ್ಟಿ  ಹೊಡೆದಿದ್ದ. ಇದರಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಪಾರ್ವತಿ ಹಾಸನ ನಗರದ ಹಿಮ್ಸ್‌ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕರೆದು ಕೊಂಡು ಬಂದಾಗ ನೋವನ್ನು ತಾಳಲಾರದೆ ಹಸುನೀಗಿದ್ದಾಳೆ

ಮೃತ ಪಾರ್ವತಿಯ ಪುತ್ರಿ ನೀಡಿದ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಶ್ರವಣಬೆಳಗೊಳ ಪೊಲೀಸರು ತನಿಖೆ ಆರಂಭಿಸಿ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೊಬೈಲ್‌ ಕರೆಗಳ ಸುಳಿವು ಆಧರಿಸಿ ಬಂಧಿಸಲಾಗಿದೆ.,

ಘಟನೆಯ ವಿವರ :
ನತದೃಷ್ಠ ಪಾರ್ವತಿ (37) ಎಂಬ ಹಾಸನದವರು , ಒರ್ವ ಪೂಜಾರಿಯಿಂದ ಸರಿಯಾಗಿ ಪೆಟ್ಟು ತಿಂದು ತನ್ನ ಪ್ರಾಣ ಕಳೆದು ಕೊಂಡ ಮಹಿಳೆ. ಘಟನೆ ನಡೆದು ಹೋಗಿದೆ ., ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸುಂಡಳ್ಳಿ ಗ್ರಾಮದ ಪಾರ್ವತಿಯ ಪತಿ ಕುಮಾರ 18 ವರ್ಷಗಳ ಹಿಂದೆ ಮೃತಪಟ್ಟಿದ್ದರಂತೆ ನಂತರ ಬೆಕ್ಕ ಗ್ರಾಮದಲ್ಲಿದ್ದ ಅಕ್ಕ ಮಂಜುಳಾ ಅವರ ಜೊತೆ ಪಾರ್ವತಿ ವಾಸವಾಗಿದ್ದರು. ಮೊದಲ ಕೋವಿಡ್ ಮುನ್ನ ಪಾರ್ವತಿ ತಮ್ಮ‌ ಮಗಳು ಚೈತ್ರಾಳನ್ನು ಸುಂಡಳ್ಳಿಯ ಜಯಂತ್ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ನಂತರ ಎಲ್ಲರೂ ಬೆಂಗಳೂರಿಗೆ ತೆರಳಿ ಅಲ್ಲೇ ವಾಸವಾಗಿದ್ದರು.

ಎರಡು ತಿಂಗಳ ಹಿಂದೆ ಪಾರ್ವತಿಗೆ ವಿಪರೀತ ತಲೆನೋವು ಕಾಣಿಸಿಕೊಂಡ ಪರಿಣಾಮ ಬೆಂಗಳೂರಿನ ಪತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಂತೆ. ವೈದ್ಯರು ಯಾವುದೇ ಕಾಯಿಲೆ ಇಲ್ಲ ಸಣ್ಣ ಪುಟ್ಟ ಮಾತ್ರೆ ಬರೆದು ಕಳಿಸಿದ್ದರಂತೆ .,  ಆದರೆ ಪಾರ್ವತಿಗೆ ತಲೆ ನೋವು ಕಡಿಮೆಯಾಗಿಲ್ಲ , ಹಾಗಂತ ಬೇರೆ ಆಸ್ಪತ್ಋ ತೋರಿಸೋದ ಬಿಟ್ಟು ,  ತನ್ನ ಒರ್ವ ಸಂಬಂಧಿಕರ ಜೊತೆ ಹೇಳಿಕೊಂಡಿದ್ದ ಇದೇ ವಿಷಯಕ್ಕೆ ಅವರ ಸಲಹೆಯಂತೆ ಬೆಕ್ಕ ಗ್ರಾಮದ ಪಿರಿಯಪಟ್ಟಲದಮ್ಮ ದೇವರಿದೆ. ಅಲ್ಲಿಗೆ ಹೋಗಿ ಬರೋಣ ಬಾ ಎಂದು ಬೆಂಗಳೂರಿನಿಂದ ಕರೆಸಿಕೊಂಡರಂತೆ

ಈ ತಿಂಗಳ ಡಿ.2 ರಂದು ಪಾರ್ವತಿ ಊರಿಗೆ ಬಂದ ಸುದ್ದಿ ತಿಳಿದು ಅಲ್ಲಿಗೆ ಬಂದ ಪೂಜಾರಿ ಮನು ಎಂಬಾತ, ನಿಂಬೆ ಹಣ್ಣು ಮಂತ್ರಿಸಿ ಕೊಟ್ಟು ಡಿ.3 ರಂದು ದೇವಸ್ಥಾನಕ್ಕೆ ಬರಲು ಹೇಳಿ ಹೋಗಿದ್ದರಂತೆ ನಂಬಿದ ಪಾರ್ವತಿ ಅವರು ದೇವಾಲಯಕ್ಕೆ ಹೋಗಿದ್ದಾರೆ.

ಮನಬಂದಂತೆ ಥಳಿಸಿರುವ ಪೂಜಾರಿ..!

ಪೂಜೆ ಮಾಡಿದ ಮನು ಮತ್ತೆ ಡಿ.7 ರಂದು ಉತ್ಸವವಿದೆ, ಅಂದು ಬನ್ನಿ ಎಂದು ಹೇಳಿ ಕಳುಸಿದ್ದಾನೆ. ಅದರಂತೆ ಮಂಜುಳಾ, ಪಾರ್ವತಿ ಹಾಗೂ ಇತರರು ಅಲ್ಲಿಗೆ ತೆರಳಿದ್ದಾರೆ. ಪಾರ್ವತಿಗೆ ತಲೆನೋವು (ಶಂಕೆ) ಇದೆ, ಇದನ್ನು ಬಿಡಿಸಬೇಕು ಎಂದು ಹೇಳಿ ಕೈಯಲ್ಲಿದ್ದ ಬೆತ್ತದ ಕೋಲಿನಿಂದ ತಲೆ, ಕೈಕಾಲು ಸೇರಿದಂತೆ ಮೈಮೇಲೆ ಮನಬಂದಂತೆ ಥಳಿಸಿದ್ದು, ಬೆತ್ತದೇಟಿಗೆ ಪಾರ್ವತಿ ಸುಸ್ತಾಗಿ ಬಿದ್ದಿದ್ದಾಳೆ. ನಂತರ ನಿಂಬೆಹಣ್ಣಿನ ರಸ ಕುಡಿಸಿ ಸರಿಹೋಗುತ್ತೆ ಎಂದು ಮನೆಗೆ ಕಳುಹಿಸಿದ್ದಾನೆ.

ಪ್ರಾಣವನ್ನೇ ಬಿಟ್ಟ ಅಮಾಯಕ ಮಹಿಳೆ..!

ನಂತರ ಪಾರ್ವತಿ ಸ್ಥಿತಿ ಗಂಭೀರವಾಗಿ ಡಿ.8 ರಂದು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾರ್ವತಿ ಮೃತಪಟ್ಟಿದ್ದಾಳೆ. ಪೂಜಾರಿಯೇ ಎಲ್ಲವನ್ನೂ ಪರಿಹಾರ ಮಾಡಿ ಬಿಡುತ್ತಾನೆ ಎಂದುಕೊಂಡಿದ್ದ ಪಾರ್ವತಿ ಮನೆಯವರು, ಇದೀಗ ಮಹಿಳೆ ಸಾವಿಗೆ ಪೂಜಾರಿಯೇ ಕಾರಣ, ಆತನ ವಿರುದ್ಧ ಕ್ರಮ ಜರುಗಿಸಬೇಕೆಂದು ಶ್ರವಣಬೆಳಗೊಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು , ಇದೀಗ ಪೂಜಾರಿ ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here