°ದಿನಾಂಕ 01-09-2020 ರಂದು ಬೆಳಗ್ಗೆ ಸುಮಾರು 11-30 ಗಂಟೆಯ ಸಮಯದಲ್ಲಿ ಮಹಾಲಕ್ಷ್ಮಿ ರವರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಅಂಚೆ ಕಛೇರಿಗೆ ಹೋಗಿದ್ದು ವಾಪಸ್ ಬೆಳಿಗ್ಗೆ 11.45AM ಗಂಟೆ ಸಮಯದಲ್ಲಿ ವಾಪಸ್ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಭಾಗಿಲಿನ ಚಿಲಕವನ್ನು ಜಖಂಗೊಳಿಸಿ ಮನೆಯೊಳಗೆ ನುಗ್ಗಿ ಮನೆ ರೂಮಿನ ಕಬೋರ್ಡ್ ಬಾಗಿಲನ್ನು ಜಕ್ಕಂಗೊಳಿಸಿ ಕಬೋರ್ಡನಲ್ಲಿದ್ದ ಸುಮಾರು 133ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗುತ್ತಾರೆ ಕಳವು ಮಾಡಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಅರಸೀಕೆರೆ ಗ್ರಾಮಾಂತರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು .
ಆರೋಪಿಯ ಪತ್ತೆಗೆ ಬಗ್ಗೆ ವಿಶೇಷ ತಂಡ ರಚನೆ : ಈ ಪ್ರಕರಣವನ್ನು ಪತ್ತೆ ಮಾಡುವ ಸಲುವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಶೇಷವತಂಡವನ್ನು ರಚಿಸಿದ್ದರು, ತಂಡದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿಯವರ ಮೇಲುಸ್ತುವಾರಿಯಲ್ಲಿ ಪೊಲೀಸ್‌ಉಪಾಧೀಕ್ಷಕರಾದ ಶ್ರೀ ನಾಗೇಶ್‌ರವರಸ್ತುವಾರಿಯಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತದ ತಂಡ ರಚಿಸಲಾಗಿತ್ತು. ಈ ತಂಡದವರು ಪತ್ತೆ ಕಾರ್ಯ ನಡೆಸಿದಾಗ
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಳಕಂಡ ಆರೋಪಿಯ ಬಗ್ಗೆ ಮಾಹಿತಿಯನ್ನು ಮಾಹಿತಿ ಸಂಗ್ರಹಿಸಿ ದಿನಾಂಕ 08/10/2020 ರಂದು ಮಧ್ಯಾಹ್ನ 12 ಗಂಟೆಯ ಬಿ.ಹೆಚ್ ರಸ್ತೆಯಲ್ಲಿರುವ ರಾಯಲ್ಸ್ ಮುಂಭಾಗ ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ಆರೊಪಿಯನ್ನು ವಶಕ್ಕೆ ಪಡೆದರು
ಆರೋಪಿಯ ಹೆಸರು ಮತ್ತು ವಿಳಾಸ :
ಮುಬಾರಕ್ ಬೇಗ್ ( 25 ) ತುಮಕೂರಿನ ಈತ ವೆಲ್ಡಿಂಗ್ ಕೆಲಸ , ಈತನನ್ನು ವಶಕ್ಕೆ ಪಡೆದುಕೊಂಡು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಕೃತ್ಯದ ಬಗ್ಗೆ ವಿಚಾರ ಮಾಡಲಾಗಿ ಆರೋಪಿಯು ಈ ಕೆಳಕಂಡ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
ಆರೋಪಿಯು ಭಾಗಿಯಾಗಿರುವ ಪ್ರಕರಣಗಳ ಮಾಹಿತಿ ವಿವರ : ಈತನನ್ನು ಪತ್ತೆ ಮಾಡಿ ಹಾಸನ ಜಿಲ್ಲೆಯ 6 ಪ್ರಕರಣಗಳು , ಚಿಕ್ಕಮಗಳೂರು ಜಿಲ್ಲೆಯ 6 ಪ್ರಕರಣಗಳು , ತುಮಕೂರು ಜಿಲ್ಲೆಯ 4 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯ 3 ಒಟ್ಟು 19 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ, ಆರೋಪಿಯು ನೀಡಿದ ಸುಳಿವಿನ ಮೇರೆಗೆ 40 ಲಕ್ಷ ರೂ ಬೆಲೆಯ 760 ಗ್ರಾಂ ಚಿನ್ನದ ಆಭರಣ ಮತ್ತು 1 ಕೆ.ಜಿ 100 ಗ್ರಾಂ ಬೆಳ್ಳಿಯ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೆ.
ವಿಶೇಷ ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ : ಶ್ರೀ ನಾಗೇಶ, ಡಿವೈಎಸ್ಪಿ, ಅರಸೀಕೆರೆ ಉಪ ವಿಭಾಗ, ಶ್ರೀ ಕೆ.ಎಂ, ವಸಂತ್, ಸಿಪಿಐ, ಅರಸೀಕೆರೆ ಗ್ರಾಮಾಂತರ ವೃತ್ತ, ಶ್ರೀ ಅರುಣ್ ಕುಮಾರ್, ಪಿಎಸ್‌ಐ, ಬಾಣಾವರ ಠಾಣೆಯ ಪಿ.ಎಸ್.ಐ. ಶ್ರೀ ಅರುಣ್ ಕುಮಾರ್, ಶ್ರೀಬಸವರಾಜ , !! ಸಿಬ್ಬಂದಿಗಳಾದ ಒರಾಸಿಂಗ್, ನಂಜುಂಡೇಗೌಡ, ಲೋಕೇಶ್, ನಾಗೇಂದ್ರ ವಿ ಎಸ್, ರವಿಪ್ರಕಾಶ್ ಚಿತ್ರ ಶೇಖರಪ್ಪ ಹೇಮಂತ, ಹರೀಶ, ಪುಟ್ಟಸ್ವಾಮಿ, ಪ್ರದೀಪ್ ನಾಗರಾಜ ನಾಯ್ಕ, ಮಧು, ಕೇಶವಮೂರ್ತಿ ಮತ್ತು ಜೀಪ್ ಚಾಲಕರಾಗಿ ವಸಂತಕುಮಾರ್, ಇದ್ದೇಶ ಮತ್ತು ತಾಂತ್ರಿಕ ವಿಭಾಗದ ಹೀರ್ ಖಾನ್ ರವರುಗಳು ಶ್ರಮಿಸಿದ್ದಾರೆ, ಇವರುಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ ಹಾಸನ ರವರು ಶ್ಲಾಘಿಸಿ, ವಿಶೇಷ ಬಹುಮಾನ ಘೋಷಿಸಿರುತ್ತಾರೆ.
ಈ ಪ್ರಕಟಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಿಂದ