ಹಾಸನ / ಚನ್ನರಾಯಪಟ್ಟಣ:
°ವರದಕ್ಷಿಣೆ ಗೊಂದಲ ಪತ್ನಿಯನ್ನೆ ನುಣುಪಾದ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ
°ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಘೋರ ಘಟನೆ ನಡೆದೋಗಿದೆ
°ಇನ್ನು ಬಾಳಿ ಬದುಕಬೇಕಾದ ಮಹಿಳೆ., ಕೊಲೆಯಾದ ಧುರ್ಧೈವಿ ಪೂಜಾ 25ವರ್ಷ ಮಾತ್ರ
°ಆರೋಪಿ ಗಂಡ ಗಂಗಾಧರ್ ತಲೆಮರೆಸಿಕೊಂಡಿರುತ್ತಾನೆ
°ಪೂಜಾ ಅವರ ತವರು ಹೊಳೆನರಸೀಪುರ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದವಳು
°ಪೂಜಾ/ಗಂಗಾಧರ್ ಅವರ ವಿವಾಹ 2014ರಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಕಾಚೇನಹಳ್ಳಿ ಗ್ರಾಮದ ಗಂಗಾಧರ್ ರೊಂದಿಗೆ ಆಗಿತ್ತು
°ಇವರಿಗೆ ಕೇವಲ 5 ವರ್ಷದ ಗಂಡು ಮಗು ಕೂಡ ಇದೆ
°ಇವರ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಲಾಗಿತ್ತಂತೆ??
°ಸಂಸಾರ ಅಂದಮೇಲೆ ಸಣ್ಣಪುಟ್ಟ ಗಲಾಟೆ ಸಹಜ °ಮದುವೆಗೆ ವರನಿಗೆ ವರದಕ್ಷಿಣೆ ಕಡಿಮೆ , ತವರು ಮನೆಯಿಂದ ಇನ್ನು ವರದಕ್ಷಿಣೆ ತರಿಸುವಂತೆ ಪತಿ ಗಂಗಾಧರ್ ಗೋಳೊಯ್ದುಕೊಳ್ಳುತ್ತಿದ್ದನಂತೆ.
°ಈ ಬಗ್ಗೆ ಹಲವು ಬಾರಿ ಕುಟುಂಬಸ್ಥರು ರಾಜೀ ಪಂಚಾಯಿತಿ ನಡೆಸಿದರೂ ಇಬ್ಬರಲ್ಲು ಇದೇ ವಿಚಾರಕ್ಕೆ ಪದೇ ಪದೇ ಗಲಾಟೆಯಾಗಿದೆ
°ಮಂಗಳವಾರ ರಾತ್ರಿ ಅಂತಯೇ ಗಲಾಟೆ ನಡೆಯುವಾಗ ಗಂಗಾಧರ್ ತಾಳ್ಮೆಯಿಂದ ವರ್ತಿಸದೆ ಮಚ್ಚಿನಿಂದ ಪೂಜಾ ಅವರ ತಲೆ, ಕುತ್ತಿಗೆಗೆ ಹಲ್ಲೆ ಮಾಡಿ ಬಿಡುತ್ತಾನೆ ., °ರಕ್ತ ಸಾಕಷ್ಟು ಹೋಗುತ್ತಿದ್ದ ಕಾರಣ ಪೂಜಾಳ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಹೋಗುವ ದಾರಿಯಲ್ಲೇ ಸಾವನ್ನಪ್ಪುತ್ತಾರೆ – ಹಾಸನ ಜಿಲ್ಲಾ ಪೊಲೀಸ್