ಹಾಸನ / ಮಂಡ್ಯ / ಮೈಸೂರು / ಚಾಮರಾಜನಗರ : ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಚುನಾವಣೆ ಘೋಷಣೆ, ನಾಲ್ಕು ಜಿಲ್ಲೆಗಳಿಂದ 29 ವಿಧಾನ ಸಭಾ ಕ್ಷೇತ್ರಗಳಿದ್ದು , ನಾಮಪತ್ರ ಸಲ್ಲಿಕೆಗೆ ಮೇ 26 ಕಡೆಯ ದಿನ , ನಾಮಪತ್ರಗಳ ಪರಿಶೀಲನೆಯನ್ನು ಮೇ 27. ನಾಮಪತ್ರ ಹಿಂಪಡೆಯಲು ಮೇ 30 ಕೊನೆಯ ದಿನ. ಜೂನ್ 13ರಂದು ಮತದಾನ, ಜೂನ್ 15ರಂದು ಮತ ಎಣಿಕೆ ಫಲಿತಾಂಶ . ಈ ಬಾರಿ ಘಟಾನುಘಟಿ ಸ್ಪರ್ದಾಳುಗಳ ವಿವರ ಇಂತಿದೆ .
ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದು ಹೆಚ್ಚು ಕಡಿಮೆ MLA ಚುನಾವಣೆಯಂತೆ ಪರಿಗಣಿಸಿಕೊಂಡಿದ್ದಾರೆ .ಪ್ರಮುಖ ಪಕ್ಷಗಳ ಐವರು ಅಭ್ಯರ್ಥಿಗಳು ಸೇರಿ ಒರ್ವ ಪ್ರಬಲ ಹಾಸನ ಮೂಲದ ಪಕ್ಷೇತರ ಅಭ್ಯರ್ಥಿಯು ಕಣದಲ್ಲಿದ್ದು, ಈಗಾಗಲೇ ನಾಲ್ಕೂ ಜಿಲ್ಲೆಗಳಿಗೆ ತೆರಳಿ ಬಹಿರಂಗ ಪ್ರಚಾರ ನಡೆಸುತ್ತಾ, ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.
• ಕಾಂಗ್ರೆಸ್‌ನಿಂದ ಮಾಜಿ ಸಂಸದ ಜಿ.ಮಾದೇಗೌಡ ಅವರ ಪುತ್ರ ಮಧು ಜಿ.ಮಾದೇಗೌಡ,
• ಬಿಜೆಪಿಯಿಂದ ಮೈ.ವಿ.ರವಿಶಂಕರ್, ಹಾಗೂ ಇದೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎ.ಎಸ್.ವಿನಯ್ ಹಾಸನ ಮೂಲದವರು ಹಾಸನ ಜಿಲ್ಲೆಯ ಏಕೈಕ ಅಭ್ಯರ್ಥಿ ಬಂಡಾಯದ ಬಿಸಿ ಮುಟ್ಟಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಠಕ್ಕರ್ ಕೊಡುತ್ತಾ ಎನ್ನಲಾಗಿದೆ ಮೂಲಗಳು ,
• ಜೆಡಿಎಸ್‌ನಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು,
• ಬಹುಜನ ಸಮಾಜ ಪಕ್ಷದಿಂದ ಡಾ.ಬಿ.ಎಚ್.ಚನ್ನಕೇಶವಮೂರ್ತಿ ಹಾಗೂ ರೈತ ಸಂಘದಿಂದ ಪ್ರಸನ್ನ ಎನ್.ಗೌಡ ಕಣದಲ್ಲಿ ದ್ದಾರೆ. ಇವರಲ್ಲಿ ಮಧು ಮಾದೇಗೌಡ, ರಾಮು ಹಾಗೂ ಪ್ರಸನ್ನ ಮಂಡ್ಯ ಜಿಲ್ಲೆಯವರು. ರವಿಶಂಕರ್ ಹಾಗೂ ಚನ್ನಕೇಶವಮೂರ್ತಿ ಮೈಸೂರಿನವರು.






ಪಕ್ಷದ ವಿಭಾಗೀಯ ಉಸ್ತುವಾರಿಯಾಗಿರುವ ರವಿಶಂಕರ್ ಕಳೆದ ಬಾರಿ ಸೋಲು ಕಂಡಿದ್ದರು. ಮಧು, ರಾಮು, ಚನ್ನಕೇಶವಮೂರ್ತಿ ಹಾಗೂ ಪ್ರಸನ್ನ ಅವರು ಈ ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ.
ಅಭ್ಯರ್ಥಿಗಳ ಜೊತೆಗೆ ಆಯಾ ಪಕ್ಷಗಳ ಕಾರ್ಯಕರ್ತರು, ಶಾಸಕರು, ಸಂಸದರು, ಮಂತ್ರಿಗಳು , ಸ್ಟಾರ್ ನಟರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ, ಸಮಾವೇಶ ನಡೆಯಲಿದೆ.
ಜೂನ್ 17 ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಿಂದ ಗೆದ್ದು ಬಂದ ಕಲಿ MLC ಆಗಲಿದ್ದಾರೆ .
ನಿಮ್ಮ ವೋಟ್ ಯಾರಿಗೆ ಏಕೆ ಕಮೆಂಟ್ ನಲ್ಲಿ ತಿಳಿಸಿ