ಸಕಲೇಶಪುರದಲ್ಲಿ ಎರಡು ಕಾಡಾನೆಗಳ ಸೆರೆ ಹಿಡಿದ ಸಂದರ್ಭದ ರೋಚಕತೆ

0

ಸಕಲೇಶಪುರ: ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಯಶಸ್ವಿ
ಬೆಳಗೋಡು ಹೋಬಳಿಯಾದ್ಯಂತ ಕಳೆದ ಆರು ತಿಂಗಳಿನಲ್ಲಿ ಐವರ ಜೀವಕ್ಕೆ ಎರವಾಗಿದ್ದ ಕಾಡನೆಯನ್ನು ಸೆರೆಹಿಡಿಯ ಬೇಕು ಎಂದು ಒತ್ತಡ ಹೆಚ್ಚಿದ ಹಿನ್ನಲೆಯಲ್ಲಿ ಎರಡು ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಆದೇಶಹೊರಡಿಸಿ ಜೂನ್ ನಾಲ್ಕರಂದು ಕಾಡಾನೆ ಸೆರೆಗೆ ದಿನಾಂಕ ನಿಗಧಿಪಡಿಸಲಾಗಿತ್ತು. ಆದರೆ,

ಕರೊನಾ ಲಸಿಕೆ ಆದೋಲನ ಜಾರಿಯಲ್ಲಿದ್ದ ಕಾರಣ ಕಾಡಾನೆ ಸೆರೆ ಕಾರ್ಯಾಚರಣೆ ಒಂದು ವಾರ ವಿಳಂಬವಾಗಿ ಆರಂಭವಾಗಿ ಗುರುವಾರ(10ಜೂನ್) ಮುಂಜಾನೆ ಐದು ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಬಸವರಾಜು ನೇತೃತ್ವದಲ್ಲಿ ಆರಂಭಿಸಿ ಮುಂಜಾನೆ ಆರು ಗಂಟೆಗೆ ತಾಲೂಕಿನ ಹಳೇಕೆರೆ ಗ್ರಾಮದ ಹೊರವಲಯದ ಪಾಳುತೋಟದಲ್ಲಿ ಗೀತಾಂಜಲಿ ಎಸ್ಟೇಟ್ ಬಳಿ ಮೌಂಟೈನ್ ಎಂಬ ಕಾಡಾನೆ ಇರುವುದನ್ನು ಪತ್ತೆ ಹಚ್ಚಿ

https://youtu.be/a6D-OwyrDhM

ಸಿಬ್ಬಂದಿ ಸಾಕಾನೆಗಳೊಂದಿಗೆ ತೆರಳಿ ಅಭಿಮಾನ್ಯು ಹಾಗೂ

ಅರ್ಜುನ ಎಂಬ ಸಾಕಾನೆಗಳ ಮೇಲೆ ಕುಳಿತಿದ್ದ ಆರವಳಿಕ್ಕೆ ತಜ್ಞರಾದ ವೆಂಕಟೇಶ್ ಹಾಗೂ ಮಜೀಭ್ ಅವರು 20 ಮೀಟರ್ ಅಂತರದಲ್ಲಿ ಸುಮಾರು 35 ವರ್ಷದ ಗಂಡು ಕಾಡಾನೆಗೆ ನಿಖರವಾಗಿ ಆರವಳಿಕೆ ಮದ್ದು ಹಾರಿಸಲು ಯಶಸ್ವಿಯಾದರು. ಈ ವೇಳೆ

ಕೆಲವು ಮೀಟರ್‌ಗಳಷ್ಟು ದೂರ ಓಡಿದ ಕಾಡಾನೆ ಕುಸಿದು ಬಿದ್ದಿತ್ತು. ಈ ವೇಳೆ ಮೊದಲೇ ಸಿದ್ದಮಾಡಿಕೊಂಡಿದ್ದ ಟ್ಯಾಂಕರ್ ಮೂಲಕ ನೀರನ್ನು ಹಾಕಿ ಎಚ್ಚರಿಸಿದ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಚೈನ್ ಹಾಗೂ

ಹಗ್ಗದಿಂದ ಬಂದಿಸಿ ಸಮೀಪದ ಮರಕ್ಕೆ ಕಟ್ಟಿಹಾಕಲಾಯಿತು. ನಂತರ ಕ್ರೇನ್ ಸಹಾಯದಿಂದ ಆ ಆನೆಯನ್ನು ಲಾರಿಗೆ ಏರಿಸಲಾಯಿತು.

ನಂತರ ಕಾದಾಟಕ್ಕೆ ಇಳಿದ ಎರಡನೇ ಆನೆ ಗುಂಡ; ಮದ್ಯಾಹ್ನದ ನಂತರ ಹಳೇಕೆರೆ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿರುವ ಮತ್ತೊಂದು ಗುಂಡ ಎಂಬ ಕಾಡಾನೆ ಅರವಳಿಕೆ ಮದ್ದು ಹಾರಿಸಿ ಕಾರ್ಯ ಯಶಸ್ವಿಯಾದರೂ ಆ ಆನೆಗೆ ಹಗ್ಗ ಹಾಕಿ ಕರೆ ತರಲು ಯತ್ನಿಸಿದಾಗ ಸಾಕಾನೆಗಳೋಂದಿಗೆ ಕಾದಾಟಕ್ಕೆ ಇಳಿಯಿತು. ಈ ಸಂಧರ್ಭದಲ್ಲಿ

ಅರ್ಜುನ ಮತ್ತು ಅಭಿಮನ್ಯೂ ನೊಂದಿಗೆ ಸೆಣಾಸಾಟ ನಡೆಸಿತು. ಅದಕ್ಕೆ ಕಟ್ಟಿದ ಎರಡು ಹಗ್ಗವನ್ನು ಕಡಿದು ತಪ್ಪಿಸಿಕೋಳ್ಳಲು ಯತ್ನಿಸಿತು ನಂತರ ಮತೊಂದು ಬಾರಿ ಅರವಳಿಕೆ ನೀಡಿ ., ಈ ಸಂಧರ್ಭದಲ್ಲಿ ಅರ್ಜುನ ಮತ್ತು ಅಭೀಮನ್ಯು ಗುಂಡ ಕಾಡನೆಯೊಂದಿಗೆ ಕಾದಾಟ ನಡೆಸಿ ಅದನ್ನು

ನಿತ್ರಾಣಗೊಳಿಸಿದ ನಂತರ ಲಾರಿಗೆ ಏರಿಸಲಾಯಿತು. ಲಾರಿಗೆ ಏರಿಸಿದ ನಂತರ ಪ್ರಜ್ಣಾಹೀನ ಸ್ಥಿತಿಗೆ ತಲುಪಿದು ನಂತರ ಅದಕ್ಕೆ ಚಿಕಿತ್ಸೆನೀಡಿದ ನಂತರ ಚೇತರಿಸಿಕೊಂಡಿತು.
ಕಾರ್ಯಾಚರಣೆಯಲ್ಲಿ

ಅಭಿಮನ್ಯು,ಅರ್ಜುನ,ಮಹೇಂದ್ರ,ಗಣೇಶ್ ಹಾಗೂ ಮಹಾರಾಷ್ಟ್ರದ ಬೀಮ್ ಎಂಬ ಐದು ಕಾಡಾನೆಗಳು, 120 ಕ್ಕೂ ಅಧಿಕ ಆರ್ ಆರ್ ಟಿ ಸಿಬ್ಬಂದಿ ಸೇರಿದಂತೆ ಸಕಲೇಶಪುರ ವಲಯ ಅರಣ್ಯ ಇಲಾಖೆಯ ಸುಮಾರು ಮೂವತ್ತಕ್ಕೂ ಅಧಿಕ ಸಿಬ್ಬಂದಿಗಳು ಬಾಗಿಯಾಗಿದ್ದರು.

LEAVE A REPLY

Please enter your comment!
Please enter your name here