ಹಾವಿನಂತೆ ಕಾಣುವ ಪಡವಲಕಾಯಿ ಉಪಯೋಗಗಳು ತಿಳಿದಿದ್ದೀಯಾ? 

0

ಹಾವಿನಂತೆ ಇರುವ ಪಡವಲಕಾಯಿಯನ್ನು ನೀವೆಲ್ಲರೂ ನೋಡಿರುತ್ತೀರಿ. ಆದರೆ ಇದರಲ್ಲಿರುವ ಆರೋಗ್ಯಕರ ಗುಣಗಳು ನಿಮ್ಮೆಲ್ಲರಿಗೂ ಅಷ್ಟು ತಿಳಿದಿರುವುದಿಲ್ಲ. ಈ ಪಡವಲಕಾಯಿ ಬಹಳ ಆರೋಗ್ಯಕರ. ಇದರಲ್ಲಿ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿದೆ.
             ಇದರಲ್ಲಿರುವ ವಿಟಮಿನ್ ಎ,ಬಿ,ಸಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಅಂಶ  ಎಲ್ಲಾ ರೀತಿಯಲ್ಲೂ ನಮ್ಮದೇಹಕ್ಕೆ ಸಹಾಯಕಾರಿ. ಹಾಗಾಗಿ ಪಡವಲಕಾಯನ್ನು ನಿಮ್ಮ ಆಹಾರಗಳಲ್ಲಿ ಏಕೆ ಸೇರಿಸಿ ತಿನ್ನಬೇಕು ಅನ್ನೋದು ಇಲ್ಲಿದೆ

ಪಡವಲಕಾಯಿ ಪ್ರಯೋಜನಗಳು

• ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
                 ಈ ಕೋವಿಡ್ ಸಮಯದಲ್ಲಿ ನಮಗೆಲ್ಲರಿಗೂ ಮುಖ್ಯವಾದದ್ದು ರೋಗನಿರೋಧಕ ಶಕ್ತಿ. ಪಡವಲಕಾಯಿ ಸಂಪೂರ್ಣ ರೋಗನಿರೋಧಕ ಗುಣಗಳಿವೆ ಹಾಗಾಗಿ ಇದರ ಸೇವನೆ ಬಹಳ ಲಾಭಕಾರಿ.

• ಹೃದಯದ ಸಮಸ್ಯೆಗಳನ್ನು ತಡೆಗಟ್ಟುತ್ತದೆ:
                    ವಯಸ್ಸಾದವರಲ್ಲಿ ಹೃದಯದ ಸಮಸ್ಯೆಗಳು ಹೆಚ್ಚು ಮಟ್ಟಿಗೆ ಕಾಣಬಹುದು. ಅಡಲಕಾಯಿಸೇವನೆಯಿಂದ ರಕ್ತ ಸಂಚಾರವನ್ನು ಸುಧಾರಣೆ ಮಾಡಬಹುದು ಮತ್ತು ಎಲ್ಲಾ ಹೃದಯದ ಸಮಸ್ಯೆಗಳನ್ನು ತಡೆಗಟ್ಟಬಹುದು. ಎದೆಯ ಸಮಸ್ಯೆ ಇರುವವರು ಪ್ರತಿದಿನ ಪಡವಲಕಾಯಿ ರಸವನ್ನು ಕೂಡ ಸೇವಿಸಿ ಈ ಸಮಸ್ಯೆಗಳಿಂದ ದೂರವಾಗಬಹುದು.

• ಮಧುಮೇಹ ಸಮಸ್ಯೆಗೆ ಪರಿಣಾಮಕಾರಿ:
                  ಕಾಲದಲ್ಲಿ ಮಧುಮೇಹ ಸಮಸ್ಯೆ ಸಾಮಾನ್ಯವಾಗಿದೆ, ಇದನ್ನು ಮಧುಮೇಹ ಔಷಧಿಗಳನ್ನು ಕೂಡ ಕೆಲವು ದೇಶಗಳಲ್ಲಿ ಬಳಸುತ್ತಾರಂತೆ ಮತ್ತು ಇದರಲ್ಲಿ ಬಹಳ ಕಡಿಮೆ ಕೊಬ್ಬಿನಂಶವಿರುವುದರಿಂದ ದೇಹದ ತೂಕವನ್ನು ಇಳಿಸಲು ಕೂಡ ಸಹಾಯಕಾರಿ.

• ದೇಹದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ:
                  ಪಡವಲಕಾಯಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯಲು ಉಪಯೋಗಕಾರಿ ಇದರಲ್ಲಿರುವ ಮೆಗ್ನೀಷಿಯಂ ಕನಿಜಾಂಶವು ಈ ಕಾರ್ಯದಲ್ಲಿ ಬಹಳ ಸಹಾಯಕಾರಿ.

ಹೀಗಾಗಿ ಪಡವಲಕಾಯಿ ನಮ್ಮ  ಆರೋಗ್ಯಕ್ಕೆ ಬಹಳ ಮುಖ್ಯ. ಪಡವಲಕಾಯಿಯನ್ನು ಸೇವಿಸುಲು ಮರೆಯಬೇಡಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

– ತನ್ವಿ. ಬಿ

LEAVE A REPLY

Please enter your comment!
Please enter your name here