ರೈತಮಿತ್ರರೇ ಈ ಸುದ್ದಿ‌ ನಿಮಗಾಗಿ : ರೈತರಿಗೆ ಪ್ರತ್ಯೇಕ ಗುರುತಿನ ಕಾರ್ಡ್ ನೋಂದಣಿ ಕಡ್ಡಾಯ :

0

ಹಾಸನ ಫೆ.13 ( ಹಾಸನ್_ನ್ಯೂಸ್ !, ರೈತರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್ ಮಾದರಿಯಲ್ಲಿ ಪ್ರತ್ಯೇಕ ಗುರುತಿನ ಸಂಖ್ಯೆಯ ಐಡಿ ಕಾರ್ಡ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು  ಈಗಾಗಲೇ ರೈತರಿಗೆ ಎಫ್.ಐ.ಡಿ. ಸಹಿತ ಗುರುತಿ ಚೀಟಿ ನೀಡುವ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭಗೊಂಡಿದ್ದು, ರೈತರು ಎಫ್ ಐ ಡಿ ಸಂಖ್ಯೆ ಪಡೆಯಲು ಫ್ರೂಟ್ಸ್-(FRUITS-Farmer Registration and Unified Beneficiary Information System) ತಂತ್ರಾಂಶದಲ್ಲಿ ರೈತರ ನೋಂದಣಿ ಕಡ್ಡಾಯಗೊಳಿಸಿದೆ.

ರೈತರು ಕಡ್ಡಾಯವಾಗಿ ತಮ್ಮ ಎಲ್ಲಾ ಸರ್ವೆ ನಂಬರ್‍ಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಿದ್ದರೆ ಮಾತ್ರ ಗುರುತಿನ ಸಂಖ್ಯೆ (ಎಫ್ ಐ ಡಿ) ದೊರೆಯುತ್ತದೆ.  ರೈತರ ಗುರುತಿನ ಸಂಖ್ಯೆ ಪಡೆದಾಗ ಮಾತ್ರ  ರೈತರು ಬೆಳೆದ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ MSP ಯಲ್ಲಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದು ಎಂದು ಅವರು ತಿಳಿಸಿದರು.

     ಬೆಳೆ ವಿಮೆ ಪರಿಹಾರದ ಮೊತ್ತವನ್ನು ನೇರ ನಗದು ಪಾವತಿ ಮುಖಾಂತರ ಪಡೆಯಲು ಅವಕಾಶ  FRUITS  ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಸಿದ್ದರೆ ಮಾತ್ರ ರೈತರಿಗೆ ಬೆಳೆ ಸಾಲ ಪಡೆಯಲು ಅವಕಾಶವಿದೆ ಎಂದರು.

      FRUITS  ತಂತ್ರಾಂಶದಲ್ಲಿ ರೈತರ ನೋಂದಣಿ ಆಧಾರದ ಮೇಲೆಯೇ ಅತೀವೃಷ್ಠಿ / ಅನಾವೃಷ್ಠಿ ಸಂಭವಿಸಿದ ಸಂದರ್ಭದಲ್ಲಿ ವಿಪತ್ತು ಪರಿಹಾರ ನಿಧಿಯಿಂದ ನೇರ ನಗದು ಪಾವತಿ ಮುಖಾಂತರ ತ್ವರಿತವಾಗಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ಹೇಳಿದರು.

    FRUITS  ತಂತ್ರಾಂಶದಲ್ಲಿ ನೋಂದಾಯಿಸಿದ ರೈತರಿಗೆ ಪಿ.ಎಂ ಕಿಸಾನ್ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಸಹಕಾರಿಯಾಗುತ್ತದೆ. ಹಾಗೂ ಫ್ರೂಟ್ಸ್  ತಂತ್ರಾಂಶದಲ್ಲಿ ನೋಂದಾಯಿಸಿದ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಇತ್ಯಾದಿ ಇಲಾಖೆಗಳ ವಿವಿಧ ಯೋಜನೆಗಳಡಿ ಸವಲತ್ತು ಪಡೆಯಲು ವಿಫುಲ ಅವಕಾಶ

ಗುರುತಿನ ಚೀಟಿಯಿಂದ ರೈತರು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಮತ್ತು ಬ್ಯಾಂಕ್‍ಗಳಲ್ಲಿ ಕ್ರಮವಾಗಿ ವಿವಿಧ ಸವಲತ್ತುಗಳು / ಸಹಾಯಧನ ಮತ್ತು ಕೃಷಿ ಸಾಲ ಪಡೆಯಲು ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದು ರೈತರಿಗೆ ತ್ವರಿತ ಸೇವೆ / ಸವಲತ್ತುಗಳ ಲಭ್ಯತೆಯಾಗುತ್ತದೆ.  ಸದರಿ ಫ್ರೂಟ್ಸ್ ಎಫ್ ಐ ಡಿ ಯು ರೈತರಿಗೆ ಇನ್ನುಮುಂದೆ ಒಂದು ವ್ಯವಹಾರಿಕ ಗುರುತಿನ ಚೀಟಿಯಾಗಿರುತ್ತದೆ.

ಇದುವರೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡದೇ ಇರುವ ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್, ಖಾತೆ ವಿವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರಗಳನ್ನು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಗ್ರಾಮ ಪಂಚಾಯಿತಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಮಾಹಿತಿಗಳನ್ನು ಸಲ್ಲಿಸಿ ಎಫ್ ಐ ಡಿ ನಂಬರ್ ಪಡೆದುಕೊಳ್ಳಬಹುದು.

    ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‍ಗಳು (FID) ಗೆ ಸೇರ್ಪಡೆಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಈ ಲಿಂಕ್ ಮೂಲಕಖಾತ್ರಿ ಪಡಿಸಿಕೊಳ್ಳಬಹುದಾಗಿದೆ.
https://fruits.karnataka.gov.in/Reports/Search Farmer ID.aspx

ನಿಮ್ಮ ಸರ್ವೆ ನಂಬರ್‍ಗಳು ಸೇರ್ಪಡೆಯಾಗಿರದಿದ್ದಲ್ಲಿ ಕೂಡಲೇ ಎಲ್ಲಾ ಸರ್ವೆ ನಂಬರ್‍ಗಳನ್ನು ಸೇರ್ಪಡಿಗೊಳಿಸಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು -ಸಹಾಯಕ ಕೃಷಿ ನಿರ್ದೇಶಕರು

LEAVE A REPLY

Please enter your comment!
Please enter your name here