ನಗರದ ಸಹ್ಯಾದ್ರಿ ಚಿತ್ರಮಂದಿರದ ಎದುರು ಸುಸಜ್ಜಿತವಾಗಿ ನಿರ್ಮಾಣ ಗೊಂಡಿರುವ “ಪುಡ್ ಕೋಟ್೯” ಅನ್ನು ಶಾಸಕರಾದ ಪ್ರೀತಂ ಜೆ ಗೌಡ ಅವರು ಇಂದು ಉದ್ಘಾಟಿಸಿದರು

0

ಹಾಸನ: ನಗರದ ಸಹ್ಯಾದ್ರಿ ಚಿತ್ರಮಂದಿರದ ಎದುರು ಸುಸಜ್ಜಿತವಾಗಿ ನಿರ್ಮಾಣ ಗೊಂಡಿರುವ “ಪುಡ್ ಕೋಟ್೯” ಅನ್ನು ಶಾಸಕರಾದ ಪ್ರೀತಂ ಜೆ ಗೌಡ ಅವರು ಇಂದು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಗ್ರಾಹಕರ ಸಮಸ್ಯೆ ನೋಡಿ ಪುಡ್ ಕೋರ್ಟ್ ಯೋಜನೆಯನ್ನೂ ರೂಪಿಸಲಾಯಿತು.ಪುಡ್ ಕೋರ್ಟ್ ನಲ್ಲಿ 88 ಜನರಿಗೆ ನಿರ್ಮಿಸಿ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ನಗರದ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆನ್ನೂ ಮಾಡಲಾಗಿದ್ದು ಕೆಳ ಭಾಗದಲ್ಲಿ ಯು.ಜಿ. ಡಿ ವ್ಯವಸ್ಥೆಯನ್ನು ಇದೆ ಎಂದು ಹೇಳಿದರು.
2 ಅಂಗಡಿ ಒಂದು ಸಿಂಕ್ ನಿರ್ಮಿಸಲಾಗಿದೆ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆಯ ಇನೊಂದು ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪುಡ್ ಕೋರ್ಟ್ ಅನ್ನು ಸ್ವಚ್ಛತೆಯಿಂದ ನೋಡಿಕೊಂಡು ಹಾಸನ ನಗರವನ್ನು ಆರೋಗ್ಯಕರ ನಗರವನ್ನಾಗಿಸಲು ಸಹಕರಿಸಬೇಕು ಎಂದು ಹೇಳಿದರು.
ನಗರದ ಅನೇಕ ಭಾಗದಲ್ಲಿ ಟ್ಯಾಕ್ಸಿ ಚಾಲಕರು,ಆಟೋ ಚಾಲಕರಿಗೆ ನಿಲ್ದಾಣದ ವ್ಯವಸ್ಥೆ ,ಬೀದಿ ಬದಿ ವ್ಯಾಪಾರಿಗಳಿಗೆ ಸೇರಿದಂತೆ ನಗರದ ಇನ್ನೊಂದು ಭಾಗದಲ್ಲಿ ಪುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ ಎಂದರು.

ಬಿಲ್ಡಿಂಗ್ ಕಟ್ಟುವುದೇ ಅಭಿವೃದ್ಧಿಯಲ್ಲ:
100-200 ಕೋಟಿ ರೂ. ವೆಚ್ಚದಲ್ಲಿ ಬಿಲ್ಡಿಂಗ್ ಕಟ್ಟುವುದೇ ಅಭಿವೃದ್ಧಿಯಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಟಾಂಗ್ ನೀಡಿದ ಪ್ರೀತಂ, ಬಡಜನರು, ಶ್ರಮಿಕರು, ಬೀದಿಬದಿ ವ್ಯಾಪಾರಿಗಳ ಆಶೋತ್ತರಗಳ ಪರವಾಗಿ ಕೆಲಸ ಮಾಡುವುದು. ಅವರ ನೆಮ್ಮದಿ ಜೀವನಕ್ಕೆ ಒತ್ತಾಸೆಯಾಗುವುದು ಮುಖ್ಯ ಎಂದರು.
ನಾನು ಗುತ್ತಿಗೆದಾರರನ್ನು ಅಭಿವೃದ್ಧಿ ಪಡಿಸಲು ಶಾಸಕನಾಗಿಲ್ಲ. ಫುಡ್ಕೋರ್ಟ್ ಆರಂಭದಲ್ಲಿ ಕೆಲವರು ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ಮಾಡಲು ಬಂದರು. ಆದರೆ ನಾನು 2023 ಏಪ್ರಿಲ್ ವರೆಗೂ ಅಭಿವೃದ್ಧಿ ಮಾಡುತ್ತೇನೆ. ಚುನಾವಣೆ ಸಂದರ್ಭದಲ್ಲಷ್ಟೇ ರಾಜಕೀಯ. ಆ ವೇಳೆ ನಿಮ್ಮ ಬಳಿ ಬರುತ್ತೇನೆ. ಮುಂದಿನ 5 ವರ್ಷ ಮತ್ತೆ ಶಾಸಕನಾಗಲು ಬೆಂಬಲಿಸಿ ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷರಾದ ಮೋಹನ್ ಕುಮಾರ್, ಹುಡಾ ಅಧ್ಯಕ್ಷರಾದ ಲಲಾಟ ಮೂರ್ತಿ,ನಗರ ಸಭೆ ಸದಸ್ಯರಾದ ಪುನೀತ್ , ಸಹ್ಯಾದ್ರಿ ಪುಡ್ ಕೋರ್ಟ್ ವರ್ತಕರ ಸಂಘದ ಅಧ್ಯಕ್ಷರಾದ ರಮೇಶ್ ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here