ಹಾಸನ: ವ್ಯಕ್ತಿಯ ಬೇರೆಡೆ ಕೊಲೆ ಮಾಡಿ ತಾಲೂಕಿನ
ಶಾಂತಿಗ್ರಾಮ ಬಳಿಯ ರೈಲ್ವೆ ಹಳಿ ಮೇಲೆ ಬಿಸಾಡಲು ಬಂದಿದ್ದ ಮೂವರು ಹಂತಕರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಮೃತದೇಹವನ್ನು ಬೊಲೆರೊ ಕಾರಿನಲ್ಲಿ ತಂದು ಶಾಂತಿಗ್ರಾಮ ಬಳಿಯ ಬೆಣಗಟ್ಟೆ ಸಮೀಪದ ರೈಲ್ವೆ ಟ್ರ‍್ಯಾಕ್‌ನಲ್ಲಿ ಬಿಸಾಡುವ ವೇಳೆ ಕಾರು ಪಲ್ಟಿಯಾಗಿದೆ. ಶವದ ಸಮೇತ ಟ್ರಾಕ್ ಮೇಲೆ ಬೊಲೆರೊ ವಾಹನ ಉರುಳಿಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಸುದ್ದಿ ತಿಳಿಸಿದ್ದಲ್ಲದೆ ನಂತರ ಅವರನ್ನು ಹಿಡಿದು ಒಪ್ಪಿಸಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದ ಡಾಬಾವೊಂದರಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿಯಲ್ಲಿ ಅಲ್ಲೇ ನೌಕರಿಗಿದ್ದ ಮೂವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿಗಳ ಬಗ್ಗೆ ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
ಡಾಬಾ ಯಾವುದು? , ಕೆಲಸ ಮಾಡುತ್ತಿದ್ದ ವ್ಯಕ್ತಿ ಯಾರು ?, ಕೊಲೆಗೆ ಕಾರಣವೇನು ? ಎಂಬುದರ ಬಗ್ಗೆ ಮಾಹಿತಿ ಇಂತಿದೆ …
ಸಿಕ್ಕಿಬಿದ್ದ ನಾಲ್ವರು ಹಂತಕರು
ಡಾಬಾ ನಡೆಸುತ್ತಿದ್ದ ಆಂಧ್ರ ಮೂಲದ ರಾಘು, ಗದಗ ಜಿಲ್ಲೆಯ ಶಶಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರವಿಕುಮಾ ಮತ್ತು ಬಾಗಲಕೋಟೆ ಮೂಲ ರಾಜಪಾಷ ಬಂಧಿತ ಆರೋಪಿಗಳು. ಇವರಲ್ಲಿ ರಾಜ ಎಂಬಾತನನ್ನು ಪ್ರತ್ಯೇಕವಾಗಿ ಬಂಧಿಸಲಾಗಿದೆ ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ. ನಡೆದಿದ್ದೇನು: ಬಂಧಿತ ಆರೋಪಿಗಳು ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗಾಡೇನಹಳ್ಳಿಯಲ್ಲಿ ಡಾಬಾ ನಡೆಸುತ್ತಿದ್ದರು. ಇಲ್ಲಿ ಬೆಳಗಾವಿ ಮೂಲದ
ಆನಂದ್ ಅಲಿಯಾಸ್ ಉಮೇಶ್ (52) ಎಂಬಾತ ಕೆಲಸ ಮಾಡುತ್ತಿದ್ದ. ಈತನಿಗೆ ದಿನಗಳಿಂದ ಸಂಬಳ ನೀಡಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಸಣ್ಣ ಜಗಳ ನಡೆದಿತ್ತು. ಈ ನಡುವೆ ಆನಂದ್ ಡಾಬಾ ಕ್ಯಾಶ್‌ಕೌಂಟರ್‌ನಿಂದ ಪಣ ತೆಗೆದುಕೊಂಡಿದ್ದ ಎನ್ನಲಾಗಿದೆ. ಇದರಿಂದ ಕುಪಿತರಾದ ರಘು ಅಂಡ್ ಗ್ಯಾಂಗ್, ಆನಂದ್ ಮೇಲೆ ಹಲ್ಲೆ ಮಾಡಿತ್ತು. ಜಿಲ್ಲೆಯಲ್ಲಿ ಗಂಭೀರ ಗಾಯಗೊಂಡಿದ್ದ ಆನಂದ್
ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ. ಮುಚ್ಚಿಹಾಕಲು ಯತ್ನ: ಕೊಲೆಯಾದ ಆನಂದನ ಶವವನ್ನು ರೈಲ್ವೆ ಹಳಿ ಮೇಲೆ ಎಸೆದು ರೈಲು ಡಿಕ್ಕಿಯಿಂದ ಮೃತಪಟ್ಟಿದ್ದಾನೆಂದು ಬಿಂಬಿಸಲು ಈ ಹಂತಕರು ಪ್ಲಾನ್ ಮಾಡಿದ್ದರು.
ಸಿಕ್ಕಿಬಿದ್ದ ನಾಲ್ವರು ಹಂತಕರು
ಮಂಗಳವಾರ ಮಧ್ಯಾಹ್ನ ಹಾಡ ಹಗಲೇ ಕಂಠಪೂರ್ತಿ ಕುಡಿದು ಆನಂದನ ಮೃತದೇಹವನ್ನು ತಾಲೂಕಿನ ಶಾಂತಿಗ್ರಾಮ ಬಳಿಯ ಬೆಂಗಳೂರು- ಹಾಸನ ರೈಲ್ವೆ ಮಾರ್ಗದ ಹಳಿ ಮೇಲೆ ಎಸೆಯಲು ಮುಂದಾಗಿದ್ದರು.
ಸಿಕ್ಕಿ ಬಿದಿದ್ದು ಹೇಗೆ: ಈ ವೇಳೆ ಮೃತದೇಹದೊಂದಿಗೆ ಕಾರಿನಲ್ಲಿದ್ದ ಮೂವರು
ಕಂಠಪೂರ್ತಿ ಕುಡಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ನೋಡ ನೋಡುತ್ತಿದ್ದಂತೆಯೇ ಏರಿ ಮೇಲಿಂದ ಬೊಲೆರೋ ವಾಹನವೊಂದು ಪ್ರಪಾತದಂತಿದ್ದ ರೈಲ್ವೆ ಹಳಿ ಮೇಲೆ ಉರುಳಿ ಬಿದ್ದಿದೆ. ಗಾಬರಿಗೊಂಡ ಜನರು ಸ್ಥಳಕ್ಕೆ ದೌಡಾಯಿಸಿದಾಗ ಕಾರಿನೊಳಗಿದ್ದ ಇಬ್ಬರು ಹೇಗೋ ಜಿಗಿದು ಹೊರ ಬಂದರೆ, ಚಾಲಕ ಅದರೊಳಗೆ
ಸಿಲುಕಿ ನರಳಾಡುತ್ತಿದ್ದ. ಎಲ್ಲರನ್ನೂ ಹೊರಗೆಳೆದ ಸ್ಥಳೀಯರು, ಶಾಂತಿಗ್ರಾಮ ಪೊಲೀಸರಿಗೆ ಸುದ್ದಿ ತಿಳಿಸಿದರು.
ಈ ಕೊಲೆ ರಹಸ್ಯ ಬಯಲು:
ಸ್ಥಳಕ್ಕೆ ಬಂದ ಪೊಲೀಸರು ವಾಹನ ಪರಿಶೀಲನೆ ಮಾಡಿದಾಗ ಬೆಚ್ಚಿ ಬೀಳುವ ಸಂಗತಿ ಗಮನಕ್ಕೆ ಬಂದಿತು. ಪರಿಶೀಲನೆ ನಡೆಸಿದಾಗ ಬೇರೆಡೆ ಕೊಲೆ ಮಾಡಿದ್ದ ಮೃತದೇಹವೊಂದನ್ನು ವಾಹದೊಳಗಿಟ್ಟುಕೊಂಡು ದುರುಳರು ರೈಲ್ವೆಗೇಟ್ ಮೇಲೆ ಎಸೆಯೋಕೆ ಬಂದಿದ್ದರು ಎಂಬುದು ಗೊತ್ತಾಗಿದೆ. ಈ ಗೊತ್ತಾಗಿದೆ. ಈ ಮೂಲಕ ಅಪರಿಚಿತನನ್ನು ಕೊಂದು ರೈಲಿಗೆ ಸಿಕ್ಕಿ ಸತ್ತಿದ್ದಾನೆ ಎಂದು ಬಿಂಬಿಸಿ ಮುಚ್ಚಿಹಾಕೋ ಪ್ಲಾನ್ ಮಾಡಿದ್ದವರ ಅಸಲೀಯತ್ತು ಬೆಳಕಿಗೆ ಬಂದಿದೆ. ಕೂಡಲೇ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
# ಕಂಠಪೂರ್ತಿ ಕುಡಿದಿದ್ದ ತಂಡ:
ವಾಹನದೊಳಗೆ ಹೊದಿಕೆಗಳಲ್ಲಿ ಮೃತದೇಹವನ್ನು ಸುತ್ತಿ ಇಟ್ಟಿಕೊಂಡು ಬಂದಿದ್ದ ತಂಡ, ಅದನ್ನು ಹಾಡ ಹಗಲೇ ರೈಲ್ವೆ ಹಳಿ ಮೇಲೆ ಬಿಸಾಡಿ ತಾವು ಬೇರೆ ಬಚಾವಾಗಲು ಪ್ರಯತ್ನ ಮಾಡಿತ್ತು. ಆದರೆ ಕುಡಿದ ಮತ್ತಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ವಾಹನ ನಿಯಂತ್ರಣ ತಪ್ಪಿಕೆಳಗೆ ಉರುಳಿದೆ.
ಡಾಬಾ ನೋಡಿಕೊಳ್ಳುತ್ತಿದ್ದ ರಘು ಹಾಗು ಇತರೆ ಮೂವರನ್ನು ವಶಕ್ಕೆ ಪಡೆದಿರುವ ಶಾಂತಿಗ್ರಾಮ ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಕೊಲೆಮಾಡಿ ಮೃತದೇಹವನ್ನು ಬೇರೆಡೆ ಎಸೆದು ಪ್ರಕರಣ ಮುಚ್ಚಿಹಾಕೋ ಯತ್ನ ನಡೆದಿತ್ತಾ, ಅಥವಾ ಏನಾದ್ರು ನಡದಿದೆಯಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.