ಬೆಳ್ಳುಳ್ಳಿ ದೇಸಿ ಅಡುಗೆಗಳಿಗೆ ಮಾತ್ರವಲ್ಲ, ಎಲ್ಲ ವಿಭಿನ್ನ ತಿನಿಸುಗಳಿಗೆ ಅದ್ಭುತವಾದ ರುಚಿ ಕೊಡುವ ಒಂದು ಪದಾರ್ಥ. ಬೆಳ್ಳುಳ್ಳಿಯಿಂದ ಅಡುಗೆಯ ರುಚಿ ಸಾಕಷ್ಟು ಹೆಚ್ಚಾಗುತ್ತದೆ, ಆರೋಗ್ಯಕರವಾದ ಬೆಳ್ಳುಳ್ಳಿ ಬಗ್ಗೆ ಇವತ್ತಿನ ವಿಚಾರ.
ಬೆಳ್ಳುಳ್ಳಿಯ ಪ್ರಯೋಜನಗಳು:
° ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಇದರಲ್ಲಿರುವ ಅಲಿಸಿನ್ ಅಂಶವು ವೈರಸ್ ವಿರುದ್ಧ ಹೊರಾಡುತ್ತದೆ. ಇದು ಬ್ಯಾಕ್ಟೀರಿಯಾ, ಕ್ರಿಮಿ, ಕೀಟಗಳಿಂದ ಹೋರಾಡಲು ಸಹಾಯಕಾರಿ. ಹಾಗಾಗಿ ಬೆಳ್ಳುಳ್ಳಿ ದೇಹದ ಆರೋಗ್ಯಕಾಗಿ ಬಹಳ ಒಳ್ಳೆಯದು.
° ಹೃದಯದ ಆರೋಗ್ಯಕ್ಕೆ ಉಪಯೋಗಕಾರಿ:
ವಯಸ್ಸಾದವರಲ್ಲಿ ನರಗಳ ಸೆಳೆತ ಹೆಚ್ಚು. ಕೆಲವರಿಗೆ ಇದೊಂದು ದೊಡ್ಡ ತೊಂದರೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ರಕ್ತನಾಳಗಳಲ್ಲಿ ಒತ್ತಡ ಈ ಸಮಸ್ಯೆಯನ್ನು ದೂರಮಾಡಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ.
° ಚರ್ಮದ ಆರೋಗ್ಯಕ್ಕೆ ಬಹಳ ಲಾಭಕಾರಿ:
ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್ ಅಂಶವು ಹೆಚ್ಚು ಕಂಡಿದೆ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಬರುವುದೇ ಬ್ಯಾಕ್ಟೀರಿಯ ಮತ್ತು ಫಂಗಸ್ ಗಳಿಂದ ಹಾಗಾಗಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಬೆಳ್ಳುಳ್ಳಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಅಂಶಗಳು ಹಲ್ಲಿನ ಆರೋಗ್ಯವನ್ನು ಕಾಪಾಡಲು ಸಹಾಯಕಾರಿ. ಆಹಾರ ಪದ್ಧತಿಗಳಿಂದ ಹಲ್ಲಿನ ಮೇಲೆ ಬ್ಯಾಕ್ಟೀರಿಯಾಗಳು ಕೂರುವುದು ಸಹಜ ಬೆಳ್ಳುಳ್ಳಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಬೆಳ್ಳುಳ್ಳಿಯನ್ನು ಸೇವಿಸದೆ ಇರಬೇಡಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ತನ್ವಿ. ಬಿ