ಹಾಸನ / ಆಲೂರು : 12 ವರ್ಷಗಳ ಹಿಂದೆ ಪತ್ರಿಕೆಯೊಂದನ್ನು ಓದುತ್ತಿದ್ದಾಗ, ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ದೇಹವನ್ನು ಆಸ್ಪತ್ರೆಗೆ ದಾನ ಮಾಡುವುದರೊಂದಿಗೆ ಕೆಲ ಅಂಗಾಂಗಗಳನ್ನು ಇಬ್ಬರಿಗೆ ಅಳವಡಿಸಿ ಅವರ ಬಾಳಿಗೆ ಬೆಳಕಾಗಿರುವ ಘಟನೆ ತಿಳಿದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಲಗೆರೆ ಗ್ರಾಮದ ಮಹಿಳೆ ಉಮಾದೇವಿ (67) ನಿನ್ನೆ ನಿಧನರಾದ ನಂತರ . ಅವರ ಇಚ್ಛೆಯಂತೆ ಪತಿ (ಷಣ್ಮುಖ) ಹಾಗೂ ಕುಟುಂಬಸ್ಥರು ಮುಂದೆ ಬಂದು ಮೈಸೂರು JSS ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕುಟುಂಬಸ್ಥರು ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ಮರಣಾ ನಂತರ ಇಬ್ಬರೂ ದೇಹದಾನ ಮಾಡಲು ತೀರ್ಮಾನಿಸಿದಂತೆ . ಪತ್ನಿ ಮೃತಪಟ್ಟಿದ್ದು ವಾಗ್ದಾನದಂತೆ ದೇಹವನ್ನು ಹಸ್ತಾಂತರ ಮಾಡಲಾಗಿದ್ದು ., ಪತ್ನಿಯ ಅಂಗಾಗಗಳು ಆರೋಗ್ಯ ಕ್ಷೇತ್ರ ಹಾಗೂ ಇತರೆ ಅಂಗಾಂಗ ಕೊರತೆಯವರಿಗೆ ಉಪಯುಕ್ತ ವಾಗುವಂತೆ ಬಳಸುವಂತಾಗಲಿ ಎಂದು ಧೈರ್ಯ ಹಾಗೂ ಸಾರ್ಥಕ ಹಿರಿಮೆ ಮೆರೆದರು .