ಪಾಸಿಟಿವ್ ಕಡಿಮೆಯಾದ ಕೂಡಲೇ ಲಾಕ್ ಡೌನ್ ಸಡಿಲಗೊಳಿಸಿ
ಛೇಂಬರ್ ಆಫ್ ಕಾಮರ್ಸ್ನಿಂದ ಡಿಸಿಗೆ ಮನವಿ
ಹಾಸನ: ಕೊರೋನಾ ಪಾಸಿಟಿವ್ ಶೇಕಡವಾರು ೫ಕ್ಕಿಂತ ಕಡಿಮೆ ಬಂದ ಕೂಡಲೇ ಲಾಕ್ ಡೌನ್ ನನ್ನು ಸಲ್ಪ ಮಟ್ಟಿಗಾದರೂ ಸಡಿಲಗೊಳಿಸುವಂತೆ ಹಾಸನ ಛೇಂಬರ್ಸ್ ಆಪ್ ಕಾಮರ್ಸ್ ನಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ರವರಿಗೆ ಮನವಿ ಸಲ್ಲಿಸಲಾಯಿತು.
ಕೊರೋನಾ ಮೊದಲನೇ ಅಲೆ ಮತ್ತು ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಜಿಲ್ಲಾಡಳಿತ ಮತ್ತು ವೈದ್ಯಕೀಯ ವ್ಯವಸ್ಥೆ ಹಾಗೂ ಶ್ರಮಕ್ಕೆ ನಾವುಗಳು ಶ್ಲಾಘಿಸುತ್ತೇವೆ. ಹಾಸನದಲ್ಲಿ ಕೊರೋನಾ ಪಾಸಿಟಿವ್ ಪ್ರಕಣಗಳು ಕಡಿಮೆಯಾದ ಕೂಡಲೇ ಲಾಕ್ ಡೌನ್ ನನ್ನು ಸಲ್ಪವಾದರೂ ಸಡಿಲಗೊಳಿಸಬೇಕು ಎಂದು ಹಾಸನ ಜಿಲ್ಲೆಯ ವ್ಯಾಪಾರಸ್ತರ ಹಾಗೂ ಉದ್ಯಮಿಗಳ ಪರವಾಗಿ ವಿಷಯವನ್ನು ಚರ್ಚೆ ಮಾಡಿ ಮನವಿ ಸಲ್ಲಿಸಲಾಗಿದೆ. ವ್ಯಾಪಾರ ಮಾಡುವ ಎಲ್ಲಾ ವರ್ತಕರಿಗೂ ಹಾಗೂ ಉಧ್ಯಮಿಗಳಿಗೆ ಕಾನೂನು ನಿಯಮದ ಬಗ್ಗೆ ತಿಳಿಸಿ ಅವರ ಪುನಶ್ಚೇತನಕ್ಕೆ ಸಂಪೂಣ್ ಸಹಕಾರ ಕೊಡಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಹಾಸನ ಛೇಂಬರ್ಸ್ ಆಪ್ ಕಾಮರ್ಸ್ನ ಅಧ್ಯಕ್ಷರಾದ ಧನಪಾಲ್(ಎಫ್ ಕೆ ಸಿ ಸಿ ಐ) ಮತ್ತು ಉಪಾಧ್ಯಕ್ಷರು ಮತ್ತು ಉಧ್ಯಮಿಗಳಾದ ಹೆಚ್.ಎ. ಕಿರಣ್ ಇತರರು ಉಪಸ್ಥಿತರಿದ್ದರು.