ಮೈಸೂರು ಯುನಿವರ್ಸಿಟಿ 102ನೇ ವರ್ಷ ಘಟಿಕೋತ್ಸವ

0

ಹಳೇಬೀಡು: ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಇತಿಹಾಸ ವಿಭಾಗದ ವಿದ್ಯಾರ್ಥಿನಿ, ಹಳೇಬೀಡಿನ ಕಾವ್ಯಾ ರಾಜ್ 5 ಕಾವ್ಯಾ ರಾಜ್ ಚಿನ್ನದ ಪದಕ ಮೈಸೂರಿನ ಕ್ರಾಫರ್ಡ್ ಹಾಲ್‌ನಲ್ಲಿ ಮಂಗಳವಾರ ನಡೆದ 102ನೇ ಘಟಿಕೋತ್ಸವದಲ್ಲಿ ಪಡೆದರು

ಕಾವ್ಯಾ 1ರಿಂದ ಪದವಿಯವರೆಗೆ ಹಳೇಬೀಡಿನಲ್ಲಿ ಶಿಕ್ಷಣ ಪೂರೈಸಿದ್ದರು. ಪದವಿಯಲ್ಲೂ ಚಿನ್ನದ ಪದಕ ಪಡೆದಿದ್ದವರ ಹಾದಿ ಸುಲಭವಾಗಿರಲಿಲ್ಲ

ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿರುವ ತನ್ನ ತಂದೆ ಮಂಜುನಾಥ್, ತಾಯಿ  ಭಾಗ್ಯ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಲ್ಲದೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಪತಿ ಅನುಕುಮಾರ್‌ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕಾವ್ಯಾ ಅವರ ಓದಿಗೆ ಸಹಕಾರ ನೀಡುತ್ತಿರೋದು ಖುಷಿ ತಂದಿದೆ ಎಂದರು

4 ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿತಂದ ರಘು ನಾಯಕ್ ಮತ್ತೊಬ್ಬರು

ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿ ರಘು ನಾಯಕ್ ಮೈಸೂರು ವಿವಿ ಘಟಿಕೋತ್ಸವದಲ್ಲಿ 4 ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಜಿಲ್ಲೆಯ ಐದಳ ಕಾವಲು ಗ್ರಾಮದ ಭಾಗ್ಯ ಬಾಯಿ ಹಾಗೂ ಯೋಗೇಶ ನಾಯಕ್ ಅವರ ಪುತ್ರ ರಘು ನಾಯಕ್ ಮೈಸೂರು ವಿವಿಯ ಹಾಸನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ವಿಭಾಗದಲ್ಲಿ 2021-22ನೇ ಸಾಲಿನಲ್ಲಿ ಬರೋಬ್ಬರಿ 4 ಚಿನ್ನದ ಪದಕ ಪಡೆದಿರುತ್ತಾರೆ. ಕಲಾವಿದರಾದ ಕುಮಾರ್ ಕಟ್ಟೆ ಬೆಳಗುಲಿ ಅವರ ಮಾರ್ಗದರ್ಶನದಲ್ಲಿ ರಘು ನಾಯಕ್ ಅವರು ನಾನಾ ಇಲಾಖೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಜಾನಪದ ಸೇವೆ ಮಾಡುತ್ತ ಓದು ಮುಂದುವರಿಸಿದ ಅವರ ಸಾಧನೆಗೆ ಹಾಸನ ಕಾಲೇಜಿನ ಪ್ರಾಂಶುಪಾಲರಾದ ಶರಣಪ್ಪ ಮತ್ತು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಹಾಸನ ಜನತೆಯ ಪರವಾಗಿ ಇವರಿಬ್ಬರಿಗೂ ಧನ್ಯವಾದಗಳು

LEAVE A REPLY

Please enter your comment!
Please enter your name here