ಸೋಂಕಿತರ ಚಲನವಲನವನ್ನು ನಿಗಾವಹಿಸಿ ಜಿಲ್ಲಾಧಿಕಾರಿ ಸೂಚನೆ

    0

    ಹಾಸನ ಗ್ರಾಮೀಣ ಬಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಾಲಿನಂತೆ  ಹೊರರಾಜ್ಯ ಹಾಗೂ ಬೆಂಗಳೂರಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಿ ಕೈಗೆ ಸೀಲ್ ಹಾಕುವುದರ ಮೂಲಕ ಮನೆಯಲ್ಲಿಯೇ ಇರುವಂತೆ ಸೂಚಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸೂಚನೆ ನೀಡಿದ್ದಾರೆ. 

    ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೊರೋನಾ ನಿಯಂತ್ರಣ ಕುರಿತು  ಎಲ್ಲಾ ತಹಸೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮಗಳಲ್ಲಿ ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿದ್ದು ಎಲ್ಲಾ ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ನಿಗಾವಹಿಸಿ ತಂಡವಾಗಿ ಕಾರ್ಯನಿರ್ವಹಿಸಿ ಎಂದು ಅವರು ಹೇಳಿದರು. 

    ಗ್ರಾಮೀಣ ಭಾಗದಲ್ಲಿ ಮನೆಗಳಲ್ಲಿ ಹೋಮ್ ಐಸುಲೇಶನ್‍ನಲ್ಲಿ ಇರುವವರ ಮೇಲೆ  ಹೆಚ್ಚಿನ ಗಮನಹರಿಸಿ ಹಾಗೂ ಕೋವಿಡ್ ಪಾಸಿಟಿವ್ ಬಂದವರು ಮನೆಯಲ್ಲಿಯೇ ಉಳಿಯಲು ಪ್ರತ್ಯೇಕ ಸ್ಥಳಾವಕಾಶ ಇಲ್ಲದಿದ್ದರೆ ಅಂತಹವರವನ್ನು  ಗ್ರಾಮಗಳಲ್ಲಿನ ಶಾಲೆಗಳಿಗೆ ಕರೆತಂದು  ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು. 

    ತಾಲ್ಲೂಕಿನಲ್ಲಿ ಹೆಚ್ಚಿನ ಕೋವಿಡ್ ಕೇರ್ ಕೇಂದ್ರಗಳನ್ನು  ತೆರೆಯಿರಿ ಜೊತೆಗೆ ಪೌಷ್ಠಿಕ  ಆಹಾರವನ್ನು ನೀಡಿ ಹಾಗೂ ಯಾವುದೆ ರೀತಿಯ ಮಾತ್ರೆಗಳು ಕೊರತೆಯಾಗದಂತೆ ನೋದಿಕೊಳ್ಳಿ  ಎಂದರಲ್ಲದೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ನಾಲ್ಕು ಮಂದಿ ಸ್ಟಾಫ್ ನರ್ಸ್  ಇರಬೇಕು ಹಾಗೂ ಇಬ್ಬರೂ ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವಂತೆ ಹೇಳಿದರು. 

    ಯಾವಾ ಯಾವ ಗ್ರಾಮಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದಿಯೋ ಅಲ್ಲಿ ಸೋಂಕಿತರನನು  ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರಿಸಿ ಚಿಕಿತ್ಸೆ ನೀಡಿ ಎಂದರಲ್ಲದೆ ಅವುಗಳನ್ನು  ಕಂಟೈನಮೆಟ್ ಜೋನ್ ಎಂದು ಘೋಷಿಸಿ ಎಂದರು. 

    ಅರಸೀಕೆರೆ ಶಾಸಕರಾದ ಶಿವಲಿಂಗೇಗೌಡ ಅವರು ವಿಡಿಯೋ ಸಂವಾದದಲ್ಲಿ  ಮಾತನಾಡಿ ಸೊಂಕಿತರು   ಮನೆಯಲ್ಲಿ ಚಿಕಿತ್ಸೆ ಪಡೆಯುವುದರಿಂದಲೆ ಇತರರಿಗೆ ಹರಡುತ್ತಿದೆ ಆದ್ದರಿಂದ ಅವರನ್ನು  ಕೋವಿಡ್ ಕೇರ್ ಕೇಂದ್ರಗಳಿಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡಿ ಎಂದರು.

    ಪ್ರತಿ ಹೋಬಳಿ ಹಾಗೂ ಗ್ರಾಮಗಳಿಗೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿ  ಪಾಸಿಟಿವ್ ಬಂದವರು ಮನೆಯಲ್ಲಿ ಚಿಕಿತ್ಸೆ ಪಡೆಯಲು ಸೂಕ್ತ  ವ್ಯವಸ್ಥೆ ಇರುವುದನ್ನು  ಪರಿಶೀಲಿಸುವಂತೆ ಸೂಚಿಸಿ ಎಂದು ಅವರು ಒತ್ತಾಯಿಸಿದರು. 

    ಬೇಲೂರು ಶಾಸಕರಾದ ಲಿಂಗೆಶ್ ಅವರು   ಮಾತನಾಡಿ ತಮ್ಮ ಕ್ಷೇತ್ರದಲ್ಲಿ  ಆಬುಲೆನ್ಸ್‍ಗಳ ಕೊರತೆಯಿದ್ದು  4 ಆಂಬುಲೆನ್ಸ್‍ಗಳನ್ನ ನಿಯೋಜಿಸಿ ಹಾಗೂ 10 ಹೆಚ್ಚುವರಿ ಆಮ್ಲಜನಕ ಸಿಲಿಂಡರ್ ಗಳನ್ನ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

    ಕೋವಿಡ್ ಕೇರ್ ಕೇಂದ್ರಗಳಿಗೆ ಇಬ್ಬರೂ ವೈದ್ಯರನ್ನು ನೇಮಿಸಿ ಕೊರೋನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಕೋರಿದರು. 

    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ. ಎ ಪರಮೇಶ್, ಉಪವಿಭಾಗಧಿಕಾರಿ ಬಿ. ಎ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಹಾಗೂ ಎಲ್ಲಾ ತಾಲ್ಲೂಕಿನ ತಹಶೀಲ್ದಾರ ಮತ್ತಿತರರು ಹಾಜರಿದ್ದರು.

    LEAVE A REPLY

    Please enter your comment!
    Please enter your name here