ಹಾಸನ : ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ನಿರಪೇಕ್ಷಣಾ ಪತ್ರ ನೀಡಿದ ಪ್ರಕರಣ , ಹಾಸನ ಡಿಎಫ್ಓ ಕೆ.ಹರೀಶ್ ಅಮಾನತು , ಅಮಾನತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ.ಎಂ ಆದೇಶ , ಹಾಸನ ಜಿ. ಚನ್ನರಾಯಪಟ್ಟಣ ತಾ. ಶ್ರವಣಬೆಳಗೊಳ ಹೋ. ದಡಿಘಟ್ಟ ಗ್ರಾಮ ಅರಣ್ಯ ಭೂಮಿ , ದಡಿಘಟ್ಟದ ಸರ್ವೆ ನಂ. 224ರ ಅರಣ್ಯ ಭೂಮಿಯಲ್ಲಿ
ಗಣಿಗಾರಿಕೆಗೆ ಅವಕಾಶ ನೀಡಿದ್ದ ಡಿಎಫ್‌ಓ , 21 ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ನಿರಾಕ್ಷೇಪಣಾ ಪತ್ರ ನೀಡಿದ್ದ ಡಿಎಫ್ ಒ ಹರೀಶ್ , 31.03.2023ರಂದು ಎನ್ ಒ ಸಿ ನೀಡುವ ಮೂಲಕ ಅರಣ್ಯ (ಸಂರಕ್ಷಣಾ) ಕಾಯ್ದೆ 1980 ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ , ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಅಮಾನತು ,ಪ್ರಕರಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಪಿಸಿಸಿಎಫ್ ಆರ್.ಕೆ.ಸಿಂಗ್ , ಆರ್.ಕೆ. ಸಿಂಗ್ ವರದಿ
ಹಿನ್ನೆಲೆ ಅಮಾನತು ಗೊಳಿಸಿ ಆದೇಶ ಹೊರಡಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ , ಒಂದು ವಾರದೊಳಗೆ ಕ್ರಮ ವಹಿಸುವಂತೆ ಸೂಚಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ