ಸೈಲೆಂನ್ಸರ್ ಪೈಪ್ ಬದಲಾಯಿಸಿ ಕೊಡುತ್ತಿದ್ದ ಮೆಕಾನಿಕ್ ಅಂಗಡಿಗಳ ಮೇಲೆ ಕಾರ್ಯಾಚರಣೆ ಕರ್ಕಶ ಸೈಲೆಂನ್ಸರ್ ಪೈಪ್‌ಗಳ ವಶಕ್ಕೆ

0

ಹಾಸನ : ನಗರ ವ್ಯಾಪ್ತಿಯಲ್ಲಿ ವೀಲ್ಡಿಂಗ್ ಪುಂಡರ ಹಾವಳಿ ಹೆಚ್ಚಳ ಹಾಗೂ ಕರ್ಕಶವಾಗಿ ಶಬ್ದ ಮಾಡುವ ಸೈಲೆನ್ಸರ್ ಬೈಕ್‌ಗಳ ಓಡಾಟ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಉದಯ್‌ ಭಾಸ್ಕ‌ರ್ ಅವರ ನೇತೃತ್ವದಲ್ಲಿ ಮೆಕಾನಿಕ್ ಹಾಗೂ ಬೈಕ್‌ಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಇಂದು ಖಾಕಿ ಪಡೆ ದಿಢೀರ್ ದಾಳಿ ನಡೆಸಿತು.
ಮುಖ್ಯವಾಗಿ

ಸೈಲೆಂನ್ಸರ್ ಪೈಪ್ ಬದಲಾಯಿಸಿ ಕೊಡುತ್ತಿದ್ದ ಮೆಕಾನಿಕ್ ಅಂಗಡಿಗಳ ಮೇಲೆ ಕಾರ್ಯಾ ಚರಣೆ ನಡೆಸಿ ಹತ್ತಾರು ಕರ್ಕಶ ಸೈಲೆಂನ್ಸರ್ ಪೈಪ್‌ಗಳನ್ನು ವಶಕ್ಕೆ ಪಡೆದರು.
ನಗರದ ಅಜಾದ್ ರಸ್ತೆಯಲ್ಲಿರುವ ಮೆಕಾನಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ಸೈಲೆನ್ಸರ್ ಪೈಪ್‌ ಜೊತೆಗೆ ಕೆಲ ಬೈಕ್‌ಗಳನ್ನು ವಶಪಡಿಸಿಕೊಂಡರು.
ಬೈಕ್‌ಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಅಂಗಡಿಗಳ ಪರಿಶೀಲನೆ ನಡೆಸಿ ಅಕ್ರಮವಾಗಿಟ್ಟಿದ್ದ ಹೆಚ್ಚು ಶಬ್ದ ಬರುವ ಸೈಲೆಂನ್ಸರ್ ಪೈಪ್‌ ಗಳನ್ನು ವಶಕ್ಕೆ ಪಡೆದರು. ಅಲ್ಲದೆ

ಸೈಲೆಂನ್ಸರ್ ಪೈಪ್‌ಗಳನ್ನು ಬದಲಾಯಿಸಿ
ಕೊಡುತ್ತಿದ್ದ ಮೆಕಾನಿಕ್ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಹೀಗೆ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರು.ಈ ವೇಳೆ ನಗರಠಾಣೆ ಪಿಎಸ್‌ಐ ಕುಮಾರ್‌ ಮೊದಲಾದವರಿದ್ದರು. ಕೆಲ ದಿನಗಳ ಹಿಂದೆ

ವೀಲಿಂಗ್ ಹುಚ್ಚಿನಲ್ಲಿ ಯುವತಿಯರಿಗೆ ಡಿಕ್ಕಿ ಹೊಡೆದು ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಇದು ಬಿಗುವಿನ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿತ್ತು.
ನಗರಠಾಣೆ ಪಿಎಸ್‌ಐ ಕುಮಾರ್‌ ಮತ್ತವರ ತಂಡ ದಿಢೀರ್ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ವಶಕ್ಕೆ ಪಡೆದು ಸಂಭಾವ್ಯ ತೊಂದರೆ ತಪ್ಪಿಸಿತ್ತು.

LEAVE A REPLY

Please enter your comment!
Please enter your name here