ತಿಪ್ಪಾರೆಡ್ಡಿ ಆಡಿಯೋ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಆಗಬೇಕಿದೆ -ಶಾಸಕ ಪ್ರೀತಂಗೌಡ

0

ಹಾಸನ: ಗುತ್ತಿಗೆದಾರದಿಂದ ಲಂಚ ಪಡೆದಿರುವ ಬಗ್ಗೆ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಕುರಿತಾದ ಆಡಿಯೋ ಬಿಡುಗಡೆಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಶಾಸಕ ಪ್ರೀತಂ ಜೆ.ಗೌಡ, ‘ ನಾನು ತಿಪ್ಪಾರೆಡ್ಡಿ ಅವರ ವಕ್ತಾರ ಅಲ್ಲ , ಆಡಿಯೋಗಳ ಸತ್ಯಾಸತ್ಯತೆ ಬಗ್ಗೆ ಕೂಡ ಸಾಕಷ್ಟು ಪ್ರಶ್ನೆ ಇರುತ್ತವೆ. ಅವರು ಕಮಿಷನ್ ಕೊಡೋಕು ಮೊದಲೇ ಹೇಳಿದ್ರೆ ಒಪ್ಪಬಹುದಿತ್ತು, ಕಮಿಷನ್ ಪಡೆಯೋದು ಎಷ್ಟು ತಪ್ಪೋ ಕೊಡೋದು ಅಷ್ಟೇ ತಪ್ಪು , ಕೊಟ್ಟವನದು ಮೊದಲ ತಪ್ಪು, ಪಡೆದವರದ್ದು ಎರಡನೇ ತಪ್ಪು ಹಾಗಂತ ಪಡೆದುಕೊಂಡವರು ಸಾಚಾ ಅಂತಲ್ಲ , ಸಾರ್ವಜನಿಕ ಜೀವನದಲ್ಲಿ ಮಾತನಾಡುವಾಗ ಯೋಚನೆ ಮಾಡಿ , ಯಾವುದೇ ಆಡಿಯೋ ಇದ್ದರೂ, ಅದರ ನೈಜತೆ ನೋಡಬೇಕಾಗುತ್ತೆ ಎನ್ನುವ ಮೂಲಕ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿರೋ ಅಸಲಿಯೋ, ನಕಲಿಯೋ ಎಂದು ಅನುಮಾನ ‘

ಮತ್ತೆ ಹಲವು ಶಾಸಕರ, ಸಚಿವರ ಆಡಿಯೋ ಇದೆ ಎಂಬ ಹೇಳಿಕೆಗೆ ‘ ಅವರ ಬಳಿ ಮಾಹಿತಿ ಏನಾದ್ರೂ ಇದ್ದರೆ ಕೊಡೋಕು ಮೊದಲೇ ಬಿಡುಗಡೆ ಮಾಡಬೇಕಿತ್ತು., ಈಗ ಚುನಾವಣೆ ವೇಳೆಯಲ್ಲಿ ಯಾವ ಉದ್ದೇಶ ದಿಂದ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ , ಬೇರೆಯವರದ್ದು ಏನಿದೆ, ಐದು ವರ್ಷಗಳ ಹಿಂದಿನದ್ದು ಏನಾದ್ರೂ ವೀಡಿಯೊ ಇದೆಯಾ ಅನ್ನೋದನ್ನು ಜನ ಕಾಯುತ್ತಿರುತ್ತಾರೆ. ಇಂತಹ ಆಡಿಯೊ ವೀಡಿಯೋ ಗಳಿಗೆ ಹೆಚ್ಚಿನ ಮಹತ್ವ ಕೊಡೋದು ಬೇಡ , ಅದು ಯಾವ ಸಂದರ್ಭದಲ್ಲಿ ಏನಾಗಿರುತ್ತೆ ಗೊತ್ತಿರಲ್ಲ, ಯಾರ ಹಣೆಬರಹ ಏನು ಎನ್ನೋದು ಜನರಿಗೆ, ಕ್ಷೇತ್ರದ ಜನರಿಗೆ ಗೊತ್ತಿರುತ್ತೆ. ಅವರ ಬಳಿ ದಾಖಲೆ ಇದ್ದರೆ ಅದನ್ನು ಎಲ್ಲಿಗೆ ಕೊಡಬೇರೋ ಅಲ್ಲಿ ಕೊಡಲಿ ‘  ಗುತ್ತಿಗೆದಾರರಿಗೆ ಹೇಳಿದರು.

ಕೆಲ ಮಿಮಿಕ್ರಿ, ಕಲಾವಿದರ ಆಡಿಯೊ ಕೂಡ ಇರುತ್ತೆ ಹೇಳೋಕಾಗಲ್ಲ, ಆಡಳಿತ ಪಕ್ಷಗಳ ಶಾಸಕರು, ಸಚಿವರ ಮೇಲೆ ವಿಪಕ್ಷಗಳಿಂದ ಆರೋಪ ಸಹಜ. ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕೋ, ಬೇಡವೋ ಅನ್ನೋದನ್ನ ತನಿಖಾ ಸಂಸ್ಥೆತೀರ್ಮಾನ ಮಾಡಲಿದೆ ಎಂದರು

ಈಗ ಮಾತನಾಡಲ್ಲ: ಪ್ರೀತಂಗೌಡ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇವೆ ಎಂಬ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆಗೆ, ಆ ಬಗ್ಗೆ ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಕಳೆದ ಡಿ.31 ರಿಂದ ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಏಕೆಂದರೆ ಅವರಿಗೂ ಮಾತನಾಡಲು ಅವಕಾಶ ನೀಡಬೇಕು ಅಲ್ಲವೇ ಎಂದ ಶಾಸಕರು,ಈ ಬಾರಿಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

LEAVE A REPLY

Please enter your comment!
Please enter your name here