ಅರಸೀಕೆರೆಯಲ್ಲಿ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ , ಉಚಿತ ಔಷಧಿ ವಿತರಣೆ

0

ಇಸ್ಲಾಮಿಯ ಬೈತುಲ್ ಮಾಲ್ ಕಮಿಟಿ ಅರಸೀಕೆರೆ ,, ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅರಸೀಕೆರೆ ,,ಇವರ ಅಧ್ಯಕ್ಷತೆಯಲ್ಲಿ ,,ಜನಪ್ರಿಯ ಆಸ್ಪತ್ರೆ ಹಾಸನ ,,ಶಿವಪ್ರಸಾದ್ ನೇತ್ರಾಲಯ ಹಾಸನ ಹಾಗೂ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಅರಸೀಕೆರೆ,,ಇವರ ಸಂಯುಕ್ತ ಆಶ್ರಯದಲ್ಲಿ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಅರಸೀಕೆರೆ: ನಗರದ ಹುಳಿಯಾರ್ ರಸ್ತೆ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಲ್ಲಿರುವ ಎಸ್ಎಂಜೆ ಸಮುದಾಯ ಭವನದಲ್ಲಿ ಡಾಕ್ಟರ್ ಬಶೀರ್ ಸಿಇಒ ಚೇರ್ಮೆನ್ ಜನಪ್ರಿಯ ಆಸ್ಪತ್ರೆ ಹಾಸನ,, ಡಾ. ತಿಮ್ಮರಾಜು ಅರಸೀಕೆರೆ ತಾಲೂಕ ಆರೋಗ್ಯ ಅಧಿಕಾರಿ,, ಡಾ. ಸಿ. ಚೈತನ್ಯ ಹಾಸನ ,,ಡಾಕ್ಟರ್ ಶಿವಪ್ರಸಾದ್ ಹಾಸನ ,, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರಾದ ಸೈಯದ್ ರಫೀಕ್ ಇವರಗಳ ಅಮೃತ ಹಸ್ತದಿಂದ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಈ ಕಾರ್ಯಕ್ರಮದಲ್ಲಿ ವೈದ್ಯರಾದ ಡಾಕ್ಟರ್ ಫೈಝಲ್ ಹಾಸನ,,ಡಾಕ್ಟರ್ ಕವನ ಅರಸೀಕೆರೆ,, ಡಾಕ್ಟರ್ ರಂಜಿನಿ ಅರಸೀಕೆರೆ ,, ಡಾಕ್ಟರ್ ಮೋಹನ್ ಜೆ ಸಿ ಆಸ್ಪತ್ರೆ, ಅರಸಿಕೆರೆ ,,ಇವರುಗಳು ನೂರಾರು ರೋಗಿಗಳಿಗೆ ತಲೆ,, ನರ,, ಬೆನ್ನುಮೂಳೆ,, ಕೀಲು ಮೂಳೆ,, ಕಣ್ಣಿನ ತಪಾಸಣೆ,,ಸಕ್ಕರೆ ಕಾಯಿಲೆ,, ರಕ್ತಪರೀಕ್ಷೆ ಮತ್ತು ಬಿಪಿ ಕಾಯಿಲೆಗಳಿಗೆ ಇವರಿಂದ ತಪಾಸಣೆ ಮಾಡಿ ಅವಶ್ಯಕತೆ ಇದ್ದವರಿಗೆ ಉಚಿತ ಔಷಧಿ ನೀಡಲಾಯಿತು

ಈ ಶಿಬಿರವನ್ನು ಉದ್ದೇಶಿಸಿ ಡಾಕ್ಟರ್ ಬಶೀರ್ ಮಾತನಾಡಿ ಇಂಥ ಒಂದು ಶಿಬಿರವನ್ನು ಆಯೋಜಿಸಿದ್ದು ತುಂಬಾ ಸಂತೋಷದ ವಿಷಯ ಇದರ ಪ್ರಯೋಜನವನ್ನು ಎಲ್ಲಾ ರೋಗಿಗಳು ಪಡೆದುಕೊಳ್ಳಬೇಕು ಇಂದಿನ ದಿನಗಳಲ್ಲಿ ಮನುಷ್ಯ ಒತ್ತಡದಲ್ಲಿ ಜೀವನ ಸಾಗುತ್ತಿದ್ದು ರೋಗಗಳು ಹೆಚ್ಚಾಗುತ್ತಿದೆ ಅದರಿಂದ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು

ನಂತರ ಮಾತನಾಡಿದ ತಾಲೂಕ್ ಆರೋಗ್ಯ ಅಧಿಕಾರಿ ಡಾಕ್ಟರ್ ತಿಮ್ಮರಾಜು ನಗರದ ಜೆಸಿ ಆಸ್ಪತ್ರೆಯಲ್ಲಿ ಕೋವಿಡ್ 19 ಕೋವಿಡ್ ಸೀಲ್ಡ್ ಇಂಜೆಕ್ಷನ್ ಗಳನ್ನು ನೀಡುತ್ತಿದ್ದು ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದರು

ಈ ಶಿಬಿರದಲ್ಲಿ ಇಸ್ಲಾಮಿಯಾ ಬೈತುಲ್ ಮಾಲ್ ಕಮಿಟಿ ಅಧ್ಯಕ್ಷರಾದ ಕೆ ಕೆ ಹಬೀಬ್ ಖಾನ್ ,,ಉಪಾಧ್ಯಕ್ಷರು ಜೋಹರ್ ಖಾನ್ ,,ಕಾರ್ಯದರ್ಶಿಗಳು ಜೆ.ಕೆ ಸದಾಂ,ಜೋಹರ್,,ಕೆ ಕೆ ತೌಸಿಫ್ ಖಾನ್ ಹಾಗೂ ಕಮಿಟಿಯ ಸದಸ್ಯರುಗಳು ಜೆಸಿ ಆಸ್ಪತ್ರೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಉಪಸ್ಥಿತಿ ಇದ್ದರು

LEAVE A REPLY

Please enter your comment!
Please enter your name here