ಪತಿ ಭರತ್ ನಕೊಲೆಗೆ ಕಾರಣ ಕರ್ತರಾದ ಆರೋಪಿಗಳ ಬಂಧಿಸಲು ಪತ್ನಿ ಕಂಪ್ಲೈಂಟ್

0

ಹಾಸನ : ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೋಕಿನ ಮಗ್ಗೆ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ತಾಲ್ಲೂಕಿನ ಕುಂದೂರು ಗ್ರಾಮದ ವಾಸಿ ಭರತ್ (27) ಎಂಬುವವರೇ ಕೊಲೆಯಾದ ದುರ್ದೈವಿ. ಈತ ನಿನ್ನೆ ಸಂಜೆ ಕಳ್ಳಕೊಪ್ಪಲು ಗ್ರಾಮದ ಕಡ್ಲೆ ಭರತ್ ಎಂಬುವರೊಂದಿಗೆ

ಮಣ್ಣಿಗೆ ಹೋಗಿದ್ದು, ಅದೇ ದಿನ ರಾತ್ರಿ 12 ರಿಂದ 1 ಗಂಟೆ ಸಮಯದಲ್ಲಿ ಮಗ್ಗೆ ಗ್ರಾಮದಲ್ಲಿ ಬಸವರಾಜು ರವರ ಮನೆಯ ಮುಂದೆ ಗೇಟ್ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ ಕಳ್ಳಕೊಪ್ಪಲು ಗ್ರಾಮದ ಸತೀಶ @ ಗುಂಡ, ಗಂಗರ ಗ್ರಾಮದ ಕಿರಣ, ಚನ್ನಾಪುರ ಗ್ರಾಮದ ನೇಮ, ಕಾಣಿಗೆರೆ ಗ್ರಾಮದ ಕೌಶಿಕ್ ಅವರು ಕಡ್ಲೆ ಭರತನನ್ನು ಮನೆಗೆ ಹೋಗುವಂತೆ ಕಳುಹಿಸಿ , ನನ್ನ ಗಂಡನನ್ನು ಯಾವುದೋ ದುರುದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಭರತ್ ಅವರ ಪತ್ನಿ

ಚೈತ್ರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಮೊದಲು ಚಾಕುವಿನಿಂದ ಎಡಭಾಗಕ್ಕೆ ಚುಚ್ಚಿ ನಂತರ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ಮರ್ಮಾಂಗ, ಎದೆ, ಹೊಟ್ಟೆ ಗೆ ಚುಚ್ಚಿ., ಕುತ್ತಿಗೆ ಬಲವಾಗಿ ತುಳಿದು ಸ್ಥಳದಲ್ಲಿಯೇ ಕೊಲೆ ಮಾಡಿದ್ದಾರೆ. ಆರೋಪಿಗಳು ಕೊಲೆ ಮಾಡಲು ಬಳಸಿದ್ದ ಚಾಕು ಒಂದು ಬೈಕನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ., ತಮ್ಮ ಪತಿಯ ಕೊಲೆಗೆ ಕಾರಣ ಕರ್ತರಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಟ್ಟಕೊಪ್ಪಲು ಗ್ರಾಮ, ಸತೀಶ @ ಗುಂಡ, ಗಂಗರ ಗ್ರಾಮದ ಕಿರಣ, ಕಾಣಿಗೆರೆ ಗ್ರಾಮದ ಕೌಶಿಕ್ ಮತ್ತು ಚನ್ನಾಪುರ ಗ್ರಾಮದ ನೇಮ ಎಂಬುವವರನ್ನು ಬಂದಿಸಿ ಶಿಕ್ಷೆ ಕೊಡಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಆಲೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here