ಅಸಹಾಯಕರ ಪಾಲಿನ ಆಪಬ್ಬಾoದವನಾಗುತ್ತಿರುವ ಇಸ್ರೇಲ್ ನ ಹೆಲ್ಪಿoಗ್ ಫ್ರೆಂಡ್ಸ್ ಸಂಸ್ಥೆ
ಎತ್ತಣ ಇಸ್ರೇಲ್ ನ ಟೆಲ್ – ಅವಿವ ಎತ್ತಣ ಭಾರತದ ಶ್ಯಾನೆಗೇರೆ….
ಸೇವೆ ಎನ್ನುವುದು ಎಲ್ಲಿಂದ ಎಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ,

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೋಕಿನ ಬೆಲ್ಮನ್ ನ ಸುನೀಲ್ ಮೆಂಡೋನ್ಸರವರು ಚಿಕ್ಕ ವಯಸ್ಸಿನಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಬೆಳೆದವರು ಸುಮಾರು ಮೂವತ್ತು ವರ್ಷಗಳ ಕಾಲ ಮುಂಬೈನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅನೇಕ ವಿವಿಧ ರೀತಿಯಲ್ಲಿ ಅಸಹಾಯಕ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿತ್ತಿದ್ದರು ತದನಂತರ,
2014 ಕ್ಕೆ ಮುಂಬೈ ನಿಂದ ಇಸ್ರೇಲ್ ಗೆ ಬಂದ ಸುನೀಲ್ ಮೆಂಡೋನ್ಸ ರವರು ಯೋಚಿಸಿದ್ದು ನಾನು ನಮ್ಮ ದೇಶದಲ್ಲಿರುವ ಅಸಹಾಯಕ ಕುಟುಂಬಗಳಿಗೆ, ಸರ್ಕಾರಿ ಶಾಲೆಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎನ್ನನಾದರೂ ಮಾಡಲೇಬೇಕು ಅಂತ ಯೋಚಿಸಿ 2015 ರಲ್ಲಿ ಹತ್ತು ಸ್ನೇಹಿತರ ಜೊತೆ ಸೇರಿ ಸ್ಥಾಪಿಸಿದ “ಹೆಲ್ಪಿoಗ್ ಫ್ರೆಂಡ್ಸ್ ಇಸ್ರೇಲ್” ಸಂಸ್ಥೆ ಇಂದು ಸುಮಾರು ಮೂವತ್ತು ಸ್ವಯಂ ಸೇವಕರಿದ್ದು ಪ್ರತಿ ತಿಂಗಳು ಇಪ್ಪತ್ತೈದು ಸಾವಿರದಿಂದ ಒಂದು ಲಕ್ಷ ರೂಪಾಯಿಗಳ ವರೆಗೆ ಕರ್ನಾಟಕದಲ್ಲಿರುವ

ಸರ್ಕಾರಿ ಶಾಲೆಗಳ ಅಭಿವೃದ್ಧಿ, ಅಸಹಾಯಕ ಬಡ ರೋಗಿಗಳಿಗೆ ಆರ್ಥಿಕ ಸಹಾಯ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಬಡ ಕುಟುಂಬಗಳಿಗೆ ಮನೆ ಕಟ್ಟಲು ಆರ್ಥಿಕ ಸಹಾಯ ಹೀಗೆ ಒಟ್ಟು 130 ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ನೀಡಿರುವ ಹಣದ ಮೊತ್ತ ಸುಮಾರು ನಲವತ್ತು ಲಕ್ಷ ರೂಪಾಯಿಗಳು, ಹಾಗೆ ನಮ್ಮ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೋಕಿನ

ಶ್ರೀ ಕಾಲಬೈರವೇಶ್ವರ ಪ್ರೌಢಶಾಲೆಯಲ್ಲಿ ಕಲಿಯುವ ಶೇ 90% ವಿದ್ಯಾರ್ಥಿಗಳು ಅತ್ಯಂತ ಕಡುಬಡತನ, ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು ಎಸ್ ಎಸ್ ಎಲ್ ಸಿ ಯಲ್ಲಿ ಶೇ 100% ಫಲಿತಾಂಶ ಪಡೆಯುವ ಶಾಲೆಯಾಗಿದ್ದು, ಶಾಲೆಯ ಮುಖ್ಯ ಶಿಕ್ಷಕರರಾದ ಜಿ ಟಿ ರವಿ ಕುಮಾರ್ ರವರ ಮೇರೆಗೆ ಈ ಶಾಲೆಯ ಮಕ್ಕಳಿಗೆ ಸಮವಸ್ತ್ರ ಖರೀದಿಸಲು 30,000/- ರೂಪಾಯಿಗಳ ಆರ್ಥಿಕ ಸಹಾಯ ನೀಡುವುದರ ಮೂಲಕ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ಪ್ರಗತಿಗೆ ಅಪೂರ್ವ ಕೊಡುಗೆ ನೀಡಿದ ಹೆಮ್ಮೆಯ ಸಂಸ್ಥೆ “ಹೆಲ್ಪಿoಗ್ ಫ್ರೆಂಡ್ಸ್ ಇಸ್ರೇಲ್” ಸಂಸ್ಥೆಗೆ ನವಂಬರ್ 25 ರಂದು ಏಳು ವರ್ಷ ಆಚರಿಸಿಕೊಳ್ಳುತ್ತಿದೆ,
ಸಮಾಜದಲ್ಲಿ ಯಾವುದೇ ಫಲಪೇಕ್ಷೆ ಇಲ್ಲದೆ ಸೇವೆ ಮಾಡುತ್ತಿರುವ “ಹೆಲ್ಪಿoಗ್ ಫ್ರೆಂಡ್ಸ್ ಇಸ್ರೇಲ್” ಸಂಸ್ಥೆ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸೇವೆ ಮಾಡುವ ಆ ಶಕ್ತಿ ಆ ದೇವರು ಕರುಣಿಸಲಿ ಎಂದು ಆಶೀಸೋಣ.