ನಿಮ್ಮ ಮಗ/ಮಗಳ ರಾಜ್ಯದ ಪ್ರತಿಷ್ಠಿತ ಕ್ರೀಡಾ ಶಾಲೆಗೆ ಸೇರಿಸಲು ಇಲ್ಲಿ ಮಾಹಿತಿ

2

ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸುತ್ತಿರುವ ಜಿಲ್ಲಾ  ಕ್ರೀಡಾಶಾಲೆಗೆ 2022–23ನೇ ಸಾಲಿಗೆ ಅರ್ಹ ಕ್ರೀಡಾಪಟುಗಳ ಆಯ್ಕೆ ಜ.10ರಿಂದ 17ರ ವರೆಗೆ ಈ ಕೆಳಕಂಡ ಮಾಹಿತಿ ಮೇರೆಗೆ ನಡೆಯಲಿದ್ದು ಆಸಕ್ತರು ಅರ್ಜಿ ಸಲ್ಲಿಸಲು ಇಲ್ಲಿದೆ ಸದವಕಾಶ :

ಹಾಸನ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಹಾಕಿ, ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್ ಹಾಗೂ  ರಾಜ್ಯದ ಇತರೆ ಕ್ರೀಡಾ ಶಾಲೆಗೆ ಸೇರಲು :
• ಜನವರಿ 10ರ ಬೆಳಿಗ್ಗೆ 10 ಗಂಟೆಗೆ ಆಲೂರು,
• ಸಕಲೇಶಪುರ ತಾಲ್ಲೂಕು ಕ್ರೀಡಾಂಗಣದಲ್ಲಿ, 11ರಂದು 10 ಗಂಟೆಗೆ
• ಹೊಳೆನರಸೀಪುರ, ಅರಕಲಗೂಡು ತಾಲ್ಲೂಕು ಕ್ರೀಡಾಂಗಣ, 12ರಂದು ಬೆಳಿಗ್ಗೆ 10ಗಂಟೆಗೆ
• ಜನವರಿ 12ರಂದು ಬೇಲೂರು ಪಿಯು ಕಾಲೇಜು ಮೈದಾನ ಹಾಗೂ ಅರಸೀಕೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 10ಗಂಟೆಗೆ
• 13ರಂದು ಬೆಳಿಗ್ಗೆ 10 ಗಂಟೆಗೆ ಚನ್ನರಾಯಪಟ್ಟಣ ತಾಲ್ಲೂಕು ಕ್ರೀಡಾಂಗಣ ಮತ್ತು ದಿಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನ
• 14ರಂದು ಬೆಳಿಗ್ಗೆ 10 ಗಂಟೆಗೆ ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆ ಮೈದಾನ
• 17ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಹಂತದ ಪ್ರಕ್ರಿಯೆ ಹಾಗೂ ಹಾಸನ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 

ಇನ್ನು ಹೆಚ್ಚಿನ ಮಾಹಿತಿಗೆ ಕಚೇರಿ ದೂ. 08172–296256 ಹಾಗೂ
ಆಯ್ಕೆ ಸಮಿತಿ ಮುಖ್ಯ ಸಂಚಾಲಕ ಎಸ್.ಎನ್.ರಮೇಶ್‌, ಮೊ. 8951794434 ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಕ್ರೀಡಾ ಶಾಲೆಗೆ ಸೇರಿ ಜಿಲ್ಲೆಗೆ , ರಾಜ್ಯಕ್ಕೆ , ದೇಶಕ್ಕೆ ಕೀರ್ತಿತನ್ನಿ

ಧನ್ಯವಾದಗಳು

2 COMMENTS

LEAVE A REPLY

Please enter your comment!
Please enter your name here