ಹಾಸನ ವಾರ್ತೆ ಈ ದಿನ ಸೆ 17

0

ದೌರ್ಜನ್ಯಕ್ಕೊಳಗಾದವರಿಗೆ ಅನುಕಂಪದ ಆಧಾರಿತ ಉದ್ಯೋಗ ಒದಗಿಸಲು ಸೂಚನೆ

ಹಾಸನ ಸೆ.17 : ದೌರ್ಜನ್ಯಕ್ಕೊ ಒಳಗಾಗಿ ಹತ್ಯೆಗೀಡಾದ ಅನುಸೂಚಿತ ಜಾತಿ ಪಂಗಡಗಳ ಕುಟುಂಬದ ಅರ್ಹ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ತ್ವರಿತವಾಗಿ ಉದ್ಯೋಗ ಒದಗಿಸುವ ಕುರಿತು ಅಗತ್ಯ ಕ್ರಮ ಕೈಗೊಳುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅನುಸೂಚಿತ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಪ್ರಾದೇಶಿಕ ಆಯುಕ್ತರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಬಾಕಿ ಇರುವ ಪ್ರಕರಣಗಳಲ್ಲಿ ಮೂರು ಕುಟುಂಬಗಳ ಅವಲಂಬಿತರಿಗೆ ತ್ವರಿತವಾಗಿ ಸರ್ಕಾರಿ ಕೆಲಸ ಒದಗಿಸಿ ಎಂದರು.

ಸಾರ್ವಜನಿಕರ ಅನುಕೂಲದ ಹಿತದೃಷ್ಟಿಯಿಂದ ಡಾ. ಬಿ .ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯನ್ನು ನಗರ ಭಾಗಕ್ಕೆ ಸ್ಥಳಾಂತರಿಸುವ ಜೊತೆಗೆ ಹಾಗೂ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಿತಿ ಸದಸ್ಯರಾದ ಮರಿಜೋಸೆಫ್ ಈರಪ್ಪ ನಾರಾಯಣದಾಸ್,ಸಂದೇಶ್ , ಹೂರಾಜ್ ಅವರು ಅನುಸೂಚಿತ ಜಾತಿ ಹಾಗೂ ಪಂಗಡಗಳ ಸಮುದಾಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಸಾಲಗಾಮೆ ಹೋಬಳಿಯ ಕಡದರಹಳ್ಳಿ ಜೀತ ವಿಮುಕ್ತರಿಗೆ ಸೀಗೆ ಗುಡ್ಡದ ಬಳಿ ಜಮೀನು ಒದಗಿಸುವ ಬಗ್ಗೆ, ಹಾಗೂ ಕಟ್ಟಾಯ ಹೋಬಳಿಯ ಕೋನಾಪುರ ಬೆಟ್ಟದಲ್ಲಿ ಹೇಮಾವತಿ ಜಲಾಶಯದ ಯೋಜನೆಯಲ್ಲಿ ಮೀನುಗಾರಿಕೆ ತೊಡಗಿರುವ ಕುಟುಂಬಗಳಿಗೆ ನಿವೇಶನ ಒದಗಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು ಹೇಮಾವತಿ ಜಲಾಶಯ ಯೋಜನೆಯಲ್ಲಿ ಉಳಿದಿರುವ ಭೂಮಿಯಲ್ಲಿ ಹಾಗೂ ಕೋನಾಪುರ ಭಾಗದಲ್ಲಿ ಜಮೀನು ಹಾಗೂ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದೇ ವೇಳೆ ಮರಿಜೋಸೆಫ್ ಅವರು ಹೇಮಾವತಿ ಜಲಾಶಯ ಭೂಮಂಜೂರಾತಿ ವಿಷಯದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು ಒಂದೇ ಕುಟುಂಬದವರು ಎರಡು ಎರಡು ಬಾರಿ ಜಮೀನು ಮಂಜೂರು ಮಾಡಿಸಿಕೊಂಡಿರುವ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಗಮನಕ್ಕೆ ತಂದರು ಈ ಬಗ್ಗೆ ಇನ್ನೊಂದು ಸುತ್ತಿನ ತನಿಖೆ ನಡೆಯಲಿದ್ದೇ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಇದೇ ವೇಳೆ ಅಂಗಡಿಹಳ್ಳಿ ಇರುವಂತಹ ಹಕ್ಕಿಪಿಕ್ಕಿ ಸಮುದಾಯದವರಿಗೆ ಔಷಧಿ ಗಿಡಮೂಲಿಕೆ ಸಂಗ್ರಹಿಸಲು ತಲಾ ಎರಡು ಎಕರೆ ಜಮೀನು ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ನಿಯಮಾನುಸಾರ ಜಮೀನನ್ನು ಒದಗಿಸಲು ಈಗಾಗಲೇ ಮಹರ್ಷಿ ವಾಲ್ಮೀಕಿ ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ತಿಳಿಸಿದರು.

ಇದೇ ವೇಳೆ ತಾಲ್ಲೂಕು ಹಂತದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳ ಸಮಸ್ಯೆಗಳ ಬಗೆಹರಿಸುವ ಕುರಿತು ಪ್ರತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಮಿತಿ ಸದಸ್ಯರಾದ ಈರಪ್ಪ ಅವರು ಮಾತನಾಡಿ ಆಲೂರು ತಾಲ್ಲೂಕು ಕಚೇರಿ ಬಳಿ ಡಾ.ಬಿ,ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ತ್ವರಿತವಾಗಿ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸಮಿತಿ ಸದಸ್ಯರಾದ ಮರಿಜೋಸೆಫ್ ,ಈರಪ್ಪ ,ಸಂದೇಶ್ ಅವರು ಸಭೆಯಲ್ಲಿ ದೌರ್ಜನ್ಯಕ್ಕೊಳಗಾದ ಪ್ರಕರಣ ದಾಖಲಾದ ನಂತರ ನ್ಯಾಯಾಲಯದಲ್ಲಿ ಸರ್ಕಾರಿ ಪರ ವಕೀಲರು ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸಿ ವಾದ ಮಂಡಿಸಿ ಶೋಷಿತರಿಗೆ ನೆರವಾಗಬೇಕು ಮನವಿ ಮಾಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ .ನಂದಿನಿ , ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಂದ್ರಶೇಖರ್ ,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಹಾಗೂ ಮತ್ತಿತರರು ಹಾಜರಿದ್ದರು.

ಅರ್ಜಿ ಆಹ್ವಾನ
ಹಾಸನ ಸೆ.17 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಾಸನ ತಾಲೂಕಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿರುವ ಖಾಲಿ ಇರುವ ಸ್ಥಾನಗಳಿಗೆ 2021 – 22 ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿ ಹಾಗೂ ತಾಲ್ಲೂಕು ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಆಸಕ್ತಿ ಇರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಅಕ್ಟೋಬರ್ 22 ರವರೆಗೆ ತಿತಿತಿ.bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ವಿದ್ಯಾರ್ಥಿ ಸಲ್ಲಿಸುವ ಅರ್ಜಿಯನ್ನು ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ದಾಖಲೆಗಳೊಂದಿಗೆ ಹಾಸನ ತಾಲ್ಲೂಕು ಹಿಂದುಳಿದ ವರ್ಗಗಳ ಕಚೇರಿಗೆ ಅಕ್ಟೋಬರ್ 26 ರ ಒಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ದಾಖಲಾತಿಗಳ ಮೂಲಪ್ರತಿಯಲ್ಲಿ ಯೇ ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡತಕ್ಕದ್ದು

  • ತಹಸಿಲ್ದಾರ ಅಥವಾ ಉಪ ತಹಸೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಒಮ್ಮೆ ಪಡೆದ ಆದಾಯ ಪ್ರಮಾಣ ಪತ್ರ ಐದು ವರ್ಷ ಚಾಲ್ತಿಯಲ್ಲಿರುತ್ತದೆ. ಜಾತಿ ಪ್ರಮಾಣ ಪತ್ರ ಶಾಶ್ವತವಾಗಿರುತ್ತದೆ ) ಮತ್ತು( ಆದಾಯ ಪ್ರಮಾಣ ಪತ್ರವನ್ನು ಉದ್ಯೋಗಕ್ಕಾಗಿ ಪಡೆದಿರುವುದನ್ನು ಸ್ವೀಕರಿಸುವುದಿಲ್ಲ ) ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ವಿದ್ಯಾಭ್ಯಾಸಕ್ಕಾಗಿ ಪಡೆದಿರಬೇಕು.

  • ಸಂಬಂಧಪಟ್ಟ ಶಾಲಾ ಕಾಲೇಜುಗಳಿಂದ ನೀಡಲಾದ ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಅಥವಾ ಇಐಡಿ ನಂಬರ್ ಪ್ರತಿ. ಎಸ್.ಎಸ್.ಎಲ್. ಸಿ. ಅಂಕಪಟ್ಟಿ ಹಾಗೂ ಹಿಂದಿನ ತರಗತಿ ಅಥವಾ ಕೋರ್ಸುಗಳ ಅಂಕಪಟ್ಟಿ. ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟ( ವಿವರಗಳು ಸ್ಪಷ್ಟವಾಗಿ ಕಾಣುವಂತೆ).

ವಿದ್ಯಾರ್ಥಿಯ ವಿಕಲಚೇತನ ಅಥವಾ ಅಂಧ ವಿದ್ಯಾರ್ಥಿಗಳು ಆಗಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆದ ಪ್ರಮಾಣ ಪತ್ರ, ವಿದ್ಯಾರ್ಥಿಯ ಫೋಟೋ ( oಟಿಟಥಿ ಎPಉ ಛಿಚಿಟಿ be uಠಿಟoಜeಜ ತಿiಣh mಚಿx. ಔಜಿ 30 ಞb) ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಗಳಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸೂಚನೆಗಳು.

ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಆಗಿರಬೇಕು, ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಎ, 3ಎ ಮತ್ತು 3ಬಿ ರೂ. 1 ಲಕ್ಷ ಒಳಗಿರಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬೇಕು.

ಆನ್ ಲೈನ್ ಅರ್ಜಿಯಲ್ಲಿ ಎಸೆಸೆಲ್ಸಿ ರಿಜಿಸ್ಟರ್ ಸಂಖ್ಯೆ ಪಾಸಾದ ವರ್ಷ, ಹುಟ್ಟಿದ ದಿನಾಂಕವನ್ನು ಎಸೆಸೆಲ್ಸಿ ಅಂಕಪಟ್ಟಿಯಲ್ಲಿ ಇರುವಂತೆಯೇ ನಮೂದಿಸಬೇಕು. ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜು ತಾಲ್ಲೂಕು ಜಿಲ್ಲೆ ವಿಶ್ವವಿದ್ಯಾನಿಲಯ ಬೋರ್ಡ್ ಮಂಡಳಿ ಪ್ರವೇಶದ ವಿಧಾನ ಕೋರ್ಸಿನ ವಿವರ ಪ್ರದೇಶದ ವಿವರ, ಇಂದಿನ ತರಗತಿ ಕೋರ್ಸಿನಲ್ಲಿ ಪಡೆದ ಅಂಕಗಳ ವಿವರಗಳನ್ನು ತಪ್ಪಿಲ್ಲದಂತೆ ನಮೂದಿಸಬೇಕು. ಎಸೆಸೆಲ್ಸಿ ನಂತರದ ಕೋರ್ಸಿಗೆ (1 ನೇ ಪಿ.ಯು.ಸಿ 1 ನೇ ಡಿಪ್ಲೋಮಾ, 1 ನೇ ಐ. ಟಿ.ಐ ಇತ್ಯಾದಿ ಕೋರ್ಸ್ ಗಳಿಗೆ ಮಾತ್ರ) ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಂದಿನ ತರಗತಿಯಲ್ಲಿ ಓದುತ್ತಿದ್ದ ಶಾಲೆಯಿಂದ SಂಖಿS ಪಡೆದುಕೊಂಡು SಂಖಿS ಅಂಕಣದಲ್ಲಿ ನ ಕಡ್ಡಾಯವಾಗಿ ಅಳವಡಿಸುವುದು.

ಇದುವರೆಗೆ ಪಲಿತಾಂಶ ಪ್ರಕಟಗೊಳ್ಳದೆ ಇರುವ ಕೋರ್ಸ್ ಗಳ ವಿದ್ಯಾರ್ಥಿಗಳು ಮಾತ್ರ ಆನ್ ಲೈನ್ ಅರ್ಜಿಯಲ್ಲಿ ಛಿomಠಿಟeಣe ಡಿesuಟಣs ಂತಿಚಿiಣeಜ ಬಟನ್ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ( ಇಂತಹ ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣವೇ ಅರ್ಜಿಯ ಇನ್ನೊಂದು ಪ್ರತಿಯೊಂದಿಗೆ ಅಂಕಪಟ್ಟಿಯನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಲ್ಲಿಗೆ ತಲುಪಿಸಿ ಸ್ವೀಕೃತಿ ಪಡೆಯುವುದು ಅಂಕಪಟ್ಟಿಯನ್ನು ಸಲ್ಲಿಸದೇ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು)

ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಕನಿಷ್ಠ ಐದು ಕಿಲೋ ಮೀಟರ್ ದೂರದ ವಿದ್ಯಾರ್ಥಿಗಳು ಆಗಿರಬೇಕು ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಇರುವ ದೂರವನ್ನು ಕಿಲೋಮೀಟರ್ ಗಳಲ್ಲಿ ನಮೂದಿಸಬೇಕು. ವಿದ್ಯಾರ್ಥಿ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಸಂಖ್ಯೆಯನ್ನು ನಮೂದಿಸಿ vieತಿ ಬಟನ್ ಛಿಟiಛಿಞ ಮಾಡಿ ನೀವು ಪಡೆದಿರುವ ಪ್ರಮಾಣ ಪತ್ರದಲ್ಲಿ ಇರುವ ಅಂಕಿ ಅಂಶಗಳಂತೆ ಇರುವುದನ್ನು ಖಾತರಿ ಪಡಿಸಿಕೊಳ್ಳುವುದು, ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಿಕ್ಷಣಕ್ಕಾಗಿ ಪಡೆದಿರಬೇಕು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒಂದೇ ಪತ್ರದಲ್ಲಿ ನೀಡಿದಲ್ಲಿ ಅರ್ಜಿಯಲ್ಲಿನ ಜಾತಿ ಆದಾಯ ಕಲಂ ನ ಯಾವುದಾದರೂ ಒಂದರಲ್ಲಿ ಭರ್ತಿ ಮಾಡುವುದು. ವಿದ್ಯಾರ್ಥಿಯ ಧರ್ಮ ಜಾತಿ ಪ್ರವರ್ಗ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದ ದಿನಾಂಕ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಪೋಷಕರ ವೃತ್ತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ವಿದ್ಯಾರ್ಥಿಯು ವಿಕಲಚೇತನ ಹಾಗೂ ಅಂದ ವಿದ್ಯಾರ್ಥಿಗಳ ಆಗಿದ್ದಲ್ಲಿ ಥಿes ಎಂದು ನಮೂದಿಸಬೇಕು.

ವಿದ್ಯಾರ್ಥಿಯು ಹಿಂದಿನ ಸಾಲಿನಲ್ಲಿ ಉoveಡಿಟಿmeಟಿಣ oಜಿ Iಟಿಜiಚಿ, goveಡಿಟಿmeಟಿಣ oಜಿ ಏಚಿಡಿಟಿಚಿಣಚಿಞಚಿ, ಜoಟಿoಡಿs sಛಿhoಟಚಿಡಿshiಠಿs ಇತರೆ ಯಾವುದೇ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದಲ್ಲಿ ಥಿes ಎಂದು ನಮೂದಿಸಬೇಕು. ಕುಟುಂಬದ ಸದಸ್ಯರಲ್ಲಿ ಇಬ್ಬರಿಗಿಂತ ಹೆಚ್ಚು ಜನ ಶುಲ್ಕ ವಿನಾಯಿತಿ ಪಡೆಯುತ್ತಿದ್ದಲ್ಲಿ ಉoveಡಿಟಿmeಟಿಣ oಜಿ Iಟಿಜiಚಿ, goveಡಿಟಿmeಟಿಣ oಜಿ ಏಚಿಡಿಟಿಚಿಣಚಿಞಚಿ, ಜoಟಿoಡಿs sಛಿhoಟಚಿಡಿshiಠಿs ಇತರೆ ಎಂಬ ವಿವರವನ್ನು ನಮೂದಿಸಬೇಕು.

ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಆದರೆ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ನಂತರ ನೀಡುವಇIಆ ಸಂಖ್ಯೆಯನ್ನು ನಮೂದಿಸುವುದು ( ನಿಮ್ಮ ಅದರ್ ಸಂಖ್ಯೆಯು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರತಕ್ಕದ್ದು)

ವಿದ್ಯಾರ್ಥಿಯು ಯಾವುದಾದರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆದಿರುವ ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್. ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು ( ನಿಮ್ಮ ಬ್ಯಾಂಕ್ ಖಾತೆ ಯು ನಿಮ್ಮ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಲಿಂಕ್ ಆಗಿರತಕ್ಕದ್ದು)
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಅವರ SSP Iಆ ಅನ್ನು ನಮೂದಿಸುವುದು.

ವಿದ್ಯಾರ್ಥಿಯು ಪತ್ರ ವ್ಯವಹಾರಕ್ಕಾಗಿ ನೀಡುವ ವಿಳಾಸ ಹಾಗೂ ವಿದ್ಯಾರ್ಥಿಯ ಕಾಯಂ ವಿಳಾಸ ಮೊಬೈಲ್ ಸಂಖ್ಯೆ ಇ- ಮೇಲ್ ವಿವರಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳ ಆದಲ್ಲಿ bಛಿತಿಜ.hosಣeಟ@ಏಚಿಡಿಟಿಚಿಣಚಿಞಚಿ.gov.iಟಿ ಗೆ ಇ- ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವುದು.

ವಿಶೇಷ ಸೂಚನೆ :

ವಿದ್ಯಾರ್ಥಿಯು ಆನ್ ಲೈನ್ ಅರ್ಜಿಯ ಪ್ರತಿ ಹಾಗೂ ಅಪ್ಲೋಡ್ ಮಾಡಲಾದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಸಂಬಂಧಪಟ್ಟ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಅಕ್ಟೋಬರ್ 26 ರೊಳಗೆ ಕಡ್ಡಾಯವಾಗಿ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು, ಒಂದು ವೇಳೆ ನಿಗದಿತ ದಿನಾಂಕದೊಳಗೆ ದಾಖಲಾತಿಗಳನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಟಿ.ವಿ.ಬಸವರಾಜ್ ಅವರ ಅವಿರೋಧ ಆಯ್ಕೆ

ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚನೆ

ಹಾಸನ ಸೆ.17 : ವಿಶ್ವಕರ್ಮ ಸಮುದಾಯದ ಅಭಿವೃದ್ದಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಹೆಚ್ಚಿನ ಅಭಿವೃದ್ದಿ ಹೊಂದುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಕರ್ಮ ಜನಾಂಗದವರು ಶಿಲ್ಪಕಲೆ ಸೇರಿದಂತೆ ಹಲವು ವಿದ್ಯೆಗಳಲ್ಲಿ ಕೌಶಲ್ಯತೆಗಳನ್ನು ಮೈಗೂಡಿಸಿಕೊಂಡಿದ್ದು ಸಮಾಜದ ಅಭ್ಯುದಯಕ್ಕೆ ಅತ್ಯಂತ ಪೂರಕವಾಗಿದೆ ಎಂದು ಅವರು ಹೇಳಿದರು.

ಸರ್ಕಾರವು 2014 ರಿಂದ ವಿಶ್ವಕರ್ಮ ಅಭಿವೃದ್ದಿ ನಿಗಮವನ್ನು ಸ್ಥಾಪಸಿ ಹಲವಾರು ಯೋಜನಗಳನ್ನು ಜಾರಿ ಮಾಡುವುದರ ಮುಖಾಂತರ ವಿಶ್ವಕರ್ಮ ಸಮುದಾಯದವರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದ ಅವರು ಯುವ ಜನತೆ ಉದ್ಯಮಶೀಲತೆ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಹೇಳಿದರು.

ಸರ್ಕಾರ ಸಣ್ಣ ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಹಲವಾರು ಯೋಜನಗಳನ್ನು ಜಾರಿ ಮಾಡಿದ್ದು ವಿಶ್ವಕರ್ಮ ಸಮುದಾಯದವರು ಹೆಚ್ಚಿನ ಉದ್ಯಮಗಳನ್ನು ಸ್ಥಾಪಿಸುವಲ್ಲಿ ನಿಗಾವಹಿಸಿಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಅವರು ಮಾತನಾಡಿ ವಿಶ್ವಕರ್ಮ ಸಮುದಾಯದವರು ಕುಶಲ ಕಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರಲ್ಲದೆ ಸಮಾಜದ ಉನ್ನತ ಅಭಿವೃದ್ದಿಗೆ ಶ್ರಮಿಸಲು ಮುಂದಾಗಬೇಕು ಎಂದು ಅವರು ಹೇಳಿದರು.

ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷರಾದ ಕುಮಾರ್ ಅವರು ಮಾತನಾಡಿ ವಿಶ್ವಕರ್ಮರು ಪ್ರಪಂಚಕ್ಕೆ ಉತ್ತಮ ಶಿಲ್ಪಕಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ, ಸ್ಕಂದ ಪುರಾಣ, ಋಗ್ವೇದÀಗಳಲ್ಲಿ ವಿಶ್ವಕರ್ಮರನ್ನು ಪೂಜಿಸಲಾಗುತ್ತದೆ ಎಂಬ ಅಂಶಗಳು ಕಂಡುಬರುತ್ತವೆ ಅವರು ದೇವಾನು ದೇವತೆಗಳ ದೇವರು ಎಂದೇ ಪರಿಗಣಿಸಲ್ಪಟ್ಟಿತ್ತು ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಕೃಷಿ ಅಧ್ಯಯನ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸಬೇಕು ಎಂದು ಅವರು ಹೇಳಿದರು.

ಬೇಲೂರು, ಹಳೇಬಿಡು, ಕೊನಾರ್ಕ್ ಸೂರ್ಯ ದೇವಾಲಯಗಳ ಶಿಲ್ಪಕಲೆಗಳು ವಿಶ್ವಕರ್ಮರು ನೀಡಿದÀ ಕೊಡುಗೆಗೆ ಉತ್ತಮ ಉದಾಹರಣೆಯಾಗಿವೆ ಎಂದು ಹೇಳಿದರು.

ವಿಶ್ವಕರ್ಮ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಶಂಕರಚಾರ್ಯ ಅವರು ಮಾತನಾಡಿ ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಇಡೀ ಮನುಕುಲಕ್ಕೆ ಸ್ಪೂತಿಯಾಗಿದ್ದಾರೆ ಅವರ ಕಲೆ, ವಾಸ್ತುಶಿಲ್ಪ ಕ್ಷೇತ್ರದಲ್ಲಿ ಅಪಾರವಾದ ಕೊಡಗೆ ನೀಡಿದ್ದಾರೆ.

ಇದೇ ವೇಳೆ:- ಸ್ಥಳೀಯ ಕುಶಲ ಕರ್ಮಿಯಾದ ನರೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ತಯಾರಿಸಿದ ನರೇಂದ್ರ ಮೋದಿಯವರ ಪ್ರತಿಮೆಯನ್ನು ಪ್ರಧಾನಿಯವರಿಗೆ ತಲುಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ್ ಅವರು ಮಾತನಾಡಿ ವಿಶ್ವಕರ್ಮರು ಆದ್ಯಾತ್ಮಿಕ ಹಾಗೂ ಕೈಗಾರಿಕಗಳಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಪಂಚವಿದ್ಯೆಗಳಾದ ಚಿನ್ನದ ಕೆಲಸ, ಮರಗೆಲಸ, ಶಿಲ್ಪಕಲೆ, ನೇಗಿಲು ಮುಂತಾದ ಕಲೆಗಳಲ್ಲ್ಲಿ ಪರಿಣಿತಿ ಹೊಂದಿವರು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಮೇಗೌಡ, ಸ್ವಾತಂತ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾದ ಮಹಾಂತಪ್ಪ, ವಿಶ್ವಕರ್ಮ ಸಮುದಾಯದ ಪ್ರಮುಖರಾದ ರಾಮಲಿಂಗಾಚಾರ್, ವಾಸುದೇವ್, ಹೆಚ್.ಬಿ ಕುಮಾರ್, ಬ್ಯಾಟರಂಗಾಚಾರ್, ಆನಂದ್, ಹರೀಶ್, ಶಕುಂತಲ ಮತ್ತಿತರರು ಹಾಜರಿದ್ದರು.


ಹಾಸನ ಸೆ.17: ಚನ್ನರಾಯಪಟ್ಟಣ ತಾಲ್ಲೂಕು ತಗಡೂರು ಗೇಟ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಗಡೂರಿನ ಟಿ.ವಿ.ಬಸವರಾಜು ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಬಸವರಾಜ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾದ ಸುನೀಲ್ ಅವರು, ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಟಿ.ವಿ.ಬಸವರಾಜ್ ಅವರನ್ನು ಮಾಜಿ ಅಧ್ಯಕ್ಷರಾದ ಓಬಳಾಪುರ ಬಸವರಾಜ್, ಕಲ್ಲೇಸೋಮನಹಳ್ಳಿ ತಮ್ಮಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ತೋಂಟಾರಾಧ್ಯ, ಸಂಘದ ನಿರ್ದೇಶಕರು, ಬಸವೇಶ್ವರ ಯುವಕ ರೈತ ಸಂಘದ ಟಿ.ಎಂ.ಗಿರೀಶ್ ಸೇರಿದಂತೆ ಹಲವರು ಅಭಿನಂದಿಸಿದರು.

ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರ ನಿರ್ದೇಶನ ಮೇರೆಗೆ, ಎಲ್ಲಾ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿರುವುದಕ್ಕೆ ನೂತನ ಅಧ್ಯಕ್ಷ ಟಿ.ವಿ.ಬಸವರಾಜ್ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಅಮೃತ ಗ್ರಾಮಪಂಚಾಯಿತಿ ಯೋಜನೆ ಅನುಷ್ಠಾನ ಸಭೆ

ಹಾಸನ ಸೆ.17 : ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿದ್ಧಿಗಾಗಿ ಮಾನ್ಯ ಮುಖ್ಯ ಮಂತ್ರಿಯವರು ಘೋಷಿಸಿರುವಂತೆ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಹಾಗೂ ಅಮೃತ ಶಾಲಾ ಯೋಜನೆಯನ್ನು ಅನುಷ್ಠಾನಗೊಳಿಸುವÀ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿ ಹಾಗೂ ಶಾಲೆಗಳನ್ನು ಆಯ್ಕೆ ಮಾಡುವ ಸಂಬಂಧ ವಿಧಾನ ಸೌಧದಲ್ಲಿಂದು ಅಬಕಾರಿ ಮತ್ತು ಹಾಸನ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯನವರ ಕಚೇರಿಯಲ್ಲಿ ಹಾಸನ ಜಿಲ್ಲೆಯ ಶಾಸಕರುಗಳು ಮತ್ತು ಅಧಿಕಾರಿಗಳೊಂದಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ. ಕೆ.ಎಸ್. ಲಿಂಗೇಶ್. ಪ್ರೀತಮ್ ಜೆ.ಗೌಡ, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಹಾಗೂ ಶಿಕ್ಷಣ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಗಿತಗೊಂಡಿರುವ ಸೌಹಾರ್ದ/ಸಹಕಾರ ಸಂಘಗಳನ್ನು ಸಮಾಪನೆ
ಹಾಸನ ಸೆ.17 : ಸಹಕಾರ ಸಂಘಗಳ ಕಾಯ್ದೆ 1959 ರ ನಿಯಮಗಳು ಹಾಗೂ ಸಂಘದ ಬೈಲಾ ರೀತ್ಯಾಸ ಕಾರ್ಯನಿರ್ವಹಿಸದೆ ಮಾರ್ಚ್ 31 ರ ಅಂತ್ಯಕ್ಕೆ ಸ್ಥಗಿತಗೊಂಡಿರುವ ಸೌಹಾರ್ದ ಅಥವಾ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಕ್ರಮ ವಿಡಲಾಗುತ್ತಿದ್ದು, ಸಮಾಪನೆಗೊಳಿಸುವ ಬಗ್ಗೆ ನಿಮ್ಮ ಆಕ್ಷೇಪಣೆಗಳಿದ್ದಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಒಂದು ವಾರದೊಳಗೆ ಸಂಬಂಧಿಸಿದ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಅಥವಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಸನ ಅಥವಾ ಸಕಲೇಶಪುರ ಉಪ ವಿಭಾಗ ಅಥವಾ ಸಹಕಾರ ಸಂಘಗಳ ಉಪನಿಬಂಧಕರು, ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾದ ಲ್ಲಿ ಸ್ಥಗಿತಗೊಂಡಿರುವ ಸಹಕಾರ ಸಂಘಗಳ ಸ್ಥಾಪನೆಗೆ ಕ್ರಮ ಬಿಡಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

ಹಾಸನ ತಾಲ್ಲೂಕಿನ ಅಟ್ಟಾವರ ಹೊಸೂರು ಹಾಲು ಉತ್ಪಾದಕರ ಶ್. ಸಂ. ನಿ., ಹಾಲು ಉತ್ಪಾದಕರ ಸಂಘ ನಿ., ವಳಗೆ ಹಳ್ಳಿ ಕೊಪ್ಪಲು, ಹಾಸನ., ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಬೀರನಹಳ್ಳಿ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ನಿಂಬೆ ಹಳ್ಳಿ. ಪುಷ್ಪಗಿರಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘ ನಿ. ಕಿಂಕೋ ಗೃಹ ನಿರ್ಮಾಣ ಸಹಕಾರ ಸಂಘ ನಿ., ಕಂಬದ ನರಸಿಂಹಸ್ವಾಮಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ಸ್ನೇಹಮಯಿ ವಿವಿದೋದ್ದೇಶ ಸಹಕಾರ ಸಂಘ ನಿ., ರಕ್ಷಣಾ ಪುರಂ. ಹಾಸನ ತಾಲ್ಲೂಕು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹೊಯ್ಸಳ ಪತ್ತಿನ ಸಹಕಾರ ಸಂಘ ನಿ., ಡಾ: ಬಿ. ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ವಿವಿದೋದ್ದೇಶ ಸಹಕಾರ ಸಂಘ ನಿ., ಭಾಗ್ಯಲಕ್ಷ್ಮಿ ವಿವಿದೋದ್ದೇಶ ಸಹಕಾರ ಸಂಘ ನಿ., ಪ್ರೇರಣಾ ವಿವಿದೋದ್ದೇಶ ಸಹಕಾರ ಸಂಘ ನಿ., ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹಾಸನ ಜಿಲ್ಲಾ ಅರಸು ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಹಾಸನ.

ಅರಸೀಕೆರೆ ತಾಲ್ಲೂಕಿನ ಮಲದೇವಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ., ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ವೂಲ್ ವಿವರ್ಸ್ ಸಹಕಾರ ಸಂಘ ನಿ., ಕೆಂಕೆರೆ. ಅರಸೀಕೆರೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಸುವರ್ಣ ಕರ್ನಾಟಕ ವಿವಿದೋದ್ದೇಶ ಸಹಕಾರ ಸಂಘ ನಿ. ನಿಸರ್ಗ ಸೌಹಾರ್ದ ಸ್ವಸಹಾಯ ಸಹಕಾರಿ ನಿ. ಕೆಂಕೆರೆ, ಶ್ರೀ ಅನ್ನಪೂರ್ಣೇಶ್ವರಿ ಸೌಹಾರ್ದ ಸ್ವಸಹಾಯ ಸಹಕಾರಿ ನಿ
, ಚಿಂದೆನಹಳ್ಳಿ, ಅರಸೀಕೆರೆ.

ಶ್ರೀ ಚಾಮುಂಡೇಶ್ವರಿ ವಿವಿದೋದ್ದೇಶ ಸಹಕಾರ ಸಂಘ ನಿ., ಹಳ್ಳಿ ಮೈಸೂರು ಹೊಳೆನರಸೀಪುರ ತಾಲ್ಲೂಕು.

ಸಕಲೇಶಪುರ ತಾಲ್ಲೂಕಿನ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರ ಸಂಘ ನಿ., ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಕ್ಯಾಮನಹಳ್ಳಿ. ಸಕಲೇಶಪುರ.

ಬೇಲೂರು ತಾಲ್ಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘನಿ., ಮಲ್ಲಪ್ಪನಹಳ್ಳಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿವಿದೋದ್ದೇಶ ಮಹಿಳಾ ಸಹಕಾರ ಸಂಘ ನಿ., ಸವಾಸಿಹಳ್ಳಿ, ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ವಿವಿದೋದ್ದೇಶ ಸಹಕಾರ ಸಂಘ ನಿ., ಅಂಗಡಿಹಳ್ಳಿ, ಬೇಲೂರು ಟೌನ್ ವಾಸವಿ ವಿವಿದೋದ್ದೇಶ ಸಹಕಾರ ಸಂಘ ನಿ., ಬೇಲೂರು.

ಅರಕಲಗೂಡು ತಾಲ್ಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘನಿ., ಹನ್ಯಾಳು. ಅರಕಲಗೂಡು.

ಚನ್ನರಾಯಪಟ್ಟಣ ತಾಲ್ಲೂಕಿನ ವಿವಿದೋದ್ದೇಶ ಸೌಹಾರ್ದ ಸಹಕಾರ ನಿ., ಕಾಳಿಕಾಂಬ ಸೌಹಾರ್ದ ಸಹಕಾರಿ ನಿ., ಚನ್ನರಾಯಪಟ್ಟಣ.

ಆಲೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘನಿ., ಬೆಳ್ಳೂರು.

ಕಾನೂನು ಅರಿವು ವಿಶೇಷ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಚಾಲನೆ
ಹಾಸನ ಸೆ.17 (: ದುರರ್ಬಲರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು, ಮಹಿಳೆಯರು, ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಮತ್ತಿತರರು ಉಚಿತವಾಗಿ ಕಾನೂನು ಸೇವೆ ಪಡೆಯಲು ಅರ್ಹರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಸೇವೆಗಳ ಕುರಿತು ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಶಿವಣ್ಣ ಅವರು ಮಾತನಾಡಿ ಕಾನೂನಿನಿಂದ ದೊರೆಯುವ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಜೊತೆಗೆ ಬಾಕಿ ಇರುವ ಹಳೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವಂತಹ ಕಾರ್ಯವನ್ನೂ ನಡೆಸಲಾಗುತ್ತಿದೆ ಎಂದರು.

ವ್ಯಾಪಕವಾಗಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆಯನ್ನು ತೆಗೆದುಕೊಳ್ಳದೆ ಇರುವ ಸಾರ್ವಜನಿಕರು ಕೋವಿಡ್-19 ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದರು.

ಸೆ. 30 ರಂದು ನಡೆಯುವ ಮೆಗಾ ಲೋಕ್ ಅದಾಲತ್‍ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಬಹುದಾದ ಸಿವಿಲ್ ಪ್ರಕರಣಗಳು, ಹಳೆ ಪ್ರಕರಣಗಳು, ತ್ವರಿತವಾಗಿ ಬಗೆಹರಿಸುವಂತಹ ಪ್ರಕರಣಗಳು ಸೇರಿದೆ ಹೆಚ್ಚು ಪ್ರಕರಣಗಳನ್ನು ಗುರುತಿಸಿ ಇತ್ಯರ್ಥ ಪಡಿಸಲಾಗುವುದು ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಅಗತ್ಯ ಎಂದರು.

ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯವರ ಸಹಕಾರ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ ರವಿಕಾಂತ್ ಅವರು ಮಾತನಾಡಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಳ್ಳಿಗಳಲ್ಲಿಯೂ ಸಹ ನಡೆಸಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್. ನಂದಿನಿ ಅವರು ಸೆಪ್ಟೆಂಬರ್ 30 ರಂದು ನಡೆಯುವ ಮೆಗಾ ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕರು ತಮ್ಮಲ್ಲಿ ಇರುವಂತಹ ಹಲವಾರು ಪ್ರಕರಣಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರಲ್ಲದೆ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ ಜಾಗೃತರಾಗಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಪದಾಧಿಕಾರಿಗಳಾದ ಹೆಚ್.ಎಸ್ ಮಂಜುನಾಥ್ ಮೂರ್ತಿ, ರಂಗನಾಥ್ ಹಾಗೂ ಮತ್ತಿತರರು ಹಾಜರಿದ್ದರು.

ಪರೀಕ್ಷೆ ದಿನಾಂಕ ಪ್ರಕಟ
ಹಾಸನ ಸೆ.17 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06 ರ ವತಿಯಿಂದ ಸೆಪ್ಟಂಬರ್/ಅಕ್ಟೋಬರ್- 2021 ರಲ್ಲಿ 2001-02 ರಿಂದ 2010-11, 2013-14, 2014-15 ಹಾಗೂ 2018-19 ರಿಂದ 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ/ ಅನುತೀರ್ಣರಾಗಿರುವ ಬಿ.ಎ/ಬಿ.ಕಾಂ, ಎಂ.ಎ/ಎಂ.ಕಾಂ, ಬಿ.ಎಡ್, ಬಿ.ಲಿಪ್, ಎಂ.ಬಿ.ಎ, ಎಂಎಡ್, ಎಂ.ಎಲ್.ಐ.ಸಿ, ಎಲ್.ಎಲ್.ಎಂ ಹಾಗೂ ಎಂ.ಎಸ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿದೆ.
ಪರೀಕ್ಷಾ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಪ್ರಥಮ/ದ್ವಿತೀಯ/ತೃತೀಯ ಬಿ.ಎ/ಬಿ.ಕಾಂ ಗೆ ಸೆ.27ರಿಂದ, ಅಂತಿಮ ಎಂ.ಎ/ಎಂ.ಕಾಂ ಗೆ ದಿ ಅ.1 ರಿಂದ ಹಾಗೂ ಪ್ರಥಮ ಎಂ.ಎ/ಎಂ.ಕಾಂ ಗೆ ದಿ : ಅ.18 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ವೇಳಾ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ತಿತಿತಿ.ಞsoumಥಿsoಡಿe. ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಸನ ಪ್ರಾದೇಶಿಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಮೊ: 9482603060. ಪರೀಕ್ಷಾ ವೇಳಾಪಟ್ಟಿಗಾಗಿ ಕರಾಮುವಿಯ ವೆಬ್‍ಸೈಟ್‍ನಿಂದ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಡಾ|| ಪಿ.ಹರೀಶ್ ಅವರು ತಿಳಿಸಿದ್ದಾರೆ.

ಗುತ್ತಿಗೆದಾರಿಕೆ ನಿಯೋಜಿಸಲು ವಾಹನಗಳ ದಾಖಲಾತಿ ಆಹ್ವಾನ
ಹಾಸನ ಸೆ.17 : ಹಾಸನ ಹಾಲು ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಂತದಲ್ಲಿ ಉತ್ಪಾದನೆಯಾಗುವ ಹಾಲನ್ನು ವಾಹನಗಳ ಮುಖಾಂತರ ಶೇಖರಣೆ ಮಾಡಿ ಒಕ್ಕೂಟಕ್ಕೆ ತರಿಸುವುದು ವಿಧಾನವಾಗಿರುತ್ತದೆ. ಅದರಂತೆ ಸಂಘಗಳಲ್ಲಿ ಕಾಲಕ್ಕನುಗುಣವಾಗಿ ಹಾಲಿನ ಹೆಚ್ಚಳ ಮತ್ತು ಕಡಿಮೆಯಾಗುವುದು ಹಾಲಿನ ಉತ್ಪಾದನೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಆದುದ್ದರಿಂದ ಹಾಲು ಹೆಚ್ಚಾದ ಸಮಯದಲ್ಲಿ ಹಾಲಿನ ವಾಹನಗಳ ಪರ್ಯಾಯ ವ್ಯವಸ್ಥೆಗಾಗಿ ಕಿರು ಮಾರ್ಗಗಳನ್ನು ರಚಿಸುವುದು ಅನಿವಾರ್ಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಖಿಂಖಿಂ ಂಛಿ/ಃoಟeಡಿo ಠಿiಛಿಞ uಠಿ/ ಂshoಞ ಟeಥಿಟಚಿಟಿಜ ಮಾರ್ಗಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗಿರುವುದರಿಂದ ಸದರಿ ಮಾರ್ಗಗಳ ಗುತ್ತಿಗೆಗಾರಿಕೆಯನ್ನು ನಿರ್ವಹಿಸಲು ಆಸಕ್ತಿಯುಳ್ಳ ವಾಹನ ಮಾಲೀಕರು/ ಗುತ್ತಿಗೆದಾರರು ಪೂರಕ ವಾಹನ ದಾಖಲಾತಿಗಳನ್ನು ಕಚೇರಿಗೆ ನೀಡಬಹುದಾಗಿದೆ. ಒಕ್ಕೂಟದ ಹಾಲು ಸಾಗಾಣಿಕೆ ಅವಶ್ಯಕತೆಯಿದ್ದಾಗ ಸಂಬಂಧಪಟ್ಟ ವಾಹನ ಮಾಲೀಕರಿಗೆ ಲಿಖಿತವಾಗಿ ಸೂಚನೆ ನೀಡಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
LEAVE A REPLY

Please enter your comment!
Please enter your name here