ಆಲೂಗೆಡ್ಡೆ ಆಂಗಾಶ ಕೃಷಿಯಲ್ಲಿ ಪಾಲ್ಗೊಳ್ಳುವ ರೈತರಿಗಾಗಿ ಹೊಸ ಯೋಜನೆ

0

ಆಲೂಗೆಡ್ಡೆ ಆಂಗಾಶ ಕೃಷಿಯಲ್ಲಿ ಪಾಲ್ಗೊಳ್ಳುವ ರೈತರುಗಳಿಗೆ ತೋಟಗಾರಿಕೆ ಇಲಾಖೆಯಿಂದ ಹೊಸ ಯೋಜನೆ ರೂಪಿಸಲು ಚಿಂತಿಸಲಾಗಿದೆ ಮುಂದಿನ ದಿನಗಳಲ್ಲಿ ಇದು ಜಾರಿಯಾಗಲಿದೆ ಎಂದು ತೋಟಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರು ತಿಳಿಸಿದ್ದಾರೆ.

ಸೋಮನಹಳ್ಳಿ ಕಾವಲು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಆಲೂಗೆಡ್ಡೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಗಾಶ ಕೃಷಿಗೆ ಮುಂದಿನ ೧೦ ವರ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೋಮನಹಳ್ಳಿ ಕಾವಲಿನಲ್ಲಿ ಈಗಾಗಲೇ ಟಿಶ್ಯ ಕಲ್ಚರ್ ಲ್ಯಾಬ್ ಪ್ರಾರಂಭಿಸಲಾಗಿದೆ ಎಂದರು. ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವುದರಿಂದ ಸಸಿಗಳಿಗೆ ಯಾವುದೇ ರೀತಿಯ ರೋಗಗಳು ತುತ್ತಾಗುವುದಿಲ್ಲ ಎಂದು ಹೇಳಿದರು.
ಜಲಂಧರ್ ನಿಂದ ಆಲೂಗೆಡ್ಡೆಯನ್ನು ತಂದು ಬಿತ್ತನೆ ಮಾಡುವ ಬದಲಿಗೆ ಸ್ಥಳೀಯವಾಗಿ ಯಾವುದೇ ರೋಗಗಳಿಗೆ ಒಳಗಾಗದ ಅಂಗಾಂಶ ಅಲೊಗೆಡ್ಡೆ ಕೃಷಿಗೆ ಹೆಚ್ಚು ಒತ್ತು ನೀಡುವುದು ಅವಶ್ಯಕ ಎಂದರು

ಅಂಗಾಂಶ ಕೃಷಿಯಿಂದ ಹೆಚ್ಚು ಲಾಭ ಗಳಿಸಬಹುದು ರೈತರ ಸಹಕಾರದಿಂದ ಅಂಗಾಂಶ ಅಲೊಗೆಡ್ಡೆ ಕೃಷಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಎಮದು ಹೇಳಿದರು.

ಕೃಷಿಯಲ್ಲಿನ ಸಕಾರಾತ್ಮಕ ಬದಲಾವಣೆ ರೈತ ನೀಡುವ ರಚನ್ಮಾಕ ಸಲಹೆಗಳನ್ನು ಪಡೆದು ಇಲಾಖೆ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು
ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಅಂಗಾಂಶ ಆಲೂಗೆಡ್ಡೆ ಸಸಿಗಳನ್ನು ೧೦ ನರ್ಸರಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.ಇವರೆಲ್ಲಾ ಉತ್ತಮ ಆದಾಯದ ಗಳಿಸುತ್ತಿದ್ದಾರೆ ಎಂದರು.
ಬೇರೆ ಭಾಗದಿಂದ ತಂದು ಆಲೂಗೆಡ್ಡೆ ಬಿತ್ತನೆ ಮಾಡಿದ ಬೀಜಗಳು ಸ್ಥಳೀಯ ವಾತಾವರಣದಿಂದ ರೋಗಕ್ಕೆ ತುತ್ತಾಗುತ್ತದೆ ಆದ್ದರಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಂಗಾಂಶ ಕೃಷಿ ಸಸಿಗಳನ್ನು ಬಳಸಿಕೊಳ್ಳುವುದರಿಂದ ಉತ್ತಮ ಲಾಭವನ್ನು ಪಡೆಯಬಹುದು ಎಂ

LEAVE A REPLY

Please enter your comment!
Please enter your name here