ಹಾಸನ: ಕೊರೋನಾ ಸಂಕಷ್ಟದ ಸಮಯದಲ್ಲಿ ಎಲ್ಲರೂ ಸಾಮಾಜಿಕ ಕಾಳಜಿಯನ್ನು ಜವಬ್ಧಾರಿಯುತವಾಗಿ ವಹಿಸುವಂತೆ ಐಪಿಎಸ್ ಎಡಿಜಿಪಿ ರೈಲ್ವೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು.
ನಗರದ ಕೈಗಾರಿಕ ಪ್ರದೇಶದಲ್ಲಿರುವ ನಂದಗೋಕುಲ ಕನ್ವೆನ್ಷನ್ ಸೆಂಟರ್ ಆಗಮಿಸಿದ ಅವರು, ಇದೆ ವೇಳೆ ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಾವನಪ್ಪುತ್ತಿದ್ದಾರೆ. ಈವೇಳೆ ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ಮಾತನಾಡಿ, ಕೊರೋನಾ ನಿಯಂತ್ರಿಸಲು ಸರಕಾರ ಜಾರಿಗೆ ತರಲಾಗಿರುವ ನಿಯಮ ಪಾಲಿಸಬೇಕು. ನಿಯಂತ್ರಣಕ್ಕಾಗಿ ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ಕೊರೋನಾವನ್ನು ನಿರ್ಮೂಲನೆ ಮಾಡೋಣ ಎಂದು ಕರೆ ನೀಡಿದರು.
ಎಫ್.ಕೆ.ಸಿ.ಸಿ.ಐ. ಛೇರ್ಮನ್ ಮತ್ತು ಉದ್ಯಮಿ ಹೆಚ್.ಎ. ಕಿರಣ್ ಮಾತನಾಡಿ, ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಜನರಲ್ಲಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಮತ್ತು ಸೋಂಕಿನ ಏನೆ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸುವಂತೆ ಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವಂತೆ ಮನವಿ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್. ಶ್ರೀನಿವಾಸ್ ಗೌಡರು ಮಾತನಾಡುತ್ತಾ, ಕೊರೋನಾ ಸಮಯದಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಕಾನೂನಿನ ಸುವ್ಯವಸ್ಥೆಯಲ್ಲಿ ಕಾಪಾಡಲು ಲಾಕ್ ಡೌನ್ ಸಹಕರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಹಾಗೂ ಎಫ್.ಕೆ.ಸಿ.ಸಿ.ಐ. ನಿರ್ದೇಶಕ ವಿ.ಜಿ. ಕಿರಣ್, ಕುಮಾರ್ರವರು ಮಾತನಾಡಿ, ಹಾಸನಕ್ಕೆ ಆಕ್ಸಿಜನ್ ಕನ್ಸೆಂಟರ್ ಗಳನ್ನು ಮತ್ತು ಕೋವಿಡ್ ಸಲಕರಣೆಗಳನ್ನು ಒದಗಿಸಿಕೊಡುವುದಾಗಿ ಹೇಳಿದರು.

ಇದೆ ವೇಳೆ ಛೇಂಬರ್ ಆಫ್ ಕಮರ್ಸ್ನ ಅಧ್ಯಕ್ಷರಾದ ಧನಪಾಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ, ಎಫ್.ಕೆ.ಸಿ.ಸಿ.ಐ. ಮುಖ್ಯಸ್ಥರಾದ ಹೆಚ್.ಎ. ಕಿರೀಟ್, ಸಣ್ಣ ಕೈಗಾರಿಕ ಸಂಘದ ಅಧ್ಯಕ್ಷ ಜಿ.ಓ. ಮಹಾಂತಪ್ಪ, ಉಪಾಧ್ಯಕ್ಷ ಪ್ರಕಾಶ್ ಯಾಜಿ, ಕಾರ್ಯದರ್ಶಿ ಸುದರ್ಶನ್, ಗೌರವಾಧ್ಯಕ್ಷರಾದ ಮದನ್ ಕುಮಾರ್, ನಿರ್ದೇಶಕ ಚನ್ನಪ್ಪ, ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ಇತರರು ಉಪಸ್ಥಿತರಿದ್ದರು.

ADGP Sri BHASKAR RAO IPS
visited Hassan and Joined us at NANDAGOKULA along with FKCCI, HASSAN Chamber of Commerce and HADSSIA Members
The Occasion was Graced by
HASSAN
DC Sri R . GIRISH IAS HASSAN SP Sri SRINIVASA GOWDA IPS
The Program was Organised by
FKCCI INFRASTRUCTURE Commitee Chairman
Sri HA KIRAN

ADGP Stressed upon all the organisations to take initiative for creating awareness among Public about Vaccinations and Early Diagnosis if they have any minimum symptoms .
Also to join hands with District Administration for fighting against COVID 19