ವಿಶ್ವ ಮೆದುಳು ಜ್ವರ ದಿನ ಆಚರಣೆ : ಹಾಸನ

0

ಹಾಸನ ಫೆ.23(ಹಾಸನ್_ನ್ಯೂಸ್ !,  ವಿಶ್ವ ಮೆದುಳು ಜ್ವರ ದಿನದ ಅಂಗವಾಗಿ ಫೆ.22 ರಂದು ವಿಶ್ವದಾದ್ಯಂತ ಕೆಂಪು ದೀಪಗಳನ್ನು ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು  ಹಾಸನ ನಗರದಲ್ಲೂ ಸಹ ಜಿಲ್ಲಾ ಕೇಂದ್ರಗಳ  ಪ್ರಮುಖ ಕಟ್ಟಡಗಳ ಮೇಲೆ ಕೆಂಪು ದೀಪ ಉರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ , ನಗರ ಸಭೆ ಕಚೇರಿ, ವೈದ್ಯಕೀಯ ಕಾಲೇಜು ಮೇಲೆಯು ಕೆಂಪು ದೀಪ ಉರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕೆಂಪು ದೀಪದ ಜೊತೆ

ಜೆ.ಇ (ಜಪಾನೀಸ್ ಎನ್ಸೆಫಾಲಿಟಿಸ್) ಎಂಬ ಅಕ್ಷರದೊಂದಿಗೆ ದೀಪವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ಹಸಿರು ಬಾವುಟ ತೋರಿಸಿ ಉದ್ಘಾಟಿಸಿದರು.
ಮೆದುಳು ಜ್ವರವು ಒಂದು ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳಿಂದ ಹರಡುವ ಒಂದು ಖಾಯಿಲೆ, ಹಂದಿಗಳು ಮತ್ತು ನೀರಿನ ಹಕ್ಕಿಗಳಿಂದ ವೈರಸ್ ಹೀರಿಕೊಂಡು ಮನುಷ್ಯರಿಗೆ ಸೊಳ್ಳೆಯು ಕಚ್ಚಿದಾಗ ಈ ರೋಗವು ಹರಡುತ್ತದೆ ಇದೊಂದು ಮಾರಣಾಂತಿಕವಾಗಿದ್ದು, ಮೆದುಳಿಗೆ ಜ್ವರ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ

ಇದರಿಂದ ನರ ದೌರ್ಬಲ್ಯ ಮತ್ತು ಬುದ್ದಿ ಮಾಂದ್ಯತೆ ಉಂಟಾಗುತ್ತದೆ ಎಂದು ತಿಳಿಸಿದರು.
      ವಿಪರೀತ ಜ್ವರ, ತಲೆನೋವು, ಕತ್ತಿನಲ್ಲಿ ಬಿಗಿತ, ತಲೆಸುತ್ತುವಿಕೆ, ಮೈ ನಡುಕ ಮತ್ತು ಎಚ್ಚರ ತಪ್ಪುವುದು ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಹಂದಿಗಳು ಮನುಷ್ಯರ ವಾಸಸ್ಥಳಗಳಿಂದ ಮೂರು ಕಿ.ಮೀ. ದೂರಕ್ಕೆ ಸ್ಥಳಾಂತರಿಸಬೇಕು ಎಂದರು.
ಆದ್ದರಿಂದ

ಸೊಳ್ಳೆ ನಿಯಂತ್ರಣ ಕ್ರಮ ಅನುಸರಿಸಬೇಕು ಹಾಗೂ ಸೊಳ್ಳೆಕಚ್ಚುವಿಕೆಯಿಂದ ಪಾರಾಗಲು ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದರು.
ಈ ಸಂದರ್ಭದಲ್ಲಿ

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಸಂತೋಷ್ ,ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ|| ಹಿರಣ್ಣಯ್ಯ, ಡಾ|| ನಾಗೇಶ್ ಆರಾಧ್ಯ, ಡಾ|| ಶಿವಶಂಕರ್, ಡಾ|| ಕಾಂತರಾಜ್, ಕೀಟಶಾಸ್ತ್ರಜ್ಞರಾದ ರಾಜೇಶ್ ಕುಲಕರ್ಣಿ, ಆರೋಗ್ಯ ಮೇಲ್ವಿಚಾರಕರು ನಾರಾಯಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಡಿವಿಬಿಡಿಸಿಒ ಕಚೇರಿಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here