ಬಾಯಾರಿಕೆಯನ್ನು ನೀಗಿಸಿ, ತಂಪಾದ ಅನುಭೂತಿಯನ್ನು ಕೊಡುವ ಎಳನೀರಿನ
ಬಗ್ಗೆ ಇಲ್ಲಿದೆ ಮಾಹಿತಿ.
ವರ್ಷದ ಪ್ರತಿದಿನವೂ ಸಿಗುವ ಎಳನೀರು ಸರ್ವರೋಗಕ್ಕೂ ಮದ್ದು. ಎಳೆನೀರು ಯಾಕಿಷ್ಟು ವಿಶೇಷ? ಇದರಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಅಮೈನೋ ಆಸಿಡ್ ಅಧಿಕ ಪ್ರಮಾಣದಲ್ಲಿದ್ದು ಹಾಗಾಗಿ ಇದು ಆರೋಗ್ಯಕ್ಕೆ ಬಹಳ ಉಪಯೋಗಕಾರಿ.
ಎಳನೀರಿನ ಪ್ರಯೋಜನಗಳು
• ತೂಕ ಇಳಿಸಲು ಸಹಾಯಕಾರಿ:
ನೀವೆಲ್ಲರೂ ಗಮನಿಸಿರಬಹುದು ಎಳನೀರು ಕುಡಿದ ಮೇಲೆ ಸಾಮಾನ್ಯವಾಗಿ ನಮಗೆ ಹಸಿವಾಗುವುದಿಲ್ಲ ಹಾಗಾಗಿ ಇದು ನಿಮ್ಮ ಹಸಿವನ್ನು ಎಂ ತ್ರಿಸಲು ಸಹಾಯಕಾರಿ. ಕೊಬ್ಬಿನಂಶ ಕೂಡ ಬಹಳ ಕಡಿಮೆ ತೂಕ ಇಳಿಸಬೇಕೆಂದು ಎಳನೀರನ್ನು ಕುಡಿದು ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಿ.
• ಮಧುಮೇಹ ಸಮಸ್ಯೆಗೆ ಉಪಯೋಗಕಾರಿ:
ಎಳೆನೀರು ನಮ್ಮ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಅನಿಸುತ್ತದೆ ಇದರಲ್ಲಿರುವ ಮೆಗ್ನೀಷಿಯಂ ಇನ್ಸುಲಿನ್ ಅಂಶವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ.
• ಮೂತ್ರಪಿಂಡಗಳ ಆರೋಗ್ಯಕ್ಕೆ ಸಹಾಯಕಾರಿ:
ನೀರು ಕುಡಿಯುವುದರಿಂದ ಮೂತ್ರಪಿಂಡಗಳಲ್ಲಿ ಇರುವ ಕಲ್ಲು ಹೊರ ಹೊರಬರಬಹುದು. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಎಳನೀರಿನ ಸೇವನೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದು.
• ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಇತ್ತೀಚಿಗೆ ರಕ್ತದೊತ್ತಡ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ನೈಸರ್ಗಿಕವಾಗಿ ಈ ಸಮಸ್ಯೆಯಿಂದ ಪಾರಾಗಬಹುದು. ನೀರಿನಲ್ಲಿರುವ ಪೊಟಾಶಿಯಮ್ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಿ ಈ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
ಆಯಾಸ ಆದಾಗಲೂ ಕೂಡ ನಾವು ಕುಡಿಯುವುದು ಎಳನೀರು. ಎಳೆನೀರು ಬಹಳ ಲಾಭಕಾರಿ. ನಮ್ಮ ಆರೋಗ್ಯವನ್ನು ನೈಸರ್ಗಿಕ ಪದಾರ್ಥಗಳಿಂದ ಕಾಪಾಡಿಕೊಳ್ಳುವುದು ಬಹಳ ಒಳ್ಳೆಯ ಕೆಲಸ ಹಾಗಾಗಿ ನೈಸರ್ಗಿಕ ಪದಾರ್ಥಗಳ ಉಪಯೋಗಗಳನ್ನು ತಿಳಿದು ಅದನ್ನು ಸೇವಿಸಿ. ನಿಮ್ಮ ಅರೋಗ್ಯ ನಿಮ್ಮ ಜವಾಬ್ದಾರಿ.
- ತನ್ವಿ. ಬಿ