ಲೋಟಸ್ ಅಥವಾ ಫಾಕ್ಸ್ ಸೀಡ್ಸ್, ಹಲವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಇದು ಬಹಳ ದುಬಾರಿಯಾದರೂ ಆರೋಗ್ಯಕ್ಕೆ ಉತ್ತಮ ಫಲಿತಾಂಶ ನೀಡುವ ಒಂದು ಪದಾರ್ಥ. ಬೀಜವಾದರೂ ಇದು ಬಹಳ ಸ್ವಾದಿಷ್ಟ.
ಫಾಕ್ಸ್ ಸೀಡ್ಸ್ ಪ್ರಯೋಜನಗಳು:
ತೂಕ ಇಳಿಸಲು ಸಹಾಯಕಾರಿ:
ತೂಕ ಇಳಿಸುವ ಪ್ರಯತ್ನ ಮಾಡುವವರು ಹೆಚ್ಚು ಪ್ರೊಟೀನ್ ಅಂಶವನ್ನು ಸೇವಿಸುತ್ತಾರೆ ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸಿ. ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಬಹಳ ಕಡಿಮೆ ಕ್ಯಾಲರಿಗಳು ಇರುವುದರಿಂದ ಇದನ್ನು ಯಾವುದೇ ಹಿಂಜರಿಕೆಯಿಲ್ಲದೆ ಸೇವಿಸಬಹುದು.
ಮಧುಮೇಹ ಸಮಸ್ಯೆಗೆ ಪರಿಹಾರ:
ಫಾಕ್ಸ್ ಸೀಡ್ಸ್ ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳ ಕಡಿಮೆ ಹಾಗಾಗಿ ದೇಹದಲ್ಲಿ ಅನಗತ್ಯ ಕೊಬ್ಬಿನಂಶ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ. ಇದು ರಕ್ತದ ಕಾಯಿಲೆಗಳು ಮತ್ತು ಹೃದಯ ಸಮಸ್ಯೆಗಳನ್ನು ಪಾರುಮಾಡುತ್ತದೆ.
ಸೌಂದರ್ಯಕ್ಕೆ ಉಪಯೋಗಕಾರಿ:
ಫಾಕ್ಸ್ ಸೀಡ್ಸ ನಲ್ಲಿ ಆಂಟಿ ಏಜಿಂಗ್ ಅಂಶಗಳು ಹೆಚ್ಚಿರುತ್ತದೆ. ಪ್ರತಿದಿನ ಅದನ್ನು ಸೇವಿಸುವುದರಿಂದ ನಮ್ಮ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಈ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬೇಡಿ.
ಈ ಬೀಜಗಳು ನಿಮ್ಮ ಮಕ್ಕಳಿಗೆ ಸಂಜೆ ಹೊತ್ತಿನ ಸ್ನಾಕ್ಸ್ ರೀತಿಯಲ್ಲಿ ನೀಡಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಹಾಗಾಗಿ ಫಾಕ್ಸ್ ಸೀಡ್ಸ್ ಗಳನ್ನೂ ಸೇವಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಿರಿ ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
– ತನ್ವಿ. ಬಿ