ನೇರಳೆ ಹಣ್ಣು ಕಪ್ಪಗಿದೆ ಎಂದು ತಿನ್ನದೆ ಇರಬೇಡಿ. ಈ ಪುಟ್ಟ ಹಣ್ಣಿನ ಲಾಭಗಳು ತಿಳಿದರೆ ಖಂಡಿತ ತಿನ್ನದೇ ಇರುವುದಿಲ್ಲ. ಈ ಹಣ್ಣು ದುಬಾರಿಯಾದರೂ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಈ ಪುಟ್ಟ ಹಣ್ಣಿನ ಬಗ್ಗೆ ದೊಡ್ಡ ವಿಚಾರ ಇಲ್ಲಿದೆ.
ನೇರಳೆ ಹಣ್ಣಿನ ಪ್ರಯೋಜನಗಳು
- ಮಧುಮೇಹ ಸಮಸ್ಯೆಯನ್ನು ನಿಯಂತ್ರಿಸುತ್ತದೆ:
ನೇರಳೆ ಹಣ್ಣಿನಲ್ಲಿ ಜಂಬೋಲಿನ್ ಎನ್ನುವ ಗ್ಲೂಕೋಸ್ ಅಂಶವಿರುತ್ತದೆ. ಇದು ಮಧುಮೇಹ ಸಮಸ್ಯೆಯ ನಿಯಂತ್ರಣಕ್ಕೆ ಬಹಳ ಮುಖ್ಯ. ಹಾಗಾಗಿ ನೇರಳೆ ಮಧುಮೇಹ ಇರುವವರು ಕೂಡ ಸೇವಿಸಬಹುದು.
*ಕಾಂತಿಯುತ್ತವಾದ ತ್ವಚೆಗೆ:
ನೇರಳೆ ಹಣ್ಣಿನಲ್ಲಿ ಒಂದು ವಿಶೇಷ ಗುಣವಿದೆ ಇದು ರಕ್ತದಲ್ಲಿರುವ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡಲು ಲಾಭಕಾರಿ. ಹಾಗಾಗಿ ಇದರಿಂದ ರಕ್ತ ಶುದ್ಧೀಕರಣ ಹೆಚ್ಚಾಗುತ್ತದೆ. ಇದರಲ್ಲಿರುವ ಕಬ್ಬಿಣಾಂಶ ಕೂಡ ತ್ವಚೆಗೆ ಬಹಳ ಮುಖ್ಯ. ನೇರಳೆ ಹಣ್ಣು ತಿಂದರೆ ಸುಂದರವಾದ ತ್ವಚೆ ನಮ್ಮದಾಗುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ನೇರಳೆ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಬಹಳ ಹೆಚ್ಚು. ಈ ಹಣ್ಣಿನ ಬೀಜಗಳಲ್ಲಿ ಫ್ಲೇವನಾಯ್ಡ್ ಅಂಶವನ್ನು ಕಾಣಬಹುದು ಇದು ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪಾರುಮಾಡಲು ಸಹಾಯಕಾರಿ. ಆಂಟಿಆಕ್ಸಿಡೆಂಟ್ ಜೀರ್ಣಕ್ರಿಯೆಗೂ ಬಹಳ ಮುಖ್ಯ ಇದು ದೇಹದ ವ್ಯವಸ್ಥೆಯನ್ನು ಸ್ವಚ್ಛಮಾಡುತ್ತದೆ
- ಅಲ್ಸರ್ ರೋಗದಿಂದ ಮುಕ್ತಿ ನೀಡುತ್ತದೆ:
ನೇರಳೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಹೊಟ್ಟೆಯ ಭಾಗದಲ್ಲಿ ಆಗುವ ಅಲ್ಸರ್ ರೋಗವನ್ನು ತಡೆಗಟ್ಟುತ್ತದೆ ಇದು ನಮ್ಮ ಬಾಯಿ ಮತ್ತು ದೇಹದ ಇತರ ಭಾಗದಲ್ಲಿರುವ ಬ್ಯಾಕ್ಟೀರಿಯಗಳನ್ನು ನಾಶಮಾಡಿ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ.
ಈ ಪುಟ್ಟ ಹಣ್ಣಿನ ದೊಡ್ಡ ವಿಚಾರ ಈಗ ನಿಮಗೆ ತಿಳಿದಿರಬಹುದು. ಎಲ್ಲಾ ಹಣ್ಣುಗಳಲ್ಲೂ ವಿವಿಧವಾದ ಉಪಯೋಗಗಳು ಇರುತ್ತದೆ. ಮಕ್ಕಳಿಗೆ ಹೆಚ್ಚು ಹಣ್ಣುಗಳನ್ನು ಸೇವಿಸಲು ನೀಡಿ. ನಿಮ್ಮ ಅರೋಗ್ಯ ನಿಮ್ಮ ಜವಾಬ್ದಾರಿ.
- ತನ್ವಿ. ಬಿ