ನೋಡಲು ಬಹಳ ಆಕರ್ಷಕವಾಗಿರುವ ಸ್ಟ್ರಾಬೆರಿಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಇದರಲ್ಲಿರುವ ವಿಟಮಿನ್ಸ್, ಪ್ರೊಟೀನ್ ಅಂಶಗಳು ಇದನ್ನು ಹೆಚ್ಚು ಲಾಭಕಾರಿಯಾಗಿ ಮಾಡುತ್ತದೆ.
ಸ್ಟ್ರಾಬೆರಿಯಾ ಪ್ರಯೋಜನಗಳು:
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ವಿಟಮಿನ್ ಸಿ ಅಂಶ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಸ್ಟ್ರಾಬೆರಿ ನಮ್ಮ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ:
ಸ್ಟ್ರಾಬೆರಿಯಲ್ಲಿರುವ ಫೋಲೆಟ್, ಫ್ಲೇವಿನೋಯ್ಡ್ಸ್ ಮತ್ತು ವಿಟಮಿನ್ ಸಿ ಅಂಶಗಳು ಕ್ಯಾನ್ಸರ್ ವಿರೋಧಿಯಾಗಿ ಕೆಲಸಮಾಡುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಇದು ಉತ್ತಮ ಫಲಿತಾಂಶ ನೀಡುತ್ತದೆ.
ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ:
ಎಲ್ಲರಿಗೂ ತಿಳಿದ ಹಾಗೆ ವಿಟಮಿನ್ ಸಿ ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ . ಸ್ಟ್ರಾಬೆರಿಯಲ್ಲಿರುವ ವಿಟಮಿನ್ ಸಿ ಅಂಶ ಕಣ್ಣಿನ ಯಾವುದೇ ರೋಗಗಳಿಗೂ ಪರಿಹಾರ ನೀಡುತ್ತದೆ.
ಚರ್ಮದ ಆರೋಗ್ಯಕ್ಕೆ ಸಹಾಯಕಾರಿ:
ಚರ್ಮಕ್ಕೆ ವಿಟಮಿನ್ ಅಂಶ ಬಹಳ ಉಪಯೋಗಕಾರಿ. ಸ್ಟ್ರಾಬೆರಿ ತಿನ್ನುವುದರಿಂದ ನಮಗೆ ಮುಖದಲ್ಲಿ ಸುಕ್ಕು, ಮುಪ್ಪಿನ ಗೆರೆಗಳು ಯಾವುದೇ ತೊಂದರೆ ಆಗುವುದಿಲ್ಲ ಹಾಗಾಗಿ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಉತ್ತಮ.
ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ತನ್ವಿ . ಬಿ