ಸ್ಟ್ರೆಚ್ ಮಾರ್ಕ್ ಸಮಸ್ಯೆಯಿಂದ ತೊಂದರೆ ಪಡುತ್ತಿದ್ದೀರಾ? ಇದನ್ನು ತೊಲಗಿಸಲು ದಾರಿ ಹುಡುಕುತ್ತಿದ್ದೀರಾ?

0

ಸಾಮಾನ್ಯವಾಗಿ ಸ್ಟ್ರೆಚ್ ಮಾರ್ಕ್ಸ್ ಗರ್ಭಿಣಿಯಲ್ಲಿ ಕಂಡುಬರುತ್ತದೆ ನಾವು ತುಂಬಾ ದಪ್ಪ ಆದಾಗ ಅಥವಾ ಬಹಳ ಸಣ್ಣ ಆದಾಗ ಸ್ಟ್ರೆಚ್ ಮಾರ್ಕ್ಸ್ ಬರುವುದು ಸಹಜ.

ಇದರಿಂದ ಮುಕ್ತಿ ಪಡೆಯುವುದು ಸುಲಭವೇ?

ಇಲ್ಲಿದೆ ಸ್ಟ್ರೆಚ್ ಮಾರ್ಕ್ಸ್ ತೊಲಗಿಸುವ ಸಲಹೆಗಳು;

ಅಲೋವೆರಾ :
*ಅಲೊವೆರಾ ಜೆಲ್ ಅಥವಾ ನೇರವಾಗಿ ಅಲೊವೆರಾದ ಎಲೆ ತೆಗೆದು ಅದರಿಂದ ಲೋಳೆ ಪಡೆಯಿರಿ.
*ಇದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ದಿನ ಹಚ್ಚಿ .ಹದಿನೈದು ನಿಮಿಷ ಬಿಟ್ಟು, ಬೆಚ್ಚಗಿರು ನೀರಿನಿಂದ ಒರೆಸಿಕೊಂಡು ಒಳ್ಳೆಯ ಫಲಿತಾಂಶ ಪಡೆಯಿರಿ.

ಹರಳೆಣ್ಣೆ:
*ಕೆಲವು ಹನಿ ಹರಿವನ್ನೇ ನಿಮ್ಮ ಅಂಗೈಗೆ ಹಚ್ಚಿಕೊಂಡು ಸ್ಟ್ರೆಚ್ ಮಾರ್ಕ್ಸ್ ಇರುವ ಬಳಿ 5-10 ನಿಮಿಷ ಮಸಾಜ್ ಮಾಡಿ.
*ನಂತರ ಈ ಪ್ರದೇಶಕ್ಕೆ ಬೆಚ್ಚಗಿರುವ ನೀರಲ್ಲಿ ಅದ್ದಿರುವ ಬಟ್ಟೆಯಲ್ಲಿ ಒರೆಸಿಕೊಳ್ಳಿ.
*ಹೀಗೆ ಇದನ್ನು ಮೂವತ್ತು ದಿನ ಮಾಡಿದರೆ ಒಳ್ಳೆ ಪರಿಣಾಮ ಸಿಗಬಹುದು.

ಮೊಟ್ಟೆಯ ಬಿಳಿ ಭಾಗ:
*ಎರಡು ಮೊಟ್ಟೆಯ ಬಳಿ ಭಾಗ ತೆಗೆದು ಸ್ಟ್ರೆಚ್ ಮಾರ್ಕ್ಸ್ ಇರುವ ಬಿಳಿ ಲೋಳೆ ಹಚ್ಚಿಕೊಳ್ಳಿ .
*ಇದು ಒಣಗಿದ ಮೇಲೆ ತಣ್ಣೀರಿನಿಂದ ಒರೆಸಿಕೊಂಡು, ಆಲಿವ್ ತೈಲದಿಂದ ಮಾಯಿಶ್ಚರೈಸ್ ಮಾಡಿಕೊಳ್ಳಿ.

ನಿಂಬೆರಸ :
*ಪಿಂಗಾಣಿಗೆ ನಿಂಬೆರಸ ಹಾಕಿಕೊಂಡು ಸ್ಟ್ರೆಚ್ ಮಾರ್ಕ್ ಇರುವ ಕಡೆ ಹಚ್ಚಿಕೊಳ್ಳಿ.
*ನಂತರ ಹತ್ತು ನಿಮಿಷ ಕಾಲ ಬಿಟ್ಟು, ಬೆಚ್ಚಗಿನ ನೀರಲ್ಲಿ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ನಿಮಗೆ ಸುಲಭವಾಗಿರುವ ವಿಧಾನವನ್ನು ಉಪಯೋಗಿಸಿ ಸ್ಟ್ರೆಚ್ ಮಾರ್ಕ್ಸ್ ಗೆ ವಿದಾಯ ಹೇಳಿ.

ಬರಹ – ತನ್ವಿ. ಬಿ

LEAVE A REPLY

Please enter your comment!
Please enter your name here