ಮಳೆಗಾಲದಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಈಗ ಕೊರೋನಾ ಬೇರೆ ವಕ್ಕರಿಸಿಕೊಂಡು ಬಿಟ್ಟಿದೆ. ಶೀತ, ಕೆಮ್ಮು, ಗಂಟಲು ಕೆರೆತ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಬಂದರೆ ಕೊರೋನಾ ಸಮಸ್ಯೆಯೋ ಅಥವಾ ನಾರ್ಮಲ್ ಶೀತ ಕೆಮ್ಮು ಬಂದಿದೆಯೋ ಅನ್ನೋದು ಗೊತ್ತಾಗೋದಿಲ್ಲ. ಇನ್ನು ಶ್ವಾಸಕೋಶದ ಸಮಸ್ಯೆ ಇರುವವರಂತೂ ತಮ್ಮ ಆರೋಗ್ಯದ ಬಗ್ಗಷ್ಟೇ ಗಮನ ಹರಿಸದೆ ಇದ್ದರೆ, ಮಮಳೆಗಾಲದ ಈ ತೇವ ಭರಿತ ವಾತಾವರಣದಿಂದ ಅರೋಗ್ಯ ಇನ್ನಷ್ಟು ಬಿಗಡಾಯಿಸಬಹುದು.
ಒಂದು ವೇಳೆ ನಿಮಗೆ ಶೀತ, ಕೆಮ್ಮು, ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಈ ಟಿಪ್ಸ್ ಉಪಯೋಗಿಸಿ.ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಕಾಣಲು ಮರೆಯಬೇಡಿ.
ಒಣ ಕೆಮ್ಮು ಕಂಡು ಬಂದರೆ ಶುಂಠಿ ರಸಕ್ಕೆ ಜೇನು, ತುಳಸಿ ರಸ ಹಾಗು ಕರಿಮೆಣಸಿನ ಪುಡಿ ಹಾಕಿ ಸೇವಿಸಿ.
ಇದರಿಂದ ಒಣ ಕೆಮ್ಮು
ನಿವಾರಣೆಯಾಗುತ್ತದೆ.
ಶುಂಠಿ ರಸ ಮತ್ತು ದಾಳಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದಿಷ್ಟು ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.
ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಈ ನೀರನ್ನು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಕಫ ನಿವಾರಣೆಯಾಗುತ್ತದೆ.
ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ, ಅದಕ್ಕೆ ಅರ್ಧ ಹೆಚ್ಚಿದ ಈರುಳ್ಳಿ, ಬೆಲ್ಲ, ಕರಿಮೆಣಸು ಹಾಕಿ ಕುದಿಸಿ ಸೋಸಿ ಕುಡಿದರೆ ಗಂಟಲು ನೋವು,ಕೆಮ್ಮು, ಶೀತ, ಗಂಟಲು ಕೆರೆತ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ರಾತ್ರಿ ಮಲಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಟ್ರೈ ಮಾಡಿ ಮೆಂತೆ ಕಾಳುಗಳನ್ನು ನೀರಿಗೆ ಹಾಕಿ ಕುದಿಸಿ ನಂತರ ಅದಕ್ಕೆ ಅರ್ಧ ಚಮಚ ಶುಂಠಿ ರಸ ಮತ್ತು ಜೇನು ಬೆರೆಸಿ ಸೇವನೆ ಮಾಡಿದರೆ ರಾತ್ರಿ ಯಾವುದೇ ಸಮಸ್ಯೆ ಇಲ್ಲದೆ ನಿದ್ರೆ ಮಾಡಬಹುದು.
ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗ ಇದನ್ನು ಕುಡಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ.