ಹಾಸನ ಜಿಲ್ಲೆಯಲ್ಲಿರುವ ತವರು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಸಂಸ್ಥೆಗೆ 2022-23 ನೇ ಸಾಲಿನ ರಾಜ್ಯ ಪ್ರಶಸ್ತಿ

0

ಹಾಸನ / ಬೆಂಗಳೂರು : “ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ – ತವರು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್

ಹಾಸನ ಜಿಲ್ಲೆಯಲ್ಲಿರುವ ತವರು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಸಂಸ್ಥೆಗೆ 2022-23 ನೇ ಸಾಲಿನ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿಯನ್ನು ದಿನಾಂಕ 14/11/2022 ರ ಮಕ್ಕಳ ದಿನಾಚರಣೆಯಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲಟ್ ರವರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಬಸಪ್ಪ ಅಚಾರ್‌ರವರು ಸಂಸ್ಥೆಯ ಮುಖ್ಯಸ್ಥರಾದ ಡಾ||ಪಾಲಾಕ್ಷ ಹೆಚ್.ಕೆ ರವರಿಗೆ ಗೌರವಿಸಿ ಪ್ರಶಸ್ತಿಯನ್ನು ಪ್ರಧಾನಿಸಿದರು.

ತವರು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್‌ ಸಂಸ್ಥೆಯು ಪರಿತ್ಯಕ್ತ ಮಕ್ಕಳಿಗಾಗಿ ದತ್ತು ಕೇಂದ್ರವನ್ನು ಮತ್ತು ವೃದ್ಧಾಶ್ರಮವನ್ನು ಹಾಗೂ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಮಕ್ಕಳ ಶ್ರೇಯೋಭಿವದ್ಧಿಗಾಗಿ ಶ್ರಮಿಸುತ್ತಿರುವ. ಈ ಸಂಸ್ಥೆಯ ಸೇವೆಯು ಪ್ರಶಂಸನೀಯ. ಈ ಸೇವೆಯನ್ನು ಗುರುತಿಸಿ ಸರ್ಕಾರವು ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.

ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀಯುತ ಲೆಹರ್ ಸಿಂಗ್, ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣ ಗೌಡರು, ವಿಧಾನ ಸಭಾ ಸದಸ್ಯರಾದ ಶ್ರೀಯುತ ರಿಜ್ವಾನ್‌ ಹರ್ಷದ್ ಹಾಗೂ ಇಲಾಖಾ ನಿರ್ದೇಶಕರಾದ ಡಾ|| ಅನುರಾಧ, ಭಾ.ಅ.ಸೇ.. ಮುಖ್ಯ ಕಾರ್ಯದರ್ಶಿಗಳಾದ ಡಾ| ಮಂಜುಳ ಎನ್. ಭಾ.ಆ.ಸೇ., ರವರು ಹಾಜರಿದ್ದರು.

LEAVE A REPLY

Please enter your comment!
Please enter your name here