ಹಾಸನ ಜಿಲ್ಲೆಯ ದೊಡ್ಡಕುಂಚೆ ಡಾ. ಪ್ರಸನ್ನ ಡಿ ಶಿವರಾಮು ಅವರಿಗೆ ವರ್ಷದ ವಿಜ್ಞಾನಿ – 2020 ಪಶಸ್ತಿ 🏅#hiddenachivershassan

0

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೂಡಕುಂಚೆ ಗ್ರಾಮದ ಡಾ. ಪ್ರಸನ್ನ ಡಿ ಶಿವರಾಮು ಅವರು ಬಯೋಆರ್ಗಾನಿಕ್ ಮತ್ತು ಮೆಡಿಸಿನಲ್ ಕೆಮಿಸ್ಟ್ರಿ ಹಾಗೂ ನಾನೊಮೆಟೀರಿಯಲ್‌ ಮೇಲೆ ನಡೆಸಿದ ಸಂಶೋಧನೆಯನ್ನು ಗುರ್ತಿಸಿ ನವದೆಹಲಿಯ ನ್ಯಾಷನಲ್ ಎನ್ವಿರಾನ್ಮೆಂಟಲ್ ಸೈನ್ಸ್ ಅಕಾಡೆಮಿಯು ದೊಡ್ಡಕುಂಚಯ ಡಾ. ಪ್ರಸನ್ನ ಡಿ ಶಿವರಾಮು ಅವರಿಗೆ ವರ್ಷದ ವಿಜ್ಞಾನಿ – 2020 ಪಶಸ್ತಿ  ವರ್ಷದ ವಿಜ್ಞಾನಿ-2020 ಪ್ರಶಸ್ತಿ ನೀಡಿ ಗೌರವಿಸಿದೆ.

ಡಾ. ಪ್ರಸನ್ನ ಅವರು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಎಸ್. ರಂಗಪ್ಪನವರ ಮಾರ್ಗದರ್ಶನದಲ್ಲಿ ಬಯೋ ಆರ್ಗಾನಿಕಲ್ ಮತ್ತು ಮೆಡಿಸಿನ್ ಕೆಮಿಸ್ಟ್ರಿ ವಿಷಯದಲ್ಲಿ ಸಂಶೋಧನೆ ನಡೆಸಿ ಪಿ.ಹೆಚ್.ಡಿ ಪದವಿ ಪಡದಿದ್ಯಾರೆ

ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುದ್ದೇನಹಳ್ಳಿ ಕ್ಯಾಂಪಸ್ನ ಅಪ್ಲೈಡ್ ಸೈನ್ಸಸ್ (ನ್ಯಾನೋ ತಂತ್ರಜ್ಞಾನ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಇವರು ಇಲ್ಲಿಗೆ ಸೇರುವ ಮೊದಲು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ್, ಸಿಂಗಪುರ್ ಇಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿ ಹಾಗು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಯೋಮೆಡಿಕಲ್ ಅನ್ವಯಿಕೆಗಳಿಗಾಗಿ ಹೆಟೆರೊಸೈಕ್ಲಿಕ್ ಅಣುಗಳ ವಿನ್ಯಾಸ ಮತ್ತು ಸಂಶ್ಲೇಷಣೆಯ ಜೊತೆಗೆ ಪರಿಸರ, ಶಕ್ತಿ ಮತ್ತು ಆರೋಗ್ಯ ಸಂಬಂಧಿತ ಅನ್ವಯಿಕೆಗಳಿಗೆ ನ್ಯಾನೊವಸ್ತುಗಳ ಅಭಿವೃದ್ಧಿ ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿದೆ. ಈ ಕ್ಷೇತ್ರಗಳಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುದ್ದೇನಹಳ್ಳಿ ಕ್ಯಾಂಪಸ್ನ ಅಪ್ಲೈಡ್ ಸೈನ್ಸಸ್ (ನ್ಯಾನೋ ತಂತ್ರಜ್ಞಾನ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿರುವ ಇವರು ಇಲ್ಲಿಗೆ ಸೇರುವ ಮೊದಲು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಪುರ್, ಸಿಂಗಪುರ್ ಇಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿ ಹಾಗು ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಯೋಮೆಡಿಕಲ್ ಅನ್ವಯಿಕೆಗಳಿಗಾಗಿ ಹೆಟೆರೊಸೈಕ್ಲಿಕ್ ಅಣುಗಳ ವಿನ್ಯಾಸ ಮತ್ತು ಸಂಶ್ಲೇಷಣೆಯ ಜೊತೆಗೆ ಪರಿಸರ, ಶಕ್ತಿ ಮತ್ತು ಆರೋಗ್ಯ ಸಂಬಂಧಿತ ಅನ್ವಯಿಕೆಗಳಿಗೆ ನ್ಯಾನೊವಸ್ತುಗಳ ಅಭಿವೃದ್ಧಿ ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿದೆ. ಈ ಕ್ಷೇತ್ರಗಳಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ಯೂನಿವರ್ಸಿಟಿ ಆಫ್ ಸಿಂಗಪುರ್, ಸಿಂಗಪುರ್ ಇಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿ ಹಾಗೂ ಮೈಸೂರಿನ ಜೆಎಸ್‌ಎಸ್ ಬಯೋಮೆಡಿಕಲ್ ಅನ್ಮಯಿಕೆಗಳಿಗಾಗಿ ಹೆಟೆರೂಸೆಕ್ಸಿಕ್ ಅಣುಗಳ ವಿನ್ಯಾಸ ಮತ್ತು ಸಂಶೋಷಣೆಯ ಜೊತೆಗೆ ಪರಿಸರ, ಶಕ್ತಿ ಮತ್ತು ಆರೋಗ್ಯ ಸಂಬಂಧಿತ ಅನ್ವಯಿಕೆಗಳಿಗೆ ನ್ಯಾನೊವಸ್ತುಗಳ ಅಭಿವೃದ್ಧಿ ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿದೆ

ಈ ಕ್ಷೇತ್ರಗಳಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ಡಾ, ಪ್ರಸನ್ನ ಅನೇಕ ಸಮ್ಮೇಳನಗಳು, ಸೆಮಿನಾರ್ಗಳು ಮತ್ತು ಕಾರ್ಯಾಗಾರಗಳನ್ನು ವಿವಿಧ ಸಾಮರ್ಥ್ಯಗಳಲ್ಲಿ ಆಯೋಜಿಸಿದ್ದಾರೆ ಮತ್ತು ಭಾರತ, ಯುಎಸ್‌ಎ ಸಿಂಗಾಪುರ್, ಜಪಾನ್ ಮತ್ತು ಇತರ ದೇಶಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಫೆಬ್ರವರಿ 2019 ರಲ್ಲಿ ಡಿಎಸ್‌ಟಿ-ಜಿಎಸ್‌ಪಿಎಸ್ ಪ್ರಾಯೋಜಿತ ಇಂಡೋ-ಜಪಾನ್ ಅಂತರರಾಷ್ಟ್ರೀಯ ಸಹಕಾರಿ ಸಂಶೋಧನಾ ಯೋಜನೆಯಡಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಜಪಾನ್‌ನ ಜನಪ್ರಿಯ ತೋಹೋಕು ವಿಶ್ವವಿದ್ಯಾಲಯ ಗಳಿಗೆ ಭೇಟಿ ನೀಡಿದ್ದಾರೆ

ನವದೆಹಲಿಯ ರಾಷ್ಟ್ರಪತಿ ಭವನ ದಲ್ಲಿ ನಡೆದ ಸಮಾರಂಭದಲ್ಲಿ ನ್ಯಾಷನಲ್ ಇನೋವೇಶನ್ ಫೌಂಡೇಶನ್ ನೀಡುವ ಗಾಂಧಿಯನ್ ಯಂಗ್ ಟೆಕ್ನಾಲಜಿಕಲ್ ಇನ್ನೋವೆಟಿವ್ ಅವಾರ್ಡ್ -2016, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್ ಗ್ರೂಪ್ ಯುವ ವಿಜ್ಞಾನಿ ಪ್ರಶಸ್ತಿ, ಯುಎಸ್‌ಎ ಮತ್ತು ಸಿಂಗಾಪುರದಲ್ಲಿ ಸಮ್ಮೇಳನಗಳಲ್ಲಿ ಭಾಗವಹಿಸಲು ಟ್ರಾವಲ್ ಗ್ರಾಂಟ್ ಅವಾರ್ಡ್ ಹಾಗು ಭಾರತ ಮತ್ತು ಕರ್ನಾಟಕ ಸರ್ಕಾರಗಳಿಂದ ಫೆಲೋಶಿಪ್ ಹಾಗೂ ಸಂಶೋಧನೆ ನಡೆಸಲು ಅನುದಾನಗಳನ್ನು ಪಡೆದಿದ್ದಾರೆ .

ಡಾ, ಪ್ರಸನ್ನ ಅವರ ಮಾರ್ಗದರ್ಶನದಲ್ಲಿ 5 ಪಿ.ಹೆಚ್.ಡಿ ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದಾರೆ ಹಾಗೂ ಅವರು 50 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ವರ್ಷದ ವಿಜ್ಞಾನಿ ಪ್ರಶಸ್ತಿ ಪಡೆದ ಡಾ. ಪ್ರಸನ್ನ ಅವರಿಗೆ ಅವರ ಪತ್ನಿ ಡಾ. ರಶ್ಮಿ ಆರ್. ಎಸ್, ತಾಯಿ ಭಾಗೀರಥಿ. ತಂದೆ ಶಿವರಾಮು ದೊಡ್ಡಕುಂಚೆ ಮಾವ ಆರ್.ಬಿ.ಶಿವಶಂಕರಪ್ಪ ತಹಶಿಲ್ದಾರ್ ಹಾಸನ ಹಾಗೂ ಚಿದಂಬರ ಸಿ.ಕೆ‌‌. ಇವರು  ಸಹಾಯಕ ಅಭಿಯಂತರರು, ಕೆಪಿಟಿಸಿಎಲ್, ಅರಕಲಗೂಡು ಇವರು ಶುಭಾಷಯ ತಿಳಿಸಿದ್ದಾರೆ.

ಹಾಸನ ಜನತೆಯ ಪರವಾಗಿ ಡಾ.ಪ್ರಸನ್ನ ಅವರು ಮತ್ತಷ್ಟು ಸಾಧನೆ ಮಾಡಲೆಂದು ಶುಭ ಹಾರೈಸೋಣ !!

ಅಭಿನಂದನೆಗಳು 

LEAVE A REPLY

Please enter your comment!
Please enter your name here