ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ರಾಜ್ಯದಲ್ಲೇ ದ್ವಿತೀಯ ರ‍್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದೆ

0

ಹಾಸನ / ಬೆಂಗಳೂರು : ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ (ABARK) ಅನುಷ್ಠಾನ : ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ರಾಜ್ಯದಲ್ಲೇ ದ್ವಿತೀಯ ರ‍್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದೆ

ಅಂತೆಯೇ !!
ಮೊದಲ ಸ್ಥಾನ : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ


ಮೂರನೇ ಸ್ಥಾನ :  ಮೈಸೂರಿನ ಕೆ.ಆರ್.ಆಸ್ಪತ್ರೆ

ಮೊದಲ ಸ್ಥಾನ ಪಡೆದ ಹುಬ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 2,000 ಹಾಸಿಗೆಗಳಿದ್ದರೆ , , ಮೂರನೇ ಸ್ಥಾನದಲ್ಲಿರೋ ಮೈಸೂರಿನಲ್ಲಿ 1,500 ಹಾಸಿಗೆ ಗಳ ವ್ಯವಸ್ಥೆ ಇದೆ  : ಹಾಸನದ ಹಿಮ್ಸ್‌ನಲ್ಲಿ 700 ಹಾಸಿಗೆಗಳಿವೆ , ಇಷ್ಟಿದ್ದರೂ ಅತಿ ಹೆಚ್ಚು ರೋಗಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅಡಿ ಚಿಕಿತ್ಸೆ ನೀಡುವ ಮೂಲಕ ಜನಮೆಚ್ಚುವ ಸೇವೆ ಸಲ್ಲಿಸಿರೋದು ಅಭಿನಂದಿಸುವಂತಹ ವಿಷಯ!

3,075 ಕೋವಿಡ್ ಪೀಡಿತರಿಗೆ, 1,794 ಕೋವಿಡೇತರ ರೋಗಿಗಳು ಸೇರಿದಂತೆ 4,869 ರೋಗಿಗಳಿಗೆ ಕಳೆದ ನಾಲ್ಕೇ ತಿಂಗಳಲ್ಲಿ ಚಿಕಿತ್ಸೆ ನೀಡಿ ಗಮನ‌ ಸೆಳೆದಿದೆ

” ಈ ಹಿಂದೆ ಸಂಸ್ಥೆಯ ವಿದ್ಯಾರ್ಥಿಗಳು ಹೋಂ ಐಸೋಲೇಶನ್‌ನಲ್ಲಿ ಇರುವವರ ಕೌನ್ಸೆಲಿಂಗ್‌ನಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರು. ಹಿಮ್ಸ್‌ಗೆ ಸಿಕ್ಕಿರುವ ಈ ರ‍್ಯಾಂಕ್‌ನಿಂದ ಅನೇಕ ಅನುಕೂಲಗಳಾಗಿವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ಹಾಗೂ ನಾನಾ ರೀತಿಯ ಉಪಯೋಗ ಕಲ್ಪಿಸಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣವೂ ಸಾಧ್ಯವಾಗಿದೆ. ಹೀಗೆ ಲಭ್ಯವಾದ ಅನುದಾನವನ್ನು ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬಹುದಾಗಿದೆ ” – ಡಾ.ಬಿ.ಸಿ.ರವಿಕುಮಾರ್ (HIMS ನಿರ್ದೇಶಕ)

LEAVE A REPLY

Please enter your comment!
Please enter your name here