ಹೊಳೆನರಸೀಪುರ :
ಜನನ ಮತ್ತು ಮರಣ ಪ್ರಮಾಣ ಪತ್ರದ ತಿದ್ದುಪಡಿ ವಿರೋಧಿಸಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ.
ಕರ್ನಾಟಕ ಸರ್ಕಾರವು ದಿನಾಂಕ 18.07.2022 ರಲ್ಲಿ ಜನನ ಮತ್ತು ಮರಣ ಕಾಯ್ದೆಗೆ ತಿದ್ದುಪಡಿ ತಂದು ಜನನ ಮತ್ತು ಮರಣ ವಿಳಂಬ ನೊಂದಣಿ ಅಧಿಕಾರ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದ ವಿಭಾಗ ನ್ಯಾಯಾಲಯಕ್ಕೆ ಅಷ್ಟೋತ್ತರ ಮಾಡಿರುವುದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಅಲ್ಲದೆ ಸದರಿ ಉಪ ವಿಭಾಗ ಅಧಿಕಾರಿಗಳು ಜಿಲ್ಲೆಯ ತಾಲೂಕುಗಳಿಗೆ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ವಿಚಾರಿಸಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದೇ ಅಲ್ಲದೆ ಈಗಿರುವ ರವಿನ್ಯೂ ಪ್ರಕರಣಗಳು ಸಾಕಷ್ಟು ಮೂರರಿಂದ ನಾಲ್ಕು ತಿಂಗಳು ಇಯರಿಂಗ್ ದಿನಾಂಕ ನೀಡಿದ್ದು ಹೀಗಿರುವಾಗ ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕಾನೂನು ಭಾಹಿರವಾಗಿದೆ. ಆದುದರಿಂದ ಕರ್ನಾಟಕ ಸರ್ಕಾರ ತಕ್ಷಣ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿಯನ್ನು ಪಡೆಯಲು ಹಿಂಪಡೆಯುವಂತೆ ಹಾಗೂ ಈಗಿರುವ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಹೊಳೆನರಸೀಪುರ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Home Hassan Taluks Holenarasipura ಜನನ ಮತ್ತು ಮರಣ ಪ್ರಮಾಣ ಪತ್ರದ ತಿದ್ದುಪಡಿ ವಿರೋಧಿಸಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ