86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ , ಹಾಸನ

0

ಹಾಸನ ಫೆ.20 (ಹಾಸನ್_ನ್ಯೂಸ್ !,  ಕನ್ನಡಿಗರ  ಮನೆಗಳಲ್ಲಿ ಕನ್ನಡ ಮರೆಯಾಗಬಾರದು  ಇನ್ನಷ್ಟು ಬಳಕೆಯಾಗಬೇಕು  ಪ್ರತಿಯೊಬ್ಬರ  ಮೊಬೈಲ್‍ನಲ್ಲಿ ಹಾಗೂ  ಎಲ್ಲಾ ಆಡಳಿತದಲ್ಲಿಯೂ ಸಹ  ಕನ್ನಡ ವಿಜೃಂಬಿಸಬೇಕು ಎಂದು  86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡ ತಿಳಿಸಿದ್ದಾರೆ.

      ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಕನ್ನಡ  ಸಾಹಿತ್ಯ ಪರಿಷತ್ತಿನ ಆವರಣದಲ್ಲಿಂದು  ಡಾ.ಎಸ್. ಕೆ. ಕರೀಂಖಾನ್ ವೇದಿಕೆಯಲ್ಲಿ ನಡೆದ ಹಾಸನ ಜಿಲ್ಲಾ  19 ನೆಯ ಕನ್ನಡ  ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡದಂತಹ ಸುಂದರವಾದ ಲಿಪಿ ಬೇರೆ ಯಾವ ಭಾಷೆಯಲ್ಲೂ ಇಲ್ಲ ಕನ್ನಡ ಬಾಷೆಯನ್ನೂ ಲಿಪಿಗಳ ರಾಣಿ ಎಂದೆ ಕರೆಯುತ್ತಾರೆ  ಎಂದರು.

   ಕಾವ್ಯ ಎಂದರೇ ಕಡಿಮೆ ಪದಗಳಲ್ಲಿ ಹೇಳುವಂತದ್ದು, ಸಾಹಿತ್ಯ ಎಂದರೇ ಜನರ ಪ್ರತಿಬಿಂಬವಾಗಿದೆ ಕುವೆಂಪುರವರಿಗೆ ಗೊತ್ತಿರುವ ಹೂವಗಳ ಹೆಸರು ಬೇರೆ ಯಾವ ಕವಿಗಳಿಗೂ ಗೊತ್ತಿರಲಿಲ್ಲ  ಕನ್ನಡ ನಾಡಿನಲ್ಲೆ ಕನ್ನಡ ಪರಕೀಯವಾಗುತಿದೆ ರಕ್ಷಣೆಗೆ ಕನ್ನಡಿಗರು ಮುಂದಾಗಬೇಕು ಎಂದರು.

ಕನ್ನಡ ನಾಡಿನಲ್ಲಿ ಕನ್ನಡೇತರಿಗೆ ಉದ್ಯೋಗ ಸುಲಭವಾಗಿ ಸಿಗುತ್ತದೆ ಕನ್ನಡದವರಿಗೆ ಸಹ ಹೆಚ್ಚಿನ ಉದ್ಯೋಗ ಸಿಗುವಾಂತಗಬೇಕು. ಬೇರೆ  ರಾಜ್ಯ ಮತ್ತು ದೇಶದಲ್ಲಿ  ಬೇರೆ ದೇಶಕ್ಕೆ ಹೋದರೆ ಸ್ಥಳೀಯ ಭಾಷೆ ಕಲಿಯಲೇಬೇಕೆಂಬ ನಿಯಮವಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಜಾರಿಯಾಗಬೇಕು ಎಂದು ಹೇಳಿದರು. ದೇಶ ಸುತ್ತಿದ ಸಾಹಿತಿಗಳಿಗೂ ಮತ್ತು ಮನೆಯಲ್ಲೆ ಕುಳಿತು ಕೋಶ ಓದಿ  ಬರೆಯುವ ಸಾಹಿತಿಗಳಿಗೂ ವ್ಯತ್ಯಾಸವಿದೆ ಎಂದು ಹೇಳಿದರು .

ಇಂದು ಕನ್ನಡ ಶಾಲೆ  ಕಡಿಮೆಯಾಗಲು ಖಾಸಗಿ ಶಾಲೆಗಳು ಕಾರಣ, ಬಡ-ಬಲ್ಲಿದ ಎನ್ನದೆ ಪ್ರತಿಯೊಬ್ಬರಿಗೂ  ಏಕರೂಪ ಶಿಕ್ಷಣ ಸಿಗುವಂತಾಗಬೇಕು  ಎಂದರು.
ಹಾಸನ ಜಿಲ್ಲಾ   19 ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ  ಮೇಟಿಕೆರೆ ಹಿರಿಯಣ್ಣ ಸಮ್ಮೇಳನಾಧ್ಯಕ್ಷರ ನುಡಿ ನುಡಿದ ಅವರು ಇಂದು ಓದುವ ಸಮಯವನ್ನು ಮೊಬೈಲ್ ಮತ್ತು ಟೀವಿ ಮಾಧ್ಯಮಗಳು ಕಸಿದುಕೊಂಡಿವೆ ಎಂದರಲ್ಲದೆ ಯುವ ಜನತೆ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡು ಓದುವಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.  

      ಸಮ್ಮೇಳನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ರವಿನಾಕಲಗೂಡು, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾದ ಶ್ರೀ ವಿಜಯ, ಜನತಾ ಮಾದ್ಯಮಾ ಪತ್ರಿಕೆಯ ಸಂಪಾದಕರಾದ ಆರ್. ಪಿ ವೆಂಕಟೇಶ್ ಮೂರ್ತಿ, ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚನ್ನಗೌಡ, ನಿಕಟ ಸಮಗ ಸಂಸ್ಥೆಗಳ ಪ್ರತಿನಿಧಿ ಶೇಖರ್ ಗೌಡ ಮಾಲಿಪಾಟೀಲ್,  ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹಾಂತಪ್ಪ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here