ಹಾಸನ ಜಿಲ್ಲಾಧಿಕಾರಿ ಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ !! ಸಕಲೇಶಪುರ ತಾಲ್ಲೂಕಿನ ಹೆತ್ತೂರಿನ ಗ್ರಾಮದ ವತಿಯಿಂದ ಅಭೂತಪೂರ್ವ ಸ್ಪಂದನೆ !!

0

ಹಾಸನ ಫೆ.(ಹಾಸನ್_ನ್ಯೂಸ್ !, ಜನಸಾಮಾನ್ಯರ  ಅಲೆದಾಟ ತಪ್ಪಿಸಿ ಅವರ ಕುಂದು ಕೊರತೆ ಆಲಿಸಿ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದೊಂದು  ಉದಾಹರಣೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್  ಹೇಳಿದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೆತ್ತೂರು ಗ್ರಾಮದ ಸಮುದಾಯ ಭವನದಲ್ಲಿಂದು ಏರ್ಪಡಿಸಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಅವರು  ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ತೆರಳಿ ಸೇವೆ ಒದಗಿಸುವುದು ಕಾರ್ಯಕ್ರಮದ ಮೂಲ ಉದ್ದೇಶ ಮೂಲ ಎಂದರು.

ಆದಷ್ಟು ಸಮಸ್ಯೆಗಳನ್ನು ಇಂದೇ ಬಗೆ ಹರಿಸಲಾಗುವುದು. ಆದರೆ ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಸಮಯ ಅಗತ್ಯ ಇದ್ದಲ್ಲಿ ಅದನ್ನು ಕಾಲಮಿತಿಯೊಳಗೆ  ಬಗೆಹರಿಸಲಾಗುವುದು ಪೌತಿಖಾತೆ ಬದಲಾವಣೆ, ಪಿಂಚಣಿ ಸಮಸ್ಯೆ, ಪಡಿತರ ಕಾರ್ಡ್ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಿ ಪರಿಹರಿಸಲಾಗುವುದು ಎಂದು  ಜಿಲ್ಲಾಧಿಕಾರಿ ಹೇಳಿದರು.

ಬಗರ್ ಹುಕುಂ ಸಮಿತಿ ರಚನೆಯಾಗಿದೆ. ಆದಷ್ಟು ಬೇಗ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಪ್ರತಿ ತಿಂಗಳು ಕನಿಷ್ಠ ನಾಲ್ಕು ಸಭೆ ನಡೆಸಲು ಶಾಸಕರನ್ನು ಕೋರಲಾಗಿದೆ  ತಿಳಿಸಲಾಗಿದೆ ಎಂದು ತಿಳಿಸಿದರು.

ಹೆತ್ತೂರು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದೆ ಅಗತ್ಯ ಇದ್ದರೆ ಇನ್ನೂ ಒದಗಿಸಲಾಗುವುದು, ವಸತಿ ರಹಿತರಿಗೆ ನಿವೇಶ ಒದಗಿಸುವುದು, ಒತ್ತುವರಿ ತೆರವು, ಪೋಡಿ ಪ್ರಕರಣ ಮುಕ್ತಾಯ ಗೊಳಿಸಲಾಗುವುದು ಎಂದರು.

ಜನರ ಸಮಸ್ಯೆ ಅರಿತು ಸರ್ಕಾರದ ಯೋಜನೆಗಳ ಬಗ್ಗೆಯೂ ಅರಿವು ಮಾಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಜಿಲ್ಲಾಧಿಕಾರಿ  ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ  ಜನರ ಸಮಸ್ಯೆ ಸ್ಥಳೀಯವಾಗಿಯೇ ಬಗೆ ಹರಿಸಿಕೊಡಬೇಕು ಎಂಬುದು ಸರ್ಕಾರದ ಆಶಯ ಇದೊಂದು  ನಿರಂತರವಾದ  ಪ್ರಕ್ರಿಯೆ  ಇಲಾಖೆಗಳಲ್ಲಿ ಸೂಕ್ತ ಸ್ಪಂದನೆ ಸಿಗದೆ ಇರಬಹುದು ಆದರೆ ಈ ಕಾರ್ಯಕ್ರಮದಲ್ಲಿ  ಎಲ್ಲವನ್ನೂ  ಸಮಾಧಾನವಾಗಿ ಆಲಿಸಲಾಗುವುದು. ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಆದಷ್ಟು ಬೇಗ ಜಾಗ ಒದಗಿಸಲಾಗುವುದು ಎಂದರು

ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಪ್ರಾಸ್ತಾವಿಕವಾಗಿ  ಮಾತನಾಡಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ  ಕಾರ್ಯಕ್ರಮದ ಸ್ವರೂಪ ಉದ್ದೇಶಗಳ ಬಗ್ಗೆ ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ, ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕೆ ಉಪ ನಿರ್ದೇಶಕರಾದ ಯೋಗೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಮರಿಜ್ವಿ ಸುದರ್ಶನ್ ತಹಶಿಲ್ದಾರ್ ಜೈ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಮತ್ತಿತರರು ಹಾಜರಿದ್ದರು

ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಅವರೂ ಇದೇ ವೇಳೆ  ಜನರಿಂದ ಪಹಣಿ, ಪಿಂಚಣಿ ಸೌಲಭ್ಯ  ವೃದ್ದಾಪ್ತಿ ವೇತನ,  ಇನ್ನಿತರ ಖಾತೆಗಳಿಗೆ  ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here