ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ ಚೊಚ್ಚಲ ಬಜೆಟ್‌ ಹಾಸನ ಜಿಲ್ಲೆಗೆ ಸಿಕ್ಕಿದ್ದೇನು

0

ಇರೋ ವಿಷಯ ಹೇಳಬೇಕು ಅಂದರೆ ಬಜೆಟ್ ಮಂಡನೆಗೆ ಮೊದಲು ಹಾಸನ ಜಿಲ್ಲೆಯ ಜನರು ನಿರೀಕ್ಷಿಸಿದ್ದ ಯಾವ ಒಂದು ಯೋಜನೆಗಳೂ ಪ್ರಸ್ತಾಪವಾಗಿಲ್ಲ , ಹಾಸನ ಜಿಲ್ಲೆಯ ಮಟ್ಟಿಗೆ ತೀರಾ ನಿರಾಶಾದಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ , ಬನ್ನಿ ಉದಾಹರಣೆ ಸಮೇತ ತಿಳಿಸುತ್ತೇವೆ

• ಕಾಡಾನೆ ಹಾವಳಿಯಿಂದ ನಲುಗಿರುವ ಕಾಫಿ, ಭತ್ತ, ಮೆಣಸು, ಅಡಿಕೆ ಬೆಳೆಗಾರರ ನಿರೀಕ್ಷೆ , ಆನೆ ಕಾರಿಡಾರ್‌, ಕರಡಿಧಾಮ ಸ್ಥಾಪನೆ , ತೆಂಗು, ಕಾಫಿಗೆ ಪ್ರೋತ್ಸಾಹದಾಯಕ ಯೋಜನೆ ಹಾಗೂ ಆಲೂಗಡ್ಡೆ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ಧನ ,  ಯಗಚಿ ಮುಂಭಾಗ ಸುಂದರ ಉದ್ಯಾನ ಹಾಗೂ ಯಗಚಿ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಪ್ರವಾಸೋದ್ಯಮಕ್ಕೆ ಒತ್ತು ಸಿಗುತ್ತಿತ್ತು ಸಿಗಲಿಲ್ಲ , ಅರಸೀಕೆರೆಯ ನಾಗಾಪುರದಲ್ಲಿ‌ನೂರಕ್ಕು‌ ಹೆಚ್ಚು ಕರಡಿ ಇರುವ ಸ್ಥಳದಲ್ಲಿ‌ ಕರಡಿಧಾಮ‌‌ಕ್ಕೆ ಅನುಮೋದನೆ ನೀಡಬಹುದಿತ್ತು‌ ನೀಡಿಲ್ಲ

ಕರ್ನಾಟಕದ ಇತರೆ ಜಿಲ್ಲೆ ಸೇರಿ , ಹಾಸನಕ್ಕು‌ಸಿಕ್ಕಿದ್ದಿಷ್ಟೇ !!

• ಹಾಸನ ಸೇರಿ ಮೂರು ಜಿಲ್ಲೆಗಳಲ್ಲಿ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ₹ ಮೀಸಲು
• ಚಿಕ್ಕಮಗಳೂರು– ಬೇಲೂರು ಹಾಗೂ ಬೇಲೂರು–ಹಾಸನ ರೈಲು ಮಾರ್ಗ ಯೋಜನೆಗೆ ಚಾಲನೆ ಇದು ಹಳೆಯ ಯೋಜನೆ
• ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ ಕರ್ನಾಟಕದ 400 ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ 2 ಸಾವಿರ ₹ ಪ್ರೋತ್ಸಾಹ ಧನ ಇದರಿಂದ ಹಾಸನ ಜಿಲ್ಲೆಯ 72 ಪ್ರವಾಸಿ ಮಾರ್ಗದರ್ಶಿಗಳಿಗೆ(ಗೈಡ್) ಅನುಕೂಲ
• ಹೊರಜಿಲ್ಲೆಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಸಮಗ್ರ ಯೋಜನೆಗೆ 3000 ಕೋಟಿ₹ ಅನುದಾನ (ಇನ್ನಾದರೂ ವೇಗ ಪಡೆಯುತ್ತ ಈ ಯೋಜನೆ ಕಾದುನೋಡಬೇಕು)
• ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ವಿಶ್ವವಿದ್ಯಾಲಯ ವನ್ನು ಇತರೆ ಜಿಲ್ಲೆ ಸೇರಿದಂತೆ ಹಾಸನ ಜಿಲ್ಲೆಯಲ್ಲೂ ಸ್ಥಾಪನೆ
• ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಮುಂಭಾಗ ಸುಮಾರು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೆಆರ್‌ಎಸ್‌ ಬೃಂದಾವನ (ಇದು ಹಳೆಯ ವಿಷಯ ಆದರೆ ಇನ್ನು ಕಾರ್ಯಯೋಜನೆ ಬರಬೇಕಿದೆ)

LEAVE A REPLY

Please enter your comment!
Please enter your name here