ಕಾಮಿಡಿ ಗ್ಯಾಂಗ್‌ನಲ್ಲಿ ಹಾಸನದ ಮಡೆನೂರು ಮನು ತಂಡ ಫೈನಲ್ ವಿಜೇತ

0

ಹಾಸನ: ಕಳೆದ ಹಲವು ದಿವಸಗಳಿಂದ ನಡೆಯುತ್ತಿರುವ ಕಾಮಿಡಿ ಗ್ಯಾಂಗ್ ಗ್ರಾಂಡ್ ಫೈನಲ್ ನಲ್ಲಿ ಹಾಸನದ ಮಡೆನೂರು ಮನು ನಾಯಕತ್ವದ ಎಲ್.ಕೆ.ಬಿ. ತಂಡವು ಜಯಮಾಲೆ ಗಳಿಸಿ ವಿಜಯ ಸಂಭ್ರಮಿಸಿದರು

ಸ್ಟಾರ್ ಸುವರ್ಣ ಖಾಸಗೀ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದಲ್ಲಿ ಯಾರು ಕಫ್ ಗೆಲ್ಲಬಹುದು ಎನ್ನುವ ಕಾತುರ ಮನೆ ಮನೆಯಲ್ಲೂ ಕುತುಹಲ ಮೂಡಿಸಿತ್ತು. ಆದರೇ ಮಡೆನೂರು ಮನು ಅವರ ತಂಡದ ನಟನೆಗೆ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಾಡಿಸಿದರು. ಅಂತಿಮವಾಗಿ ವಿನ್ನರ್ ಎಂದು ಘೋಷಣೆ ಮಾಡಿದರು. ಈ ತಂಡಕ್ಕೆ 7 ಲಕ್ಷ ನಗದು ಬಹುಮಾನ ಮತ್ತು ಕಫ್ ನೀಡಿ ಗೌರವಿಸಿದರು. ಇದೆ ವೇಳೆ ಮಡೆನೂರು ಮನು ಅವರು ಮಾಧ್ಯಮದೊಂದಿಗೆ ದೂರವಾಣಿ ಕರೆ ಮಾಡಿ ಸಂತೋಷವನ್ನು ಹಂಚಿಕೊಂಡರು. ಇದೆ ವೇಳೆ ಮುಖ್ಯಮಂತ್ರಿ ಚಂದ್ರ, ಕುರಿ ಪ್ರತಾಪ್ ಇತರರು ಇದ್ದರು

LEAVE A REPLY

Please enter your comment!
Please enter your name here