ಸಂಸದೆ ಮನೇಕಾ ಗಾಂಧಿ ಗಂಭೀರ ಆರೋಪಕ್ಕೆ ಪ್ರಜ್ವಲ್ ರೇವಣ್ಣ ಅವರ ಮುಂದಿನ ನಡೆ ಏನು

0

ಹಾಸನ / ಬೆಂಗಳೂರು: ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಪತ್ರ ಬರೆದಿದ್ದು ಪತ್ರದಲ್ಲಿ ;

” 2021 ರಲ್ಲಿ ಹಾಸನದ ರೈತನೊಬ್ಬ ಆನೆಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿ ದಂತ ತೆಗೆದು ಹೂತು ಹಾಕಿದ್ದರು. ಅಲ್ಲಿ ಜೆಸಿಬಿಯಿಂದ ಅಗೆದು ನೋಡಿದಾಗ 10 ಅಡಿಯಲ್ಲಿ ಆನೆಯ ದೇಹ ಪತ್ತೆಯಾಗಿತ್ತು , ಆನೆ ಕೊಂದ ಆರೋಪಿಗಳು ಜೆಡಿಎಸ್ ಬೆಂಬಲಿಗರಾಗಿದ್ದು ಪ್ರಕರಣವನ್ನು ಮುಚ್ಚಿ ಹಾಕುವಂತೆ ಸ್ಥಳೀಯ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ ” ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಸದ್ಯ ಹಾಸನ RFO ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಮನೇಕಾ ಗಾಂಧಿ ಉಲ್ಲೇಖ ಮಾಡಿದ್ದು. ಮಾತ್ರವಲ್ಲದೆ ಹಾಸನ ರೇಂಜ್ ಆಫೀಸರ್ ಬಗ್ಗೆ ಸೂಕ್ತ ತನಿಖೆ ಮಾಡಲು ಮನವಿ ಕೂಡ ಮಾಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಅರಣ್ಯ ಸಿಬ್ಬಂದಿ ತಪ್ಪಿತಸ್ಥರು ಎಸ್ಕೆಪ್ ಆಗಲು ಸಹಾಯವಾಗುವಂತೆ ಬೇರೆ ಇಬ್ಬರನ್ನು ಬಂಧಿಸಿದ್ದಾರೆ, ಆರೋಪಿಯು ಎರಡು ವಿಭಿನ್ನ ಸಂಸ್ಥೆಗಳಿಂದ ಕಾಮಗಾರಿಗಳನ್ನು ನಕಲು ಮಾಡಿರುವುದಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಜಾಮೀನು ಪಡೆದಿದ್ದಾರೆ. RFO ಹಾಸನ ಕಾನೂನು ಪಾಲಿಸುತ್ತಿಲ್ಲ ಎಂದು ಮನೇಕಾ ಆರೋಪಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮುಂದಿನ ನಡೆ ಏನು ಇಂದು ಕಾದುನೋಡಬೇಕಿದೆ .

LEAVE A REPLY

Please enter your comment!
Please enter your name here