ಅರಕಲಗೂಡು ಸ್ಟೇಟ್ ಲೆವೆಲ್ ವಾಲಿಬಾಲ್ ಟೂರ್ನಮೆಂಟ್ ರಾಕಿ ಮೆಮೋರಿಯಲ್ ಕಪ್ 🏆2021 ಎ.ಎಸ್.ಸಿ. (ಇಂಡಿಯನ್ ಆರ್ಮಿ)ತಂಡ ಫೈನಲ್ ನಲ್ಲಿ ಗೆಲುವು

0

ಇಂಡಿಯನ್ ಆರ್ಮಿಯಲ್ಲಿ ಅಕಾಲಿಕ ಮರಣ ಹೊಂದಿದ ರಾಕಿ ಅವರ ಸ್ಮರಣಾರ್ಥವಾಗಿ ಇತ್ತೀಚೆಗೆ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದ ಸಾರಥ್ಯ ವಹಿಸಿದಂತಹ

ಡಾಕ್ಟರ್ ದಿನೇಶ್ ಕಬ್ಬಳಿಗೆರೆ ಇವರಿಂದ ಅರಕಲಗೂಡು ವಾಲಿಬಾಲ್ ಅಸೋಸಿಯೇಶನ್, ಸದಸ್ಯರು, ಸ್ಪರ್ಧೆಯಲ್ಲಿ ಭಾಗವಹಿಸಿದಂತ ಆಟಗಾರರಿಗೂ, ವಿಜೇತರರಿಗೂ ಹಾಗೂ ವೀಕ್ಷಕರಿಗೆ ಎಲ್ಲರಿಗೂ ಅನಂತ ಅನಂತ ಕೃತಜ್ಞತೆಗಳು., ಅರ್ಪಿಸಿದರು ., ಈ ಪಂದ್ಯಾವಳಿಯಲ್ಲಿ

ಅರಕಲಗೂಡಿನ ASC (INDIAN ARMY) ತಂಡವು ಮೊದಲ ಬಹುಮಾನ 40,000₹ ಮತ್ತು ಟ್ರೋಫಿ ಮುಡಿಗೇರಿಸಿಕೊಂಡರೆ , ದ್ವಿತೀಯ ಸ್ಥಾನ ಪಡೆದ ಅರ್ಷದ್ ಫ್ರೆಂಡ್ಸ್ ತಂಡ 30,000₹ ಮತ್ತು ಟ್ರೋಫಿ ಬಹುಮಾನವಾಗಿ ಪಡೆಯಿತು .,

ತೃತೀಯ ಸ್ಥಾನ ಬೆಂಗಳೂರಿನ ಹಾಸ್ಟೆಲ್ ಬಾಯ್ಸ್ 20,000 ₹ ಹಾಗೂ ಕೊನೆಯದಾಗಿ ನವೀನ್ ಫ್ರೆಂಡ್ಸ್ ತಂಡ 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.,

ಪಂದ್ಯಾವಳಿ ನಡೆಸಲು ಶ್ರಮಪಟ್ಟ organiser ತಂಡ 👇 ದ ಸದಸ್ಯರಾದ ಅವಿನಾಶ್ , ಸುನಿಲ್ , ಸುಚನ್ , ಸುದರ್ಶನ್ , ವಿನಯ್ , ‌ಸೀನ , ಹರ್ಷ ಮತ್ತು ಸ್ನೇಹಿತರಿಗೆ ಆಯೋಜಕ ಡಾ.ದಿನೇಶ್ ಕಬ್ಳಿಗೆರೆ ಅವರು ಕೃತಜ್ಞತೆ ಅರ್ಪಿಸಿ , ಸ್ಥಳೀಯ ಕ್ರೀಡಾಪಟುಗಳಿಗೆ ಇಂತಹ ಪ್ರೋತ್ಸಾಹಕ ಆಯೋಜನಗಳು ಹೆಚ್ಚುವುದರಿಂದ ತಮ್ಮಲ್ಲಿರು ಪ್ರತಿಭೆಗಳಿಗೆ

ಅವಕಾಶ ಮೂಡಿಬರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here